ಬೆಂಗಳೂರು: ಐಎಎಸ್ ದಕ್ಷ ಅಧಿಕಾರಿ ಡಿ.ಕೆ. ರವಿ ಅನುಮಾನಾಸ್ಪದ ಸಾವಿಗೆ ಕೋಲಾರದ ಜನಪ್ರತಿನಿಧಿಗಳೂ ಕಾರಣವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ಅಲ್ಲದೆ ಈ ಬಗ್ಗೆ ಆಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ.
ಕೋಲಾರದ ಶಾಸಕರಾದ ವರ್ತೂರು ಪ್ರಕಾಶ್ ಕೆಳ ಹಂತದ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಧಮಕಿ ಹಾಕಿರುವ ಧ್ವನಿ ಇದರಲ್ಲಿದ್ದು ವರ್ತೂರು ಅವರಿಗೆ ಸಂಬಂಧಿಸಿದ ಅಕ್ರಮ ಮರಳು ಲಾರಿಗಳನ್ನು ಬಿಡುವಂತೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಅಧಿಕಾರಿ ಡಿಸಿ ಡಿ.ಕೆ.ರವಿ ತುಂಬಾ ಸ್ಟ್ರಿಕ್ಟ್ ಎಂದಿದ್ದರು.
ಸರ್ಕಾರಿ ಅಧಿಕಾರಿ ಡಿ ಸಿ ಅವರ ಆದೇಶದಂತೆ ತಾನು ಕಂಪ್ಲೇಂಟ್ ನೀಡಿದ್ದೇನೆ ಎಂದು ಹೇಳಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವರ್ತೂರು ನನ್ನ ಮಾತು ಕೇಳದಿದ್ದರೆ ಸಸ್ಪೆಂಡ್ ಆಗ್ತೀಯಾ ಮೊದಲು ಕಂಪ್ಲೇಂಟ್ ಮರಳಿ ಪಡೆದು ಲಾರಿಯನ್ನು ವಾಪಾಸ್ ಕಳುಹಿಸು ಡಿ.ಸಿ ಬಗೆಗೆ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದಾರೆ. ಅಲ್ಲದೇ ತನ್ನ ಮಾತು ಕೇಳದಿದ್ದರೆ 5 ಲಕ್ಷ ಹಣ ನೀಡಿ ಲೋಕಾಯುಕ್ತಕ್ಕೆ ಹಿಡಿಸಿ ಕೊಡುತ್ತೇನೆ. ನಿನ್ನ ಜೀವನ ಪರ್ಯಂತ ಅನ್ನವಿಲ್ಲದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.