ಜಿಲ್ಲಾ ಸುದ್ದಿ

4 ಮಳಿಗೆಗೆ ಬೆಂಕಿ: ಅಪಾರ ಹಾನಿ

ಬೆಂಗಳೂರು: ಮಾರತ್‍ಹಳ್ಳಿ ಮುಖ್ಯರಸ್ತೆಯಲ್ಲಿರುವ ಐದು ಅಂತಸ್ತಿನ ಶಾಪಿಂಗ್ ಮಳಿಗೆ `ಬ್ರ್ಯಾಂಡ್ ಫ್ಯಾಕ್ಟರಿ'ಯಲ್ಲಿ ಶುಕ್ರವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ದ ಅಗ್ನಿಶಾಮಕ ಸಿಬ್ಬಂದಿ, ಸತತ ಎಂಟು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗುರುವಾರ ರಾತ್ರಿ 11 ಗಂಟೆಗೆ
ವಹಿವಾಟು ಮುಗಿದ ನಂತರ ಮಳಿಗೆಗೆ ಬಾಗಿಲು ಹಾಕಲಾಗಿತ್ತು. ಕಟ್ಟಡದ ಭದ್ರತಾ ಸಿಬ್ಬಂದಿ ಹೊರಗಿನ ಶೆಡ್‍ನಲ್ಲಿ ಮಲಗಿದ್ದರು. ನಸುಕಿನ 3.30ರ ಸುಮಾರಿಗೆ ಕಟ್ಟಡದಿಂದ ದಟ್ಟ ಹೊಗೆ
ಬರುತ್ತಿರುವುದನ್ನು ಕಂಡ ದಾರಿಹೋ ಕರು ಕೂಡಲೇ ಅಗ್ನಿಶಾಮಕ ಕೊಠಡಿಗೆ ಮಾಹಿತಿ ನೀಡಿದರು. ಭಾರಿ ಪ್ರಮಾಣದಲ್ಲಿ ಹೊಗೆ ಬರುತ್ತಿದ್ದ ಕಾರಣ ಸಿಬ್ಬಂದಿ ಒಳಗೆ ತೆರಳಿ ಅಗ್ನಿಶಾಮಕ ಸಾಧನಗಳ ಬಳಕೆ ಸಾಧ್ಯವಾಗಲಿಲ್ಲ.

ಆರಂಭದಲ್ಲಿ ಐದು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬಹುಮಹಡಿ ಕಟ್ಟಡದಲ್ಲಿ ಬೆಂಕಿಯ ಆರ್ಭಟ ಹೆಚ್ಚಿದ್ದರಿಂದ ಕೊನೆಗೆ 23 ಅಗ್ನಿಶಾಮಕ ವಾಹನಗಳು
ಕಾರ್ಯಚರಣೆಗೆ ಇಳಿದವು. ಪೀಠೋಪಕರಣ ಸೇರಿದಂತೆ ಒಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಈ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಫ್ಯಾಕ್ಟರಿಯ ವ್ಯವಸ್ಥಾಪಕ ಶ್ರೀಕಾಂತ್ ಅವರನ್ನುವಿಚಾರಿಸಲಾಗುತ್ತಿದೆ ಎಂದು  ಅಧಿಕಾರಿಗಳು ಮಾಹಿತಿ ನೀಡಿದರು.

SCROLL FOR NEXT