ಬೆಂಗಳೂರು ವಿಶ್ವವಿದ್ಯಾಲಯ 
ಜಿಲ್ಲಾ ಸುದ್ದಿ

ಪದವಿ ಪೂರೈಸಲು ಬೆಂಗಳೂರು ವಿವಿ ಸದವಕಾಶ

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ (1964-2008) ಪೂರೈಸದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಬೆಂಗಳೂರು ವಿಶ್ವವಿದ್ಯಾಲಯ ಕಲ್ಪಿಸಿದೆ...

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ (1964-2008) ಪೂರೈಸದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಬೆಂಗಳೂರು ವಿಶ್ವವಿದ್ಯಾಲಯ ಕಲ್ಪಿಸಿದೆ.

ಈ ಮೊದಲು ವಿವಿಯ ಸುವರ್ಣೋತ್ಸವದ ಹಿನ್ನೆಲೆಯಲ್ಲಿ ಶೇ.50ರಷ್ಟು ಫಲಿತಾಂಶವುಳ್ಳವರಿಗೆ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿತ್ತು. ಮತ್ತೆ, ಕೆಲವು ವಿದ್ಯಾರ್ಥಿಗಳು, ನ್ಯಾಯಾಲಯದ ಮೆಟ್ಟಲೇರಿ ಶೇ.50ಕ್ಕಿಂತಲೂ ಕಡಿಮೆ ಫಲಿತಾಂಶವುಳ್ಳವರಿಗೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸ ಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿವಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದೆ.

1864 ಮಂದಿ ಈಗಾಗಲೇ ಪರೀಕ್ಷೆ ಬರೆದಿದ್ದಾರೆ. ಮೆಡಿಕಲ್ ಸೈನ್ಸ್ ಬಿಟ್ಟು ಉಳಿದ ವಿಷಯಗಳಿಗೆ ಈ ಅವಕಾಶ ಲಭ್ಯವಾಗಿದೆ. ಹಿಂದೆ ಇದ್ದ ಪಠ್ಯಕ್ಕೆ ಸಮಾನಾಂತರ ಪಠ್ಯವನ್ನು ಈ ವಿದ್ಯಾ ರ್ಥಿಗಳಿಗೆ ಒದಗಿಸಲಾಗುವುದು ಎಂದು ಗುರುವಾರ ಜ್ಞಾನಭಾರತಿ ಸೆನೆಟ್‍ಹಾಲ್‍ನಲ್ಲಿ ಏರ್ಪಡಿಸಿದ್ದ ವಿದ್ಯಾ ವಿಷಯಕ ಪರಿಷತ್ತಿನ ಸಭೆಯಲ್ಲಿ ಮೌಲ್ಯ ಮಾಪನ ಕುಲಸಚಿವ ಕೆ.ಎನ್.ನಿಂಗೇಗೌಡ ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ:
ಬಿಕಾಂ ಪ್ರಶ್ನೆ ಪತ್ರಿಕೆ ಪೂರ್ತಿ ಸೋರಿಕೆಯಾಗಿರಲಿಲ್ಲ. ಮೂರು ಸೆಟ್ ಪ್ರಶ್ನೆಪತ್ರಿಕೆ ಗಳಲ್ಲಿ 2 ಪ್ರಶ್ನೆಗಳು ಸೋರಿಕೆಯಾಗಿತ್ತು.  ಈ ಕುರಿತು ಬೋರ್ಡ್ ಸದಸ್ಯರಿಂದ ವಿವರಣೆ ಪಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪೊಲೀಸ್ ದೂರು ನೀಡಲಾಗಿದ್ದು, ವಿವಿ ಯಿಂದ ತನಿಖೆ ಕೈಗೊಳ್ಳಲಾಗುವುದು ಎಂದರು.

ಫಲಿತಾಂಶ ಪ್ರಕಟ

ಬಿಎನ್ಎಂ ಕಾಲೇಜಿನ ಪರೀಕ್ಷೆ ಹಗರಣದಲ್ಲಿ ಅಕ್ರದಲ್ಲಿ ಭಾಗಿಗಿದ್ದ 8 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಹೊರತು ಪಡಿಸಿ ಉಳಿದ ಉತ್ತರ ಪತ್ರಿಕೆಗಳಲ್ಲಿ ಅಕ್ರಮ ನಡೆದಿಲ್ಲ. ಈ ಹಿನ್ನೆಲೆ ಯಲ್ಲಿ ಸಿಂಡಿಕೇಟ್ ಸಭೆ ಅಂತಿಮ ಫಲಿತಾಂಶ ಪ್ರಕಟಿಸಲು ಅನುಮೋದಿಸಿದೆ. ಅದರಂತೆ ಮೇ 22ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮೌಲ್ಯಮಾಪನ ಕುಲಸಚಿವರು ತಿಳಿಸಿದರು.

ಮುಂದುವರಿದ ಸಂಯೋಜನೆ: ಸ್ಥಳೀಯ ವಿಚಾರಣಾ ಸಮಿತಿ 2ನೇ ಬಾರಿ ಕೆಲವು ಕಾಲೇಜುಗಳಿಗೆ ಭೇಟಿ ನೀಡಿ ವರದಿ ನೀಡಿದೆ. ಅದರಂತೆ 25 ಪದವಿ ಕಾಲೇಜುಗಳಿಗೆ ಸಂಯೋಜನೆ  ನೀಡಲಾಗಿದೆ. 12 ಬಿಇಡಿ ಕಾಲೇಜುಗಳಿಗೂ ಸಂಯೋಜನೆ ನೀಡಲು ಸಭೆ ಒಪ್ಪಿದೆ ಎಂದು ಕುಲಪತಿ ಪ್ರೊ. ಬಿ. ತಿಮ್ಮೇಗೌಡ ತಿಳಿಸಿದರು.

ಪ್ರಥಮ ಪಿಯು ಮಾಡದೆ ದ್ವಿತೀಯ ಪಿಯು ಪೂರೈಸಿದವರಿಗೆ ಕಳೆದ ವರ್ಷದಂತೆ ಈ ವರ್ಷವೂ ಪ್ರವೇಶ ನೀಡಲಾಗುವುದು. ೀ ಕುರಿತಂತೆ ಯಜಿಸಿಗೆ ಪತ್ರ ಬರೆದು ನಂತರ ನಿರ್ಧಾರ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಪರಿಷತ್ ತಿಳಿಸಿದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 6 ತಿಂಗಳು ಅಥ್ಯಯನ ಮಾಡಿದರೆ ಡಿಪ್ಲೊಮಾ, 1 ವರ್ಷ ಅಧ್ಯಯನ ಮಾಡಿದರೆ ಸರ್ಟಿಫಿಕೇಟ್ ಹಾಗೂ 1 ವರ್ಷ ಅಧ್ಯಯನ ಕೈಗೊಂಡರೆ ಪಿಡಿ ಡಿಪ್ಲೊಮಾ ಪ್ರಾರಂಭಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಜಲಮಂಡಳಿಯವರು 12 ಎಕರೆ ಜಮೀನನ್ನು ಜಲಶುದ್ಧೀಕರಣ ಯೋಜನೆಗಾಗಿ ಕೇಳಿದ್ದಾರೆ ಅವಶ್ಯವಿರುವ ಭೂಮಿಯನ್ನು ಅವರಿಗೆ ಗುತ್ತಿಗೆಗೆ ನೀಡವಾಗುವುದು. ವಿವಿಯಲ್ಲಿ ಸಮರ್ಪಕ ಒಳ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗುವುದು. ವೃಷಭಾವತಿ ಕಣಿವೆಯ ಶುದ್ಧಗೊಳ್ಳುವ ನೀರನ್ನು ವಿವಿಯ ಉಪಯೋಗಕ್ಕೆ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಕುಲಸಚಿವೆ ಪ್ರೊ.ಕೆ.ಕೆ. ಸೀತಮ್ಮ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT