ಮೃತ ಶಿವಣ್ಣ 
ಜಿಲ್ಲಾ ಸುದ್ದಿ

ಮೈಸೂರು: ಹುಲಿ ದಾಳಿಗೆ ದನಗಾಹಿ ಶಿವಣ್ಣ ಬಲಿ

ಹುಲಿಯೊಂದು ದನ ಮೇಯಿಸುತ್ತಿದ್ದ ವ್ಯಕ್ತಿಯನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಮಂಗಳವಾರ ಮೈಸೂರಿನ...

ಮೈಸೂರು: ಹುಲಿಯೊಂದು ದನ ಮೇಯಿಸುತ್ತಿದ್ದ ವ್ಯಕ್ತಿಯನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಮಂಗಳವಾರ ಮೈಸೂರಿನ ಎಚ್ ಡಿ ಕೋಟೆಯ ಹಾದನೂರು ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ದನಗಾಹಿ ಶಿವಣ್ಣ(50) ಎಂದು ಗುರುತಿಸಲಾಗಿದ್ದು, ದನ ಮೇಯಿಸಲು ಹೋದ ಸಂದರ್ಭದಲ್ಲಿ ಹುಲಿ ಅವರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಈ ವೇಳೆ ಶಿವಣ್ಣನನ್ನು ರಕ್ಷಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

ಹುಲಿ ಶಿವಣ್ಣನ ದೇಹವನ್ನು ಸುಮಾರು 100 ಮೀಟರ್‌ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದ್ದು, ಭಾಗಶಃ ತಿಂದು ಹಾಕಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ನಂಜದೇವರ ಬೆಟ್ಟದ ಸಮೀಪದ ಕಳ್ಳಂಜಪ್ಪನ ಗುಡಿ ಪಕ್ಕದಲ್ಲಿ ಮೃತ ಶಿವಣ್ಣನಿಗೆ 4.5ಎಕರೆ ಜಮೀನಿದ್ದು ಆ ಜಮೀನಿನಲ್ಲಿ ಹುರುಳಿ, ಹತ್ತಿ, ರಾಗಿ ಬೆಳೆಯನ್ನು ಬೆಳೆದಿದ್ದರು. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

ಆತಂಕ ಸೃಷ್ಟಿಸಿದ ಇರಾನ್ ನಡೆ; ಹಾರ್ಮುಜ್ ನಂತರ, ಜಾಗತಿಕ ಆರ್ಥಿಕತೆಯ ಜೀವನಾಡಿ 'ಬಾಬ್ ಅಲ್-ಮಂಡೇಬ್' ಜಲಸಂಧಿ ಬಂದ್ ಮಾಡುವ ಸುಳಿವು!

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

SCROLL FOR NEXT