ಜಿಲ್ಲಾ ಸುದ್ದಿ

ದೈನಂದಿನ ಪಾಸ್ ಅಕ್ರಮಕ್ಕೆ ಬ್ರೇಕ್

Mainashree

ಬೆಂಗಳೂರು: ಬಿಎಂಟಿಸಿಯ ದಿನದ ಪಾಸುಗಳನ್ನು ಪಡೆಯುವವರು ತಾವು ಪ್ರಯಾಣಿಸಿದ ನಂತರ ಅದನ್ನು ತಿದ್ದಿ ಬೇರೆಯವರಿಗೆ ಮಾರಾಟ ಮಾಡಿ ಹಣೆ ಪಡೆಯುವುದು ಇನ್ನು ಸಾಧ್ಯವಿಲ್ಲ.
ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯು ಜಾರಿಗೆ ತಂದಿದ್ದ ದೈನಂದಿನ ಪಾಸುಗಳ ದುರ್ಬಳಕೆ ತಡೆಗಟ್ಟಲು ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ಇನ್ನುಮುಂದೆ ದಿನದ ಪಾಸುಗಳನ್ನು ಪಡೆದ ಪಾಸುದಾರರು ಇನ್ನು ಮುಂದೆ ಪಾಸಿನಲ್ಲಿ ಸಹಿ ಮಾಡುವ ಅವಶ್ಯಕತೆ ಇರುವುದಿಲ್ಲ.
ಏನಿದು ನಿಯಮ?
ರು.65 ನೀಡಿ ದಿನದ ಪಾಸುಗಳನ್ನು ಪಡೆಯುವರು ರು.25 ಅಥವಾ ರು.100 ಬಿಎಂಟಿಸಿ ಸಂಸ್ಥೆಯ ಗುರಿತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ರು.70ರ ದಿನದ ಪಾಸುಗಳನ್ನು ಪಡೆಯುವಾಗ ಪಾಸುದಾರರು ಇನ್ನು ಮುಂದೆ ಯಾವುದೇ ಗುರುತಿನ ಚೀಟಿ ಅಂದರೆ ಮತದಾರರ ಗುರತಿನ ಚೀಟಿ, ಚಾಲನಾ ಪರವಾನಗಿ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಡಿತರ ಚೀಟಿ ಹಾಗೂ ಭಾರತ, ಕರ್ನಾಟಕ ಸರ್ಕಾರದಿಂದ ವಿತರಿಸಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನಿರ್ವಾಹಕರಿಗೆ ತೋರಿಸಿ ದಿನದ ಪಾಸನ್ನು ಪಡೆಯುವುದು.

SCROLL FOR NEXT