ಜಿಲ್ಲಾ ಸುದ್ದಿ

ದೇವರೇ ಕಾಪಾಡಬೇಕು! ಪಾದಚಾರಿಗಳಿಗಿಲ್ಲ ಬೆಂಗಳೂರಿನಲ್ಲಿ ಸುರಕ್ಷತೆ

Vishwanath S

ವಿಧಾನಸಭೆ: ಪಾದಚಾರಿಗಳಿಗೆ ಬೆಂಗಳೂರಿನಲ್ಲಿ ಇಲ್ಲ ಸುರಕ್ಷತೆ. ಇದನ್ನು ಸದನದಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದು ಗೃಹಸಚಿವ ಕೆ.ಜೆ.ಜಾರ್ಜ್.

ನಗರದಲ್ಲಿ ಪಾದಚಾರಿಗೆ ಸುರಕ್ಷೆ ನೀಡುವಂತಹ ಯಾವುದೇ ಕಾಮಗಾರಿಗಳು ಇಲ್ಲ. ಅಂತಹ ಕ್ರಮಗಳು ಆಗಿಲ್ಲ. ಸ್ಕೈವಾಕ್, ಬ್ಲಿಂಕರ್ಸ್ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲು ಬಿಬಿಎಂಪಿ, ಬಿಡಿಎಂಪಿಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಅಶ್ವತ್ಥನಾರಾಯಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾದಚಾರಿಗಳ ಸುರಕ್ಷೆ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಚರ್ಚೆ ಮಾಡುತ್ತೇವೆ. ಇದನ್ನು ಬಿಬಿಎಂಪಿ, ಬಿಡಿಎ ಒದಗಿಸಬೇಕು. ಪೊಲೀಸ್ ಇಲಾಖೆಗೆ ಬರುವುದಿಲ್ಲ. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮಾವ ಕ್ರಮ ಕೈಗೊಳ್ಳಲಾಗುತ್ತದೆ ಎಂದು 35 ಅಂಶಗಳನ್ನು ವಿವರಿಸಿದ್ದೇನೆ ಎಂದರು.

ರಸ್ತೆ ಸಂಚಾರದಲ್ಲಿ ಅಪಘಾತ ಎಂದರೆ ಅದರಲ್ಲಿ ಪಾದಚಾರಿಗಳೇ ಹೆಚ್ಚಾಗಿ ಸಾವಿಗೀಡಾಗುತ್ತಾರೆ. ಅವರಿಗೆ ಸುರಕ್ಷತೆ ಇಲ್ಲ ಎಂದರೆ ಹೇಗೆ? ಸ್ಕೈವಾಕ್, ಸಬ್‍ವೇಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.

ಎಲ್ಲಿದ್ದಾನೆ ಭಗವಂತ? ಅವನನ್ನೇನಾದರೂ ನೀವೆಲ್ಲ ಕಂಡಿದ್ರೆ ಆಕಾಶಕ್ಕೇ ಹಾರಿ ಹೋಗಿರುತ್ತಿದ್ರೀ, ಇಲ್ಲಿ ಇರುತ್ತಿರಲಿಲ್ಲ.
- ಸ್ಪೀಕರ್ ಕಾಗೋಡು ತಿಮ್ಮಪ್ಪ
(ಪಾದಚಾರಿಗಳನ್ನು ದೇವರೇ ಕಾಪಾಡಬೇಕು ಎಂದು ಸಿಟಿ ರವಿ ಹೇಳಿದಾಗ)

SCROLL FOR NEXT