ಜಿಲ್ಲಾ ಸುದ್ದಿ

ಎಸ್ಸೈ ಸೆರೆಗೆ ನಗರ ಪೊಲೀಸರು ಮಧುರೆಗೆ

ಬೆಂಗಳೂರು: ದೊಮ್ಮಲೂರಿನಲ್ಲಿ ನಡುರಸ್ತೆಯಲ್ಲೇ ಮಗಳ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ತಮಿಳುನಾಡು ಎಸ್ಸೈ ರಾಜಾರಾಮ್ ಬಂಧನಕ್ಕೆ ಹಲಸೂರು ಪೊಲೀಸರ ತಂಡವೊಂದು ಶನಿವಾರ ಮಧುರೆಗೆ ತೆರಳಿದೆ.

ಎಸ್ಸೈ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಮಧುರೆ ಹಿರಿಯ ಅಧಿಕಾರಿಗಳಿಗೆ ಘಟನೆ ಬಗ್ಗೆ ವಿವರಿಸಿ ಬಂಧಿಸಲಾಗುವುದು ಎಂದು ಪೂಬಂರ್ವ ವಿಭಾಗ
ಡಿಸಿಪಿ ಸತೀಶ್‍ಕುಮಾರ್ ತಿಳಿಸಿದರು.ನಗರದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಸೂರ್ಯ (25) ಯುವಕನೊಬ್ಬನ ಪ್ರೀತಿಸಿ ಆತನ ಜತೆ ಓಡಾಡುತಿದ್ದಾಳೆಂಬ ಅನುಮಾನ ಹಿನ್ನೆಲೆಯಲ್ಲಿ ಕುಪಿತಗೊಂಡು ತಂದೆ ರಾಜಾರಾಮ್ ದೊಮ್ಮಲೂರಿಗೆ ಬಂದು ಮಗಳು ವಾಸವಿದ್ದ ಹಾಸ್ಟೆಲ್ ಮುಂದೆ ನಡುರಸ್ತೆಯಲ್ಲಿ ಥಳಿಸಿದ್ದ. ಡುಟ್ಟು ಹಿಡಿದು ಎಳೆದಾಡಿದ್ದನ್ನು ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದು ನೋಡಿದ್ದರು. ಕೊನೆಗೆ ಇಬ್ಬರು ಯುವತಿಯರು ಸೂರ್ಯಳನ್ನು ರಕ್ಷಿಸಿ ಪೊಲೀಸ್ ವಶಕ್ಕೆ ನೀಡಿದ್ದರು.

ಹಲಸೂರು ಪೊಲೀಸರು ರಾಜಾ ರಾಮ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, ತಂದೆ ವಿರುದ್ಧ ದೂರು ನೀಡಲು ಯುವತಿ ನಿರಾಕರಿಸಿದ ಕಾರಣಕ್ಕೆ ಬಿಟ್ಟು ಕಳುಹಿಸಿದ್ದರು. ಆದರೆ, ಘಟನೆ ಬಗ್ಗೆ ಟ್ವಿಟರ್ ಸೇರಿದಂತೆ ಸಾಮಾಡಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT