ನಮ್ಮ ಬೆಂಗಳೂರು ಪ್ರತಿಷ್ಠಾನ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಭ್ರಷ್ಟಾಚಾರ ಮುಕ್ತ ಬೆಂಗಳೂರಿಗೆ ನಾಗರಿಕ ಸನ್ನದು

ಭ್ರಷ್ಟಾಚಾರ ಮುಕ್ತ ಪಾರದರ್ಶಕ ಬಿಬಿಎಂಪಿ ಹಾಗೂ ನಾಗರಿಕ ಕೇಂದ್ರದ ಅದ್ಭುತ ಬೆಂಗಳೂರಿಗಾಗಿ `ನಮ್ಮ ಬೆಂಗಳೂರು ಪ್ರತಿಷ್ಠಾನ'ವು ನಾಗರಿಕರ ಸಹಭಾಗಿತ್ವದಲ್ಲಿ `ನಾಗರಿಕ ಸನ್ನದು' ಬಿಡುಗಡೆ ಮಾಡಿತು...

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಪಾರದರ್ಶಕ ಬಿಬಿಎಂಪಿ ಹಾಗೂ ನಾಗರಿಕ ಕೇಂದ್ರದ ಅದ್ಭುತ ಬೆಂಗಳೂರಿಗಾಗಿ `ನಮ್ಮ ಬೆಂಗಳೂರು ಪ್ರತಿಷ್ಠಾನ'ವು ನಾಗರಿಕರ ಸಹಭಾಗಿತ್ವದಲ್ಲಿ `ನಾಗರಿಕ ಸನ್ನದು' ಬಿಡುಗಡೆ ಮಾಡಿತು.

ನಮ್ಮ ಬೆಂಗಳೂರು ಫೌಂಡೇಷನ್ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ ಮಾತನಾಡಿ, ನಮ್ಮ ನಗರದ ಸ್ಥಿತಿಗತಿಯ ವರದಿ, ಕಾರ್ಪೋರೇಟರ್ ರಿಪೋರ್ಟ್ ಕಾರ್ಡ್ ಮೂಲಕ ಕಾರ್ಪೊರೇಟರ್ ಗಳ ಕೆಲಸದ ಪ್ರದರ್ಶನ ಮಾಪನ, ಅಭಿವೃದ್ಧಿ ಯೋಜನೆಗಳಲ್ಲಿ ವಾರ್ಡ್ ಭಾಗವಹಿಸುವಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ವಾರ್ಡ್ ಮಟ್ಟದ ಮಾಹಿತಿ ಲಭ್ಯತೆಗಳನ್ನು ಸಾರ್ವಜನಿಕ ಸಮೀಕ್ಷೆ ಮೂಲಕ ವರದಿ ಸಂಗ್ರಹಿಸಲಾಗಿದ್ದು, ಈ ಎಲ್ಲ ಅಂಶಗಳನ್ನು ಸನ್ನದು ಒಳಗೊಂಡಿದೆ ಎಂದು ತಿಳಿಸಿದರು.

ಗಂಭೀರ ದುರಾಡಳಿತ ನಗರದ ಭವಿಷ್ಯಕ್ಕೆ ಮಾರಕವಾಗಿದೆ. ಆದ್ದರಿಂದ ಜೀವನದ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವಂತಹ ನಾಗರಿಕರು ಜತೆಗೂಡಿ ಉತ್ತಮ ಆಡಳಿತ ತರುವ ನಿಟ್ಟಿನಲ್ಲಿ ಹೋರಾಟ ಮಾಡುವ ಅಗತ್ಯವಿದೆ. 198 ವಾರ್ಡ್‍ಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಬೇಕಿದೆ. ಆದರೆ, ಸದ್ಯಕ್ಕೆ 24 ವಾರ್ಡ್‍ಗಳಿಗೆ ವಾರ್ಡ್ ಅಭಿವೃದ್ಧಿ ಯೋಜನೆಗಳ ಅನಾವರಣ ಮಾಡಲಾಗಿದೆ. ನಗರದಲ್ಲಿ ಆಡಳಿತವನ್ನು ಗಮನಿ ಸಲು ಕಾರ್ಯ ವಿಭಾಗದ ರಚನೆ, ಆಡಳಿತದ ಗುಣಮಟ್ಟ ಮಾಪನ ಅಳೆಯುವ, ಬೆಂಗಳೂರು ಅಬಿsವೃದಿಟಛಿಗೆ ತಡೆಯಾ ಗಿರುವ ಸಮಸ್ಯೆಗಳು ಹಾಗೂ ಪ್ರತಿಬಂಧಕಗಳನ್ನು ಗುರುತಿಸಲು, ಸವಾಲುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ತಂತ್ರಗಾರಿಕೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಗುತ್ತಿಗೆ ಹಂಚಿಕೆ ಹಾಗೂ ಯೋಜನೆ ಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಖಾತ್ರಿಪಡಿಸಬೇಕು. ವಾರ್ಡ್‍ಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡುವ ಪ್ರದೇಶ ಸಭೆಗಳಿಗೆ ಅಧಿಕಾರ ನೀಡಬೇಕು ಎಂದು ಸಿವಿಕ್ ಟ್ರಸ್ಟಿ ಕಾತ್ಯಾಯಿನಿ ಕರೆ ನೀಡಿದರು. ಈ ಸಂದರ್ಭದಲ್ಲಿ ಉಷಾ ಧನರಾಜ್ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT