ಜಿಲ್ಲಾ ಸುದ್ದಿ

ರಾಜ್ಯದಲ್ಲಿ ನಿಲ್ಲದ ಮಳೆಗೆ 1500 ಪಕ್ಷಿ ಸಾವು

Rashmi Kasaragodu

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ನಾನಾ ಕಡೆ ಮಳೆ ಮುಂದುವರಿದಿದೆ. ಸಿಡಿಲಿಗೆ ಯುವಕನೊಬ್ಬ ಬಲಿಯಾಗಿದ್ದು, ತುಂಗಭದ್ರಾ ಜಲಾಶಯದ ಹಿನ್ನೀರ ಬಳಿ ಭಾರಿ ಗಾತ್ರದ ಆಲಿಕಲ್ಲು ಮಳೆ ಸುರಿದಿದ್ದರಿಂದ 1500ಕ್ಕೂ ಹೆಚ್ಚು ಪಕ್ಷಿಗಳು ಮೃತ ಪಟ್ಟಿವೆ.

ವ್ಯಕ್ತಿ ಸಾವು: ಗದಗ ತಾಲೂಕು ಮುಳಗುಂದ ಪಟ್ಟಣದ ಶ್ರೀಕಾಂತ ಶಿವಲಿಂಗಪ್ಪ ಕುತ್ನಿ (20) ಬಹಿರ್ದೆಸೆಗೆ ತೆರಳಿದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬಿರುಗಾಳಿ ಮರಗಳು ಧರೆಗು ರುಳಿದ್ದರಿಂದ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ , ಖಾನಾಪುರ, ಗುಂಡಳ್ಳಿ, ಗಾಳಿ ಮರಿಯಮ್ಮ ದೇವಸ್ಥಾನ ಸುತ್ತಮುತ್ತ ಬಿರುಗಾಳಿ ಸಹಿತ ಮರ,  ವಿದ್ಯುತ್ ಕಂಬಗಳು ಧರೆಗುಳಿದಿದ್ದರಿಂದ ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.  ಖಾನಾಪುರ  -ಕರಣಗಿ ರಸ್ತೆಯ ಕಲ್ಲಪ್ಪ ರೈತನ ಹೊಲದಲ್ಲಿ 5 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಜಿಲ್ಲೆಯ ಯಲಬುರ್ಗಾ ತಾಲೂ ಕಿನ ವಟಪರವಿ ಗ್ರಾಮದ ಹೊರ ಹೊಲಯದಲ್ಲಿ ಸಿಡಿಲು ಬಡಿದು ಕುರಿ ಹಟ್ಟಿಯಲ್ಲಿನ 12 ಕುರಿಗಳು ಮೃತಪಟ್ಟಿವೆ. ಲಿಂಗಸ್ಗೂರು, ಸಿಂಧನೂರಿನಲ್ಲೂ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನತೆ ಪರದಾಡುವಂತಾಗಿದೆ. ರಸ್ತೆ ಕಾಮಗಾರಿಗಳು ಅರ್ಧಂಬರ್ಧವಾಗಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಜೋರು ಮಳೆಗೆ ಬತ್ತದ ಬೆಳೆ ನೆಲಕಚ್ಚಿದೆ. ಕೃಷ್ಣಾಪುರ ಗ್ರಾಮ, ತುಂಗಭದ್ರಾ ಜಲಾಶಯದ ಹಿನ್ನೀರ ದಂಡೆಯ ಮೇಲಿರುವ ತೋಟ,ಹೊಲಗಳಲ್ಲಿನ ಮರಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಕೆಂಪುತಲೆಯ ಗಿಳಿ, ರೋಜ್ ರಿಂಗಡ್ ಪ್ಯಾರೇಟ್, ಪಾಂಡ್ ಹೆರೆನ್, ಕ್ಯಾಟಲ್ ಬರ್ಡ್ (ಗೋಹಕ್ಕಿ), ಬೆಳ್ಳಕ್ಕಿ,ಗೊರವಂಕ, ಟುವ್ವಿ ಹಕ್ಕಿ, ಬೂದುಬಕ್, ಸ್ಮಾಲ್ ಗ್ಯಾಟೀನ್, ಕಾಮನ್ ಮೈನಾ, ಪೀಕಡ್ ಹೇರನ್ ಸೇರಿದಂತೆ 13 ಪಕ್ಷಿಪ್ರಭೇದಗಳಿಗೆ  ಸೇರಿದ 1500ಕ್ಕಿಂತ ಹೆಚ್ಚು ಪಕ್ಷಿಗಳು ಆಲಿಕ ಲ್ಲಿನ ಹೊಡೆತಕ್ಕೆ ಸಿಕ್ಕು ಪ್ರಾಣ ಕಳೆದು ಕೊಂಡಿವೆ.

SCROLL FOR NEXT