ಶಿವಮೊಗ್ಗ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ದಿವಂಗತ ಕುವೆಂಪು ಅವರ ಮನೆಯನ್ನು ಕೂಡ ಕಳ್ಳರು ಬಿಟ್ಟಿಲ್ಲ. ಶಿವಮೊಗ್ಗದ ಕುಪ್ಪಳಿಯಲ್ಲಿರುವ ಕುವೆಂಪು ರವರ ಮನೆಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದಲ್ಲದೆ,ಸಿಸಿ ಕ್ಯಾಮರಾವನ್ನು ಧ್ವಂಸ ಮಾಡಿದ್ದಾರೆ. ಅಲ್ಲದೆ ಅವರಿಗೆ ಸಿಕ್ಕಿದ್ದ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಕಳವು ಮಾಡಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿರುವ ಕುಪ್ಪಳಿಯಲ್ಲಿರುವ ಕವಿಶೈಲದ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಅಲ್ಲದೇ ಕುವೆಂಪು ಅವರಿಗೆ ಸಿಕ್ಕ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಯನ್ನು ಕದ್ದೊಯದ್ದಿದ್ದಾರೆ. ಇದು ಯಾರ ಕೆಲಸ ಎಂಬುದು ತನಿಖೆಯ ನಂತರವೇ ಗೊತ್ತಾಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಮನೆಯ ಒಳಗಿನ ಶೋ ಕೇಸ್ ಗಾಜನ್ನು ಪುಡಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಕುವೆಂಪು ನಿವಾಸ ಕರ್ನಾಟಕದಲ್ಲಿ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ.