ಕಲಬುರಗಿ: ಪೊಲೀಸ್ ಗುಂಡಿಗೆ ಪೋಲೀಸ್ ಅಧಿಕಾರಿಯೇ ಬಲಿಯಾಗುತ್ತಾರೆ?- - ಇದು ನಮ್ಮ ಕರ್ನಾಟಕದಲ್ಲಿ ಮಾತ್ರ! ಭೂಗತ ಪಾತಕಿ ಮುನ್ನಾ ಬಂಧನ ವೇಳೆ ಕಲಬುರಗಿ ಕಂಡಿದ್ದ ಶೂಟೌಟ್, ಕಾರ್ಯಾಚರಣೆಯಲ್ಲಿ ದಕ್ಷ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ದಾರುಣ ಸಾವಿಗೆ ಸರ್ಕಾರದಿಂದ ಇಂದಿಗೂ ಸ್ಪಷ್ಟ ಮಾಹಿತಿ ಹೊರ ಬಿದ್ದಿಲ್ಲ ಈವರೆಗೆ ಹೇಳಲ್ಪಟ್ಟ ಎಲ್ಲವೂ ಅಸ್ಪಷ್ಟ!
ಪ್ರಕರಣ ನಡೆದು ವರ್ಷ ಕಳೆದರೂ ಬಂಡೆ ನಿಗೂಢ ಸಾವಿನ ಸುತ್ತಲಿನ ಶಂಕೆಗಳ ಕಾರ್ಮೋಡ ಇನ್ನೂ ತಿಳಿಯಾಗಿಲ್ಲ. ಅದನ್ನು ಭೇದಿಸುವ ಆಸಕ್ತಿಯೂ ¸ಸರ್ಕಾರಕ್ಕೆ ಇದ್ದಂತಿಲ್ಲ
ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣದಲ್ಲಿ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ಧ ಪೊಲೀಸರ ತಂಡದಲ್ಲಿ ಸ್ಟೇಷನ್ ಬಜಾರ್ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಒಬ್ಬರಾಗಿದ್ದರು. ಮುನ್ನಾನನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಬಂಡೆ ಅವರ ತಲೆಗೆ ಗುಂಡು ಹೊಕ್ಕುತ್ತದೆ. ಅರೆಜೀವವಾಗಿಯೇ ಬಂಡೆ 10 ದಿನ ಹೈದರಾಬಾದ್ ಆಸ್ಪತ್ರೆಯಲ್ಲಿದ್ದು, ಜ.18ರಂದು ಕೊನೆಯುಸಿರೆಳೆದರು