ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಆನ್‍ಲೈನ್‍ನಲ್ಲೇ ಮಾಲಿನ್ಯ ಮಾಹಿತಿ

ಕೈಗಾರಿಕಾ ಮಾಲಿನ್ಯ ಎಷ್ಟಿದೆ ಎಂದು ತಿಳಿಯೋದು, ನಿಯಂತ್ರಣ ಮಾಡೋದು ಈಗ ಸರಾಗ. ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಆನ್ ಲೈನ್ ವ್ಯವಸ್ಥೆ. ರಾಜ್ಯದ ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯಗಳ ಮಾಲಿನ್ಯ ಪ್ರಮಾಣವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ...

ಬೆಂಗಳೂರು: ಕೈಗಾರಿಕಾ ಮಾಲಿನ್ಯ ಎಷ್ಟಿದೆ ಎಂದು ತಿಳಿಯೋದು, ನಿಯಂತ್ರಣ ಮಾಡೋದು ಈಗ ಸರಾಗ. ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಆನ್ ಲೈನ್ ವ್ಯವಸ್ಥೆ. ರಾಜ್ಯದ ಕೈಗಾರಿಕೆಗಳು ಹೊರಸೂಸುವ ತ್ಯಾಜ್ಯಗಳ ಮಾಲಿನ್ಯ ಪ್ರಮಾಣವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆನ್‍ಲೈನ್‍ನಲ್ಲೇ ನಿಯಂತ್ರಿಸಲಿದೆ.

ಇದುವರೆಗೂ ಮಂಡಳಿಯು ಮಾಲಿನ್ಯದ ಪ್ರಮಾಣವನ್ನು ಆಯಾ ಸಂಸ್ಥೆ ಮತ್ತು ಸಿಬ್ಬಂದಿ ವರ್ಗದಿಂದ ಮಾಹಿತಿ ಕಲೆ ಹಾಕುತ್ತಿತ್ತು. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿತ್ತು ಎಂಬ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದಿದ್ದಾರೆ ಮಂಡಳಿಯ ಅಧ್ಯಕ್ಷ ಡಾ.ವಾಮನ್ ಆಚಾರ್ಯ. ಮಂಡಳಿಯ ಕೈಗಾರಿಕೆಗಳ ಮಾಲಿನ್ಯದ ಪ್ರಮಾಣವನ್ನು ಸರಿಯಾದ ಸಮಯಕ್ಕೆ ಗಮನಿಸುವುದು. ಅವುಗಳ ಮೇಲೆ ನಿಗಾ ಇಡಲು ಸಹಾಯವಾಗುತ್ತದೆ. ಕೈಗಾರಿಕೆಗಳಿಗೆ ನೀಡುವ ಪರವಾನಗಿ 5 ವರ್ಷಗಳಿಗೆ ವಿಸ್ತರಿಸಿದ ಬೆನ್ನಲ್ಲೇ ಮಾಲಿನ್ಯ ಪ್ರಮಾಣವನ್ನು ನಿತ್ಯ ಗಮನಿಸಲು ಈ ವ್ಯವಸ್ಥೆ ತರಲಾಗಿದೆ. ಕಿಯಾನಿಕ್ಸ್ ಸಹಕಾರದೊಂದಿಗೆ ಈ ತಂತ್ರಜ್ಞಾನ ರೂಪಿಸಿದ್ದು, ಮಾಲಿನ್ಯ ಪ್ರಮಾಣ ಗಮನಿಸಲು ಮಂಡಳಿಯ ಮುಖ್ಯ ಕಚೇರಿಯಲ್ಲಿ ಒಂದು ದೊಡ್ಡ ಕಂಪ್ಯೂಟರ್ ಪರದೆಯನ್ನು ಸ್ಥಾಪಿಸಲಾಗಿದೆ.

ಕೀಟನಾಶಕ, ಔಷಧ, ತಿರುಳು ಮತ್ತು ಕಾಗದ, ಸತು, ತಾಮ್ರ, ಅಲ್ಯುಮಿನಿಯಂ, ಟೈ-ಡೈ, ಕ್ಲೊರೈಡ್, ಸಕ್ಕರೆ, ಡಿಸ್ಟಿಲರಿ, ಟ್ಯಾನರಿ, ವಿದ್ಯುತ್, ಸಿಮೆಂಟ್, ರಸಗೊಬ್ಬರ, ಉಕ್ಕು ಮತ್ತು ಕಬ್ಬಿಣ, ತೈಲ ಸಂಸ್ಕರಣೆ, ಪೆಟ್ರೋಕೆಮಿಕಲ್ ರಂಗ ಸೇರಿದಂತೆ ರಾಜ್ಯದ ಒಟ್ಟು 271 ಉದ್ಯಮಗಳನ್ನು ಆನ್‍ಲೈನ್ ವ್ಯಾಪ್ತಿಗೆ ತರಲಾಗಿದೆ.ಮಾಹಿತಿಯನ್ನು ಆಯಾ ಉದ್ಯಮಗಳೇ ಮಾಡಬೇಕು. ಇದಕ್ಕೆ ತಂತ್ರಜ್ಞಾನದ ನೆರವನ್ನು ಮಂಡಳಿ ಒದಗಿಸುತ್ತದೆ. ಈ ವ್ಯವಸ್ಥೆಯಲ್ಲಿ ತಾಜ್ಯ ಹೊರಸೂಸುವಿಕೆಯನ್ನು ದಿನದ 24 ಗಂಟೆಯೂ ಗಮನಿಸಬಹುದು. ಇಲ್ಲಿ ಯಾವುದೇ ಮಾಲಿನ್ಯದ ಮಿತಿಯು ಸೂಚಿತ ಮಟ್ಟಕ್ಕಿಂತ ಶೇಕಡಾ 10ಕ್ಕಿಂತ ಹೆಚ್ಚಾಗಿರುವುದು ಕಂಡುಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುವುದು. ಆನ್‍ಲೈನ್‍ನಲ್ಲಿ ಸಂಗ್ರಹಿಸಿದ ದತ್ತಾಂಶ ವಿಶ್ಲೇಷಿಸಿ, ಕ್ರಮ ಕೈಗೊಳ್ಳಲು ಪ್ರತ್ಯೇಕ ಏರ್‍ಕೇರ್ ಕೇಂದ್ರ ರಚಿಸಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಕ್ಷೇತ್ರ ಮತ್ತು ಭದ್ರಾವತಿಯನ್ನು ತೀವ್ರ ಮಾಲಿನ್ಯದ ಸ್ಥಳಗಳೆಂದು ಗುರುತಿಸಲಾಗಿದೆ. ಅಲ್ಲದೆ ತುಂಗಭದ್ರಾ ನದಿ (ಹರಿಹರ), ಭದ್ರಾ ನದಿ, ಹಲಸೂರು ಕೆರೆ, ಹೆಬ್ಬಳ್ಳ ಕಣಿವೆ (ಮಂಡ್ಯ) ನದಿಗಳನ್ನೂ ತೀವ್ರ ಮಾಲಿನ್ಯದ ತಟಗಳಾಗಿ ಕೇಂದ್ರವು ಗುರುತಿಸಿದ್ದು ಇಲ್ಲಿಯೂ ಮಾಲಿನ್ಯನಿಗಾ ಇಟ್ಟು ಆನ್‍ಲೈನ್ ಮಾಹಿತಿ ಸಂಗ್ರಹಣೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT