ಜಿಲ್ಲಾ ಸುದ್ದಿ

ಅರ್ಚಕರ ತಸ್ತೀಕ್‍ಗೆ ಅಡ್ಡಿಯಾದ ಸುತ್ತೋಲೆ

Manjula VN

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳಲ್ಲಿ ತಸ್ತೀಕ್ (ಭತ್ಯೆ)ಪಡೆಯುವಲ್ಲಿ ಅರ್ಚಕರಿಗೆ ತೊಂದರೆಯಾಗುತ್ತಿದೆ ಎಂದು ಅರ್ಚಕರ, ಆಡಳಿತ ಸಂಘದ ಅಧ್ಯಕ್ಷ ಜಾನಕಿರಾಮ್ ದೂರಿದ್ದಾರೆ.

ಧಾರ್ಮಿಕ ದತ್ತಿ ಆಯುಕ್ತೆ ಪಲ್ಲವಿ ಅಕೂರಾತಿ ಅರ್ಚಕರ ಖಾತೆಗೆ ಶೇ.35 ಮತ್ತು ದೇವರ ಖಾತೆಗೆ ಶೇ.65 ಕೋರ್ ಬ್ಯಾಂಕಿಂಗ್ ಮೂಲಕ ವರ್ಗಾಯಿಸಲು ಸುತ್ತೋಲೆ ಹೊರಡಿಸಿದ್ದು, ಇದು ಅರ್ಚಕರಿಗೆ ದೇವಾಲಯದ ಪೂಜಾ ಕೈಂಕರ್ಯ ನಡೆಸಲು ತೊಂದರೆಯಾಗುತ್ತಿದೆ ಎಂದರು. ರಾಜ್ಯದಲ್ಲಿ 34 ಸಾವಿರ ಧಾರ್ಮಿಕ ದತ್ತಿ ದೇವಾಲಯಗಳಿದ್ದು ಶೇ.99 ರಷ್ಟು ಸಿ ದರ್ಜೆಯ ದೇವಾಲಯಗಳಿವೆ. ಅದರಿಂದ ಬರುವ ಆದಾಯ ಮತ್ತು ಗ್ರಾಮಸ್ಥರ ಸಹಾಯದಿಂದ ದೇವಾಲಯದ ಪೂಜೆ ನಡೆಸಲಾಗುತ್ತಿತ್ತು. ಆದರೆ ಸರ್ಕಾರ ಇದನ್ನು ತಮ್ಮ ವಶಕ್ಕೆ ಪಡೆದುಕೊಂಡ ಮೇಲೆ ತಸ್ತೀಕ್ ಭತ್ಯೆ ನೀಡುತ್ತಿದ್ದರು.

2006ರಿಂದ `ಸಿ` ದರ್ಜೆ ದೇವಾಲ ಯಗಳಿಗೆ ವಾರ್ಷಿಕ ರು.6ಸಾವಿರ ಮತ್ತು 2 ವರ್ಷದ ನಂತರ ವಾರ್ಷಿಕ ರು.12ಸಾವಿರಕ್ಕೆ ಹೆಚ್ಚಿಸಿತು. ಮತ್ತೆ ಎರಡು ವರ್ಷಗಳ ನಂತರ ವಾರ್ಷಿಕ ರು.24ಸಾವಿರ ಹೆಚ್ಚಿಸಿದ್ದರಿಂದ, ಪೂಜಾ ಕೈಂಕ ರ್ಯಗಳು ಸರಿಯಾಗಿ ನಡೆಯುತ್ತಿವೆ. ಈಗ ಈ ಸುತ್ತೋಲೆಯಿಂ ದ ತೊಂದರೆಯುಂಟಾಗುತ್ತಿ ದೆ ಎಂದರು. ಅರ್ಚಕರಿಗೆ ತಸ್ತೀಕ್ ಮೊತ್ತವನ್ನು ವರ್ಷಕ್ಕೆ 3 ಭಾಗವಾಗಿ ಪಾವತಿ ಮಾಡುತ್ತಿದ್ದಾರೆ.

ಈ ಹಣ ಪಡೆಯಲು ವರ್ಷಕ್ಕಿಂತ ಹೆಚ್ಚು ಸಮಯ ಬೇಕು. ಹತ್ತಾರು ಬಾರಿ ಅಲೆದಾಡಬೇಕಾಗುತ್ತ ದೆ. ಅವರು ಕೊಡುವ ಹಣದಿಂದ ಪೂಜಾ ಕೈಂಕರ್ಯಗಳ ನ್ನು ನಡೆಸಲು ಕಷ್ಟ ಆಗುತ್ತಿದೆ. ಪದಾರ್ಥಗಳ ಬೆಲೆಗಳು ಗಣನೀಯವಾಗಿ ಏರಿದ್ದು ದೇವಾಲಯದ ನಿರ್ವಹಣೆ ಕಷ್ಟಕರವಾಗಿದೆ ಎಂದರು.

SCROLL FOR NEXT