ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಚಿಕ್ಕಕೆರೆಗೆ ಕಸದ ಗಂಡಾಂತರ

ಪಟ್ಟಣದ ಅಂಚಿನಲ್ಲಿರುವ ಚಿಕ್ಕಕೆರೆ ಒಂದೆಡೆ ಒತ್ತುವರಿಯಿಂದ, ಮತ್ತೊಂದೆಡೆ ಕುಂಬಳಹಳ್ಳಿ ಗ್ರಾಮಕ್ಕೆ ಅಕ್ರಮ ಸಂಪರ್ಕ ರಸ್ತೆ ನಿರ್ಮಾಣದಿಂದ ಅಳಿವು ಉಳಿವಿಗಾಗಿ ಹೋರಾಡುತ್ತಿದ್ದರೆ ಇದೀಗ ನಗರಸಭೆ ತ್ಯಾಜ್ಯ ವಸ್ತುಗಳನ್ನು ಸುರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ...

ಹೊಸಕೋಟೆ: ಪಟ್ಟಣದ ಅಂಚಿನಲ್ಲಿರುವ ಚಿಕ್ಕಕೆರೆ ಒಂದೆಡೆ ಒತ್ತುವರಿಯಿಂದ, ಮತ್ತೊಂದೆಡೆ ಕುಂಬಳಹಳ್ಳಿ ಗ್ರಾಮಕ್ಕೆ ಅಕ್ರಮ ಸಂಪರ್ಕ ರಸ್ತೆ ನಿರ್ಮಾಣದಿಂದ ಅಳಿವು ಉಳಿವಿಗಾಗಿ ಹೋರಾಡುತ್ತಿದ್ದರೆ ಇದೀಗ ನಗರಸಭೆ ತ್ಯಾಜ್ಯ ವಸ್ತುಗಳನ್ನು ಸುರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಕೆಲವು ವರ್ಷಗಳ ಹಿಂದೆ ಇದೇ ರೀತಿ ತ್ಯಾಜ್ಯ ಸುರಿಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ನಗರಸಭೆಯ ಟ್ರ್ಯಾಕ್ಟರ್‍ನಲ್ಲಿ ತ್ಯಾಜ್ಯ ಸುರಿಯಲಾಗುತ್ತಿದ್ದು ಮತ್ತೊಮ್ಮೆ ಸಮಸ್ಯೆ ಸೃಷ್ಟಿಗೊಂಡಿದೆ. ಕೆರೆ ಅಂಗಳದಲ್ಲಿ ಪಟ್ಟಣದ ಸಮೀಪದ ಸೊನ್ನದೇನಹಳ್ಳಿ, ಸೋಂಪುರ ಗ್ರಾಮಗಳಿಗೆ ಕಾಲುದಾ ರಿಯಿದ್ದು ಅದರ ಪಕ್ಕದಲ್ಲಿನ ಪೇದೆಗಳ ಬಳಿ ತ್ಯಾಜ್ಯ ಸುರಿಯುತ್ತಿದ್ದು ಅಕ್ಕಪಕ್ಕದ ತೋಟಗಳಲ್ಲಿ ಬೆಳೆ ಬೆಳೆಯುವ ರೈತರಿಗೆ ದುರ್ವಾಸನೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಅನೇಕ ಸಾಂಕ್ರಾಮಿಕ ರೋಗಗಳು ಸಹ ಹರಡುವ ಭೀತಿ ಉಂಟಾಗಿದೆ. ಇದರೊಂದಿಗೆ ಕೆರೆಯಲ್ಲಿನ ಅಲ್ಲಲ್ಲಿ ಕಂಡುಬರುವ ಹಸಿರು ಹುಲ್ಲನ್ನು ಮೇಯಲು ಬರುವ ರಾಸುಗಳು ಸಹ ತ್ಯಾಜ್ಯ ವಸ್ತುಗಳನ್ನು ತಿಂದು ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸುತ್ತ ಮುತ್ತಲಿನ ರೈತರು, ನಿವಾಸಿಗಳು ಮನವಿ ಮಾಡಿದ್ದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಸ್ವಾಮೀಜಿಗಳ ಕೈಯಿಂದ ಜಾರಿದ ಶ್ರೀಕೃಷ್ಣನ ಉತ್ಸವ ಮೂರ್ತಿ, ಭಕ್ತರಲ್ಲಿ ಹೆಚ್ಚಿದ ಆತಂಕ!

ಮಧ್ಯಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಮಂದಿ ಸಾವು, ಹಲವರ ಸ್ಥಿತಿ ಗಂಭೀರ! ಕಠಿಣ ಕ್ರಮಕ್ಕೆ ಸಿಎಂ ಆದೇಶ

Maruti Suzuki Baleno ಹೊಸ ಆವೃತ್ತಿ ಬಿಡುಗಡೆ: ಬೆಲೆ, ಮೈಲೇಜ್, ವೈಶಿಷ್ಟ್ಯ: ಕಾರು ಖರೀದಿಸುವ ಮುನ್ನ ನೀವು ತಿಳಿಯಬೇಕಾದ ಅಂಶಗಳಿವು...

ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು