ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ನೈಸ್ ರಸ್ತೆಯಲ್ಲಿ ಹೋಗಬೇಕಾ? ಹಾಗಾದ್ರೆ ಹೆಚ್ಚು ಹಣ ಕೊಡಿ

ನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ...

ಬೆಂಗಳೂರು: ನೈಸ್ ರಸ್ತೆಯಲ್ಲಿ ಹೋಗಬೇಕಾ? ಹೆಚ್ಚು ಹಣ ಕೊಡಿ. - ಇದು ಬಿಎಂಟಿಸಿ ಹಳೆಪಾಸುದಾರರಿಗೆ ಹೊಸ ಕಿರಿಕಿರಿ. ನೈಸ್ ರಸ್ತೆ ಮೂಲಕ ಸಂಚರಿಸುವ ಬಿಎಂಟಿಸಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಸ್ತುತ ಯಾವುದೇ ರೀತಿಯ ಪಾಸು ಹೊಂದಿದ್ದಲ್ಲಿ ಟೋಲ್ ದರ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ. ಹೊಸ ಪಾಸ್ ಪಡೆಯುವವರಿಗೆ ಟೋಲ್ ದರ ಒಳಗೊಂಡಂತೆ ಪಾಸ್ ಸಿದ್ಧಪಡಿಸಲಾಗಿದೆ. ಹೊಸ ಪಾಸ್ನಲ್ಲಿ ಈಗಿರುವ ದರಕ್ಕೆ ರು.25 ಸೇರಿಸಿ ಪಾಸ್ ಸಿದ್ಧಪಡಿಸಲಾಗಿದೆ. ಪ್ರಯಾಓಣಿಕರು ಹೊಸ ಪಾಸ್‍ಗಳನ್ನು ಕೊಂಡಲ್ಲಿ ಎರಡೂ ಮಾರ್ಗದಲ್ಲಿ ಹೆಚ್ಚುವರಿ ಹಣ ಪಾವತಿಸುವಂತಿಲ್ಲ. ಹಳೆಯ ಪಾಸ್ ಪಡೆದಲ್ಲಿ ರು.25 ಪಾವತಿಸ ಬೇಕಾಗುತ್ತದೆ. ನೀವು ಮತ್ತೆ ಅದೇ ಮಾರ್ಗದಲ್ಲಿ ವಾಪಾಸ್ ಬಂದಲ್ಲಿ ಮತ್ತೆ ರು.ಯ 25 ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಪ್ರಯಾಣಿಕರು ಒಮ್ಮೆ ಅಥವಾ ಹೆಚ್ಚು ಬಾರಿ ಸಂಚಿರಿಸುವುದಾದರೆ ನಿರ್ವಾಹಕರನ್ನು ಕೇಳಿ ಪಾಸ್ ಪಡೆಯತಕ್ಕದ್ದು ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಹೊಸ ಪಾಸ್‍ಗಳ ದರ (ಟೋಲ್ ದರ ಒಳಗೊಂಡು ಪಾಸಿನ ಮಾದರಿ ದರ ಸಾಮಾನ್ಯ ಸೇವೆಯ ದೈನಂದಿನ ಪಾಸು (ಸಂಸ್ಥೆಯ ಗುರುತಿನ ಚೀಟಿ ಹೊಂದಿರುವವರಿಗೆ) ರು. 95 ದೈನಂದಿನ ಪಾಸು ರು. 100 ವಜ್ರ ಸೇವೆಯ ದೈನಂದಿನ ಪಾಸು ರು. 170 ಸಾಮಾನ್ಯ ಸೇವೆಯ ಮಾಸಿಕ ಪಾಸು ರು. 1900 ವಜ್ರ ಮಾಸಿಕ ಪಾಸು ರು. 3000 ಹಳೆಯ ಪಾಸ್‍ನವರು ಹಣ ನೀಡಿ ಸಂಸ್ಥೆಯು ಈಗಾಗಲೇ ಪರಿಚಯಿಸಿರುವ ದಿನದ ಪಾಸುಗಳಾದ ರು. 65 ಹಾಗೂ ರು. 70 ಗಳನ್ನು ಹೊಂದಿದ ಪ್ರಯಾಣಿಕರು ಮತ್ತು ಮಾಸಿಕ ಪಾಸುಗಳಾದ ಕೆಂಪು ಹಲಗೆ ಮಾಸಿಕ ಪಾಸು ರು. 1,050, ಹಿರಿಯ ನಾಗರೀಕರ ಮಾಸಿಕ ಪಾಸು ರು. 945, ಗ್ರಾಮಾಂತರ ಸೇವೆಯ ಮಾಸಿಕ ಪಾಸು ರು. 1,300, ವಜ್ರ ಮಾಸಿಕ ಪಾಸು ರು. 2,250 ಮತ್ತು ರು. 2,300 ಹಾಗೂ ವಾಯುವಜ್ರ ಸೇವೆಯ ಮಾಸಿಕ ಪಾಸು ರು. 3,350 ಹೊಂದಿದ ಪ್ರಯಾಣಿಕರೂ ನೈಸ್ ರಸ್ತೆಯಲ್ಲಿ ಸಂಚರಿಸಬಹುದು. ಆದರೆ, ಅವರು ಹೆಚ್ಚುವರಿಯಾಗಿ ರು.25 ಪಾವತಿಸಿ ಸಂಚರಿಸಬೇಕಾಗಿದೆ. ಈ ಪದ್ಧತಿ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT