ಬೆಂಗಳೂರು: ಮುಂದಿನ ಎರಡು ವರ್ಷದೊಳಗೆ ಈಗ ಮೂರೂವರೆ ಲಕ್ಷದಷ್ಟಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ಸ್‍ಗಳ ಸಂಖ್ಯೆಯನ್ನು ಹತ್ತು ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಮ್ಮಿಕೊಂಡಿದೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಾಲಯದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಆಜೀವ ಸದಸ್ಯರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಸ್ಕೌಟ್ಸ್ ನಿಯಮಗಳನ್ನು ಪರಿಷ್ಕರಿಸಿ ತರಬೇತಿಯ ಗುಣಮಟ್ಟ ಹೆಚ್ಚಿಸಲಾಗುವು ದು. ಇನ್ನೂ ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಯತಿರಾಜ ಮಠದ ಯತಿರಾಜ ಜೀಯರ್ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಜಾತೀಯತೆ ಕಾಪಾಡಲು, ತಾರತಮ್ಯ
ಹೋಗಲಾಡಿಸಲು ಸಂತರು ಉತ್ತಮ ವಿಚಾರಗಳನ್ನು ಬೋಧಿಸಿದರು. ಪಠ್ಯೇತರ ಶಿಕ್ಷಣವಾಗಿರುವ ಸ್ಕೌಟ್ಸ್ ಮತ್ತು ಗೈಡ್ಸ್ ದೇಶದಲ್ಲಿ ಭಾವೈಕ್ಯತೆ ಕಾಪಾಡಲು ಶ್ರಮಿಸುತ್ತಿದೆ ಸಹೋದರತ್ವ ಬಾಂಧವ್ಯ ಬೆಳೆಸಲು ಕೊಡುಗೆ ನೀಡುತ್ತಿದೆ ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಕಾರ್ಯದರ್ಶಿ ಕೊಂಡಜ್ಜಿ ಷಣ್ಮುಖಪ್ಪ, ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಲಿ¸ ಸದಸ್ಯ ಮೋಹನ್ ಕೊಂಡಜ್ಜಿ ಜತೆಗೆ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.