ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆ (ಮೂಡುಬಿದಿರೆ): ಹೆಣ್ಣುಮಕ್ಕಳ ಮೇಲಿನ ಅನ್ಯಾಯ- ಅತ್ಯಾಚಾರಗಳ ಭರಾಟೆ ದಿಗ್ಭ್ರಮೆ ಹುಟ್ಟಿಸಿದೆ. ಯಾವ ಸಾಹಿತ್ಯದಿಂದ, ಯಾವ ಬರವಣಿಗೆಯಿಂದ ಇಂತಹ ರಾಕ್ಷಸರ ಮನಃ ಪರಿವರ್ತನೆ ಸಾಧ್ಯ? ಸಾಹಿತ್ಯದಿಂದ ಸಮಾಜ ಸುಧಾರಣೆ ಎನ್ನುವ ಪರಿಕಲ್ಪನೆಯೇ ಅರ್ಥ ಕಳೆದುಕೊಂಡಿ ದೆ. ಇದು ಹೊಸತನದ ಹುಡುಕಾಟದಲ್ಲಿರುವ ಜಗತ್ತಿಗೇ ಸವಾಲಾಗಿದೆ. ಆದ್ದರಿಂದ
ಅತ್ಯಾಚಾರ, ಮರ್ಯಾದಾ ಹತ್ಯೆ ಇತ್ಯಾದಿ ದೌರ್ಜನ್ಯಗಳನ್ನು ಹತ್ತಿಕ್ಕಲು ಏಕರೂಪದ ನಾಗರಿಕ ಸಂಹಿತೆ ಅಗತ್ಯವಾಗಿ ಬೇಕಾಗಿದೆ ಎಂದು ಸಾಹಿತಿ ಡಾ.ವೀಣಾ ಶಾಂತೇಶ್ವರ
ಹೇಳಿದರು. ಮೂಡುಬಿದಿರೆಯಲ್ಲಿ ಗುರುವಾರ, 12ನೇ ಆಳ್ವಾಸ್ ನುಡಿರಿಸಿಯನ್ನು ಉದ್ಘಾಟಿಸಿದ ಅವರು ಮಹಿಳಾ ದೌರ್ಜನ್ಯದ ವಿರುದ್ಧ ಸಿಡಿದೆದ್ದರು.
ಅಸಹಿಷ್ಣುತೆ ಹೊಸದಲ್ಲ: ಇಂದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಾಂಪ್ರದಾಯಿಕತೆ ಸವಾಲು ಹಾಕುತ್ತಿದೆ. ದೇಶಾದ್ಯಂತ ಅಸಹಿಷ್ಣುತೆ ವ್ಯಾಪಿಸುತ್ತಿದೆ. ಆದರೆ ನಮ್ಮ ದೇಶದಲ್ಲಿ
ಅಸಹಿಷ್ಣುತೆಯು ಹೊಸದಲ್ಲ. ಅದು 1947ರಿಂದಲೂ ಇದೆ. `ಅಸಹಿಷ್ಣುತೆಯ ವಿರುದ್ಧ ಹೋರಾಟ ಯಾವುದೇ ರಾಜಕೀಯ ಪಕ್ಷವನ್ನುವನ್ನು ಗುರಿಯಾಗಿಸುವುದು ಸರಿಯಲ್ಲ' ಎಂದು ಇತ್ತೀಚೆಗೆ ಚಿತ್ರನಟ ಕಮಲಹಾಸನ್ ಹೇಳಿದ್ದು ವಿಚಾರ ಯೋಗ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಇದಕ್ಕೂ ಮೊದಲು ಭತ್ತದ ಕಳಶಕ್ಕೆ ಅತಿಥಿಗಳು ಹಾಲೆರೆಯುವ ಮೂಲಕ ನುಡಿಸಿರಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು. ನುಡಿಸಿರಿಯ 11ನೇ ಸಂಚಿಕೆಯನ್ನು ಸಮ್ಮೇಳ ನಾಧ್ಯಕ್ಷರು ಬಿಡುಗಡೆ ಮಾಡಿದರು. ಸಾಹಿತಿಗಳಾ ದ ಹಂಪ ನಾಗರಾಜಯ್ಯ, ಕಮಲಾ ಹಂಪನ, ವಿವೇಕ ರೈ, ಏರ್ಯ ಲಕ್ಷ್ಮೀನಾರಾ ಯಣ ಆಳ್ವ, ಮಾಜಿ ಶಾಸಕರಾದ ಅಮರನಾಥ ಶೆಟ್ಟಿ, ಮೋಹನ ಆಳ್ವ ಅವರ ತಂದೆ ಮಿಜಾರುಗುತ್ತು ಆನಂದ ಆಳ್ವ ಇದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು. ವಿಶಾಲವಾದ ಬೃಹತ್ ವೇದಿಕೆಯ ಮೇಲೆ 180ಕ್ಕೂ ಹೆಚ್ಚು ಸಾಧಕರು, ಅತಿಥಿಗಳು ಆಸೀನರಾಗಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.