ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಬೆಂಗಳೂರು ಮಹಿಳೆಯರಿಗೆ ಪೊಲೀಸ್ ಹೆಲ್ಪ್ ಲೈನ್

ಮಹಿಳೆಯರು ಸಂಚರಿಸುವ ವಾಹನಗಳ ಮೇಲೆ ಇನ್ನು ಪೊಲೀಸರ ಕಣ್ಣು? ಇದೇನಿದು ಪೊಲೀಸರ ಕಣ್ಣು ಹೇಗೆ ಎಂಬ ಆಶ್ಟರ್ಯ ಬೇಡ. ..

ಮಹಿಳೆಯರು ಸಂಚರಿಸುವ ವಾಹನಗಳ ಮೇಲೆ ಇನ್ನು ಪೊಲೀಸರ ಕಣ್ಣು? ಇದೇನಿದು ಪೊಲೀಸರ ಕಣ್ಣು ಹೇಗೆ ಎಂಬ ಆಶ್ಟರ್ಯ ಬೇಡ.  ಕ್ಯಾಬ್ ಹಾಗೂ ಆಟೋಗಳಲ್ಲಿ  ಸಂಚರಿಸುವ ಮಹಿಳೆಯರ ಮೇಲಿನ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸರು ಹೊಸ ಸಹಾಯವಾಣಿ
ಆರಂಭಿಸಿದ್ದಾರೆ. ಆ ವಾಹನದ  ಸಂಖ್ಯೆಯನ್ನು ನೀವು ಪೊಲೀಸರಿಗೆ ರವಾನಿಸದರೇ ಸಾಕು, ಅದನ್ನು ಜಿಪಿಎಸ್ ಗೆ ಅಳವಡಿಸಿ ಆ ವಾಹನ ಎಲ್ಲಿ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಹಾಯಾವಗುತ್ತದೆ ಎಂಬುದು ಪೊಲೀಸರ ಆಂಬೋಣ. ಈ ಮೂಲಕ ಕ್ಯಾಬ್ ಹಾಗೂ ಆಟೋಗಳಲ್ಲಿ ನಡೆಯುವ ನಡೆಯುವ ಸುಲಿಗೆ,ಅಪಹರಣ, ದರೋಡೆಯಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು  ಮುಂದಾಗಿದ್ದಾರೆ.

ಡ್ರಾಪ್ ನೆಪದಲ್ಲಿ ಇಂತಹ ಪ್ರಕ ರಣಗಳು ಹೆಚ್ಚುತ್ತಿವೆ. ಇದಕ್ಕೆ ಇತ್ತೀ ಚೆಗೆ ಬಿಪಿಓ ಉದ್ಯೋಗಿ ಮೇಲೆ ನಡೆದ ಗ್ಯಾಂಗ್ ರೇಪ್ ಉದಾ ಹರಣೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ತಲ್ಲಣ ಮೂಡಿದೆ. ಹಾಗಾಗಿ ಕೊನೆಗೂ ಎಚ್ಚೆತ್ತ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಅದಕ್ಕಾಗಿ ಸಹಾಯವಾಣಿಯೊಂದನ್ನು ಆರಂಭಿಸಿದ್ದಾರೆ.

99697 77888ಕ್ಕೆ ಸಂದೇಶ ರವಾನಿಸಿ
ಮಹಿಳೆಯರು ಒಂಟಿಯಾಗಿ ಕ್ಯಾಬ್ ಅಥವಾ ಆಟೋದಲ್ಲಿ ಸಂಚರಿಸುವಾಗ, ವಾಹನ ಹತ್ತುವ ಮೊದಲು ಆ ವಾಹನದ ನಂಬರ್‍ನ್ನು 99697 77888ಗೆ ಸಂದೇಶ ಮೂಲಕ ಕಳುಹಿಸಬೇಕು. ತಕ್ಷಣ ಆ ವಾಹನದ ನಂಬರ್ ಪೊಲೀಸ್ ಕಂಟ್ರೋಲ್ ರೊಂಗೆ ಹೋಗುತ್ತದೆ. ಆಗ ಕಂಟ್ರೋಲ್ ರೂಂನಲ್ಲಿನ ಸಿಬ್ಬಂದಿಗಳು ಆ ವಾಹನದ ನಂಬರ್‍ನ್ನು ಜಿಪಿಆರ್‍ಎಸ್‍ಗೆ ಅಳವಡಿಸುತ್ತಾರೆ. ಇದರಿಂದ ವಾಹನ ಎಲ್ಲಿ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದ್ದು, ಒಂದು ವೇಳೆ ಅತ್ಯಾಚಾರ, ಸುಲಿಗೆಯಂತಹ ಅವಘಡ ನಡೆದರೆ, ಕೂಡಲೇ ವಾಹನ ಎಲ್ಲಿದೆ, ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲು ಸಹಾಯವಾಗುತ್ತದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT