ಬಂಧಿತ ಆರೋಪಿಗಳು 
ಜಿಲ್ಲಾ ಸುದ್ದಿ

ದಾಖಲೆ ಇಲ್ಲದ ಹಣ ವಶ: ಐವರ ಸೆರೆ

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರು.32.5 ಲಕ್ಷ ಹವಾಲಾ ಹಣ ವಶಪಡಿಸಿ ಕೊಂಡಿರುವ ಎಸ್.ಜೆ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದಾರೆ...

ಬೆಂಗಳೂರು: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರು.32.5 ಲಕ್ಷ ಹವಾಲಾ ಹಣ ವಶಪಡಿಸಿ ಕೊಂಡಿರುವ ಎಸ್.ಜೆ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿಯ ಶೇಖರ್, ಗೋವಿಂದರಾಜು, ಲೋಕೇಶ್, ಶಿವಗುರು ಹಾಗೂ ಚಂದ್ರು ಬಂಧಿತರು. ಆರೋಪಿಗಳು ಸೋಮವಾರ ರಾತ್ರಿ ತಮಿಳುನಾಡು ನೋಂದಣಿ ಸಂಖ್ಯೆಯ ಇಂಡಿಕಾ ಕಾರಿನಲ್ಲಿ ಸೊಂಟದಲ್ಲಿ ಹಾಗೂ ನಿಕ್ಕರ್‍ಗಳಲ್ಲಿ ಹಣ ತುಂಬಿಕೊಂಡು ಎನ್.ಆರ್ ರಸ್ತೆಯಲ್ಲಿ ತೆರಳುತ್ತಿದ್ದರು.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ವಾಹನ ತಡೆದು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ವಿಚಾರಣೆ ವೇಳೆ ಆರೋಪಿಗಳ ಬಳಿ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಒಮ್ಮೆ ತಾವು ಚಿನ್ನಾಭರಣ, ಖರೀದಿಗೆ ಬಂದಿದ್ದಾಗಿ ಹೇಳಿದರೆ, ಮತ್ತೊಮ್ಮೆ ಚಿನ್ನಾಭರಣ ಮಾರಿದ ಹಣವಿದು ಎಂದು ಹೇಳುತ್ತಿದ್ದಾರೆ. ಹೇಳಿಕೆಯಲ್ಲಿ ವ್ಯತ್ಯಾಸವಿದೆ. ಅಲ್ಲದೇ ಸೂಕ್ತ ದಾಖಲೆಗಲಿಲ್ಲದ ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಧೀಶರ ಮೇಲಿನ ದಾಳಿ ಖಂಡಿಸಿದ ಮಮತಾ; ರಾಷ್ಟ್ರಪತಿ ಆಳ್ವಿಕೆಗಾಗಿ ಬಿಜೆಪಿ 'ಸಂಚು' ಎಂದ ದೀದಿ

ಆಮ್ ಆದ್ಮಿ ದನಿಯಾಗಿದ್ದ ರಾಘವ್ ಚಡ್ಡಾಗೆ AAP ಶಾಕ್: ರಾಜ್ಯಸಭೆ ಉಪನಾಯಕ ಸ್ಥಾನದಿಂದ ವಜಾ, ಮಾತನಾಡಲು ನಿರ್ಬಂಧ!

ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ರಾಹುಲ್ ಗಾಂಧಿ ನೀಡಿದ ಭರವಸೆಗಳೇನು?

ಪ್ರಧಾನಿ ಮೋದಿ ಬೆನ್ನುಮೂಳೆ ಇಲ್ಲದ, ಇಂಧನ ಭದ್ರತೆಯಲ್ಲಿ ರಾಜಿ ಮಾಡಿಕೊಂಡ 'ಹೇಡಿ': ಪ್ರಿಯಾಂಕಾ ಗಾಂಧಿ

ಕ್ರಿಶ್ಚಿಯನ್ ಪ್ರಕಾರ ತಾಯಿಯ ಅಂತ್ಯಕ್ರಿಯೆ: ನಟ ಪ್ರಕಾಶ್ ರಾಜ್ ಹೇಳಿದ್ದೇನು?

SCROLL FOR NEXT