ಪತ್ರಿಕಾಗೋಷ್ಠಿ ನಡೆಸಿದ ಡಾ.ಸೋಮೇಶ್ವರ್, ಡಾ.ಹೊನ್ನೇಗೌಡ ಹಾಗೂ ಡಾ.ಉಮಾ ಶೇಷಗಿರಿ 
ಜಿಲ್ಲಾ ಸುದ್ದಿ

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಭಾರತೀಯ ವೈದ್ಯಕೀಯ ಸಂಘ 'ಸ್ವಚ್ಛಭಾರತ-ಸ್ವಸ್ಥ ಭಾರತ' ಅಭಿಯಾನವನ್ನು ಶನಿವಾರ ಮೇ 23ರಂದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ...

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘ 'ಸ್ವಚ್ಛಭಾರತ-ಸ್ವಸ್ಥ ಭಾರತ' ಅಭಿಯಾನವನ್ನು ಶನಿವಾರ ಮೇ 23ರಂದು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೈದ್ಯರಾದ ಡಾ. ಸೋಮೇಶ್ವರ ಅವರು, ಸಾರ್ವಜನಿಕ ನೈರ್ಮಲ್ಯದ ಮಹತ್ವವನ್ನು ಸಾರ್ವಜನಿಕರಲ್ಲಿ ಮೂಢಿಸಲು ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಭಾರತೀಯ ವೈದ್ಯಕೀಯ ಸಂಘದ ಆವರಣದಲ್ಲಿ ಆಯೋಜಿಸಿದೆ ಎಂದು ತಿಳಿಸಿದ್ದಾರೆ.

ವೈಯಕ್ತಿಕ ಸ್ವಚ್ಛತೆ ಬಹಳ ಮುಖ್ಯವಾಗಿದ್ದು, ಇದರ ಬಗ್ಗೆ ಹೆಚ್ಚು ಜನರಿಗೆ ಅರಿವು ಇರುವುದಿಲ್ಲ. ಚೈನ್ನಾಗಿ ಕೈಗಳನ್ನು ತೊಳೆದುಕೊಂಡರೆ ಕರುಳು ಹುಳುಗಳು, ಟೈಫಾಯ್ಡ್, ಆಮಶಂಕೆ, ಕಾಲರ, ಕಾಮಾಲೆ ಮುಂತಾದವು ಇತರರಿಗೆ ಹರಡದಂತೆ ತಡೆಯಬಹುದು. ಶನಿವಾರ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸ್ವಚ್ಛತೆಯನ್ನು ಪರಿಪಾಲಿಸುವುದರ ಮೂಲಕ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ.ಉಮಾ ಶೇಷಗಿರಿ, ಡಾ.ಹೊನ್ನೇಗೌಡ ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್: ಪರಸ್ಪರ ಆಲಿಂಗನ, ಒಟ್ಟಿಗೆ ಬ್ರೇಕ್ ಫಾಸ್ಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT