ಬೆಂಗಳೂರು: ಕೆರೆಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಿದೆ. ಲಕ್ಷ್ಮ ಣರಾವ್ ವರದಿ ಪ್ರಕಾರ ಬೆಂಗಳೂರು ನಗರದಲ್ಲಿ 1430 ಕೆರೆಗಳಿವೆ. ಆದರೆ ಈಗ 270 ಕೆರೆಗಳು ಮಾತ್ರ ಇವೆ. ಈ ಸಂಬಂಧ ರಾಜ್ಯ ಸರ್ಕಾರ ಎರಡು ಪ್ರತ್ಯೇಕ ವಿಧೇಯಕ ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶದ ಕೆರೆ ಸಂರಕ್ಷಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಗಾಗಿ ಸರೋವರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗಿದೆ. ಈ ಎರಡೂ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ಗುರುವಾರ ರಾಜ್ಯಪತ್ರ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಳಿವಾಡ ಅಧ್ಯಕ್ಷತೆಯಲ್ಲಿ ಸದನ ಸಮಿತಿಯನ್ನೂ ರಚನೆ ಮಾಡಲಾಗಿದೆ. ಆ ಸಮಿತಿ ವರದಿ ಬರುವವರೆಗೆ ಕೆರೆಯಲ್ಲಿ ಬಿಡಿಎ ಬಡಾವಣೆ ತೆರವು ಮಾಡುವುದಿಲ್ಲ. ಅಲ್ಲಿಯವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಜಿಲ್ಲಾ„ಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಆದರೆ ಖಾಸಗಿ ಕಟ್ಟಡಗಳ ತೆರವು ಕಾರ್ಯ ಮಾತ್ರ ಸ್ಥಗಿತಗೊಳಿಸುವುದಿಲ್ಲ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜತೆಗೆ ಪುನರ್ವಸತಿ ಕೆಲಸವನ್ನೂ ಮಾಡುತ್ತದೆ ಎಂದರು.
ಸಂಪುಟ ನಿರ್ಧಾರಗಳು
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 110 ಗ್ರಾಮಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ರು. 5018 ಕೋಟಿ ಮೊತ್ತದ ಯೋ ಜನೆಗೆ ಒಪ್ಪಿಗೆ. ಇದಕ್ಕೆ ಅಗತ್ಯವಾದ ಆರ್ಥಿಕ ನೆರವನ್ನು ಜೈಕಾದಿಂದ ಸಾಲ ರೂಪದಲ್ಲಿ ಪಡೆಯುವುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆ.
ಬೆಂಗಳೂರು ನಗರದ ವಿವಿಧ ರಸ್ತೆಗಳಲ್ಲಿ ಎಸ್‍ಎಎಸ್ ಅಡ್ವಟೈಸರ್ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ 200 ಶೌಚಾಲಯ ನಿರ್ಮಾಣ ಮಾಡುವ ಯೋ ಜನೆಗೆ
ಒಪ್ಪಿಗೆ. ಈ ಹಿಂದೆ ಇದೇ ಸಂಸ್ಥೆ ಎಂಜಿ ರಸ್ತೆ, ಟ್ರಿನಿಟಿ ವೃತ್ತ ಹಾಗೂ ಇನ್ನಿತರ ಸ್ಥಳಗಳಲ್ಲಿ 30 ಕಡೆ ಶೌಚಾಲಯ ನಿರ್ಮಿಸುವುದಕ್ಕೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾಪ
ಸಲ್ಲಿಸಿತ್ತು. ಆದರೆ 10 ವರ್ಷದವರೆಗೆ ಈ ಶೌಚಾಲಯದ ಮೇಲೆ ಜಾಹೀರಾತು ಫಲಕ ಹಾಕುವುದಕ್ಕೆ ಅನುಮತಿ ನೀಡಬೇಕೆಂಬ ಪ್ರಸ್ತಾಪಕ್ಕೆ ಹಾಗೂ ಪ್ರತಿಷ್ಠಿತ ಸ್ಥಳಗಳಲ್ಲಿ
ಮಾತ್ರ ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಯೋಜನಾ ವರದಿ ಲಭ್ಯವಾದ ಬಳಿಕ ಸೂಕ್ತ ನಿರ್ಧಾರ.
ರೋಗಗ್ರಸ್ಥ ಪಟ್ಟಿಗೆ ಸೇರ್ಪಡೆಯಾಗಿರುವ ಮೈಶುಗರ್ ಸಕ್ಕರೆ ಕಾರ್ಖಾನೆ ಕಾಯಕಲ್ಪಕ್ಕೆ ಸರ್ಕಾರದಿಂದ ರು. 95 ಕೋಟಿ ನೆರವು. ಕಾರ್ಖಾನೆ ಬ್ಯಾಂಕ್ ಮತ್ತು ಹಣಕಾಸು
ಸಂಸ್ಥೆಗಳಿಗೆ ನೀಡಬೇಕಿರುವ ಬಾಕಿ ತೀರಿಸುವುದಕ್ಕೆ ರು. 35.35 ಕೋಟಿ, ಶಾಸನಬದಟಛಿ ಬಿಲ್ ಪಾವತಿ ಮಾಡುವುದಕ್ಕೆ ರು. 39.98 ಕೋಟಿ, ಬಂಡವಾಳ ರೂಪದಲ್ಲಿ ರು. 20 ಕೋಟಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಕೆಪಿಎಸ್‍ಸಿ 8 ಸದಸ್ಯರ ಅಮಾನತಿಗೆ ಶಿಫಾರಸು ಕರ್ನಾಟಕ ಲೋಕಸೇವಾ ಆಯೋಗದ ಎಂಟು ಮಂದಿ ಸದಸ್ಯರನ್ನು ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಾ.ಬಿ.ಎಸ್.ಕೃಷ್ಣಪ್ರಸಾದ್, ಎಸ್.ಆರ್.ರಂಗಮೂರ್ತಿ, ಡಾ.ಎನ್.ಮಹಾದೇವ,
ಎಚ್.ಬಿ.ಪಾಶ್ರ್ವನಾಥ್, ಎಸ್.ದಯಾಶಂಕರ್, ಎಚ್. ಬಿ. ಪಾಟೀಲ್, ರಾಮಕೃಷ್ಣ ಹಾಗೂ ಫಣಿರಾಮ ಅವರನ್ನು ಅಮಾನತು ಮಾಡುವಂತೆ ಸರ್ಕಾರ
ರಾಜ್ಯಪಾಲರಿಗೆ ಪ್ರಸ್ತಾಪ ಕಳುಹಿಸಿದೆ. ಈ ಹಿಂದೆ ಕೆಪಿಎಸ್‍ಸಿ ಸದಸ್ಯರ ವಿರುದಟಛಿ ಅಬಿಯೋಜನೆ ನಡೆಸುವುದಕ್ಕೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕಳುಹಿಸಿದ್ದ
ಪ್ರಸ್ತಾಪವನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು.
ಖಾಸಗಿ ಅನುದಾನಿತ ಶಾಲೆ ಮಕ್ಕಳಿಗೆ ಸೈಕಲ್
ಖಾಸಗಿ ಅನುದಾನಿತ ಶಾಲೆಗಳ ಮಕ್ಕಳಿಗೆ 2015- 16ನೇ ಸಾಲಿನಲ್ಲಿ ಸೈಕಲ್ ಹಂಚಿಕೆ ಮಾಡುವುದಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರು. 199.30 ಕೋಟಿ ವೆಚ್ಚದಲ್ಲಿ 5.55 ಲಕ್ಷ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ. ಹೆಣ್ಣು ಮಕ್ಕಳಿಗೆ ಕೆಂಗಂದು ಬಣ್ಣದ ಸೈಕಲ್ (ಬೆಲೆ ರು. 3650), ಗಂಡು ಮಕ್ಕಳಿಗೆ ನೀಲಿ ಬಣ್ಣದ (ಬೆಲೆ ರು. 3580 ) ಸೈಕಲ್ ವಿತರಣೆ ಮಾ ಡಲು ನಿರ್ಧರಿಸಲಾಗಿದೆ.