ಸಾಹಿತಿ ನಿರುಪಮಾ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಲೇಖಕಿಯರಿಗೆ ಸ್ಪೂರ್ತಿ ನಿರುಪಮಾ: ಲೀಲಾದೇವಿ

ವೈದಿಕ ಸಂಪ್ರದಾಯದಲ್ಲಿ ಹುಟ್ಟಿ, ಜಾತಿ ಕಟ್ಟುಪಾಡುಗಳಿಂದ ಹೊರಬಂದು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕ್ರೀಯಾಶೀಲ ವ್ಯಕ್ತಿತ್ವವಾಗಿ ಗುರುತಿಸಿಕೊಂಡ ಸಾಹಿತಿ ನಿರುಪಮಾ...

ಬೆಂಗಳೂರು: ವೈದಿಕ ಸಂಪ್ರದಾಯದಲ್ಲಿ ಹುಟ್ಟಿ, ಜಾತಿ ಕಟ್ಟುಪಾಡುಗಳಿಂದ ಹೊರಬಂದು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕ್ರೀಯಾಶೀಲ ವ್ಯಕ್ತಿತ್ವವಾಗಿ ಗುರುತಿಸಿಕೊಂಡ ಸಾಹಿತಿ ನಿರುಪಮಾ ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಿಂದ ವಿಜಯಕಾಲೇಜಿನಲ್ಲಿ ಏರ್ಪಡಿಸಿದ್ದ ನಿರುಪಮಾ ಸಾಹಿತ್ಯ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೇಖಕಿ ನಿರುಪಮಾ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿರದೆ ಕಲೆ, ಸಂಗೀತ, ದಾಸರಪದ, ಚುಟುಕುಗಳು, ಕಾದಂಬರಿ, ವಿಮರ್ಶೆ, ಸಂಶೋಧನೆ ಮೊದಲಾದ ಪ್ರಕಾರಗಳಲ್ಲಿ ಪರಿಣಿತಿ ಸಾಧಿಸಿದ್ದರು ಎಂದರು.

ಮಕ್ಕಳ ಸಾಹಿತ್ಯ ಹುಟ್ಟಿ ಹಾಕಿ ಸಮ್ಮೇಳನ ಮಾಡಿ ಜಗತ್ತಿಗೆ ಪರಿಚಯಿಸಿದ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಹೊಸ ಲೇಖಕಿಯರು ಬರೆದಿರುವ ಸಾಹಿತ್ಯಲೇಖನಗಳನ್ನು ಮುದ್ರಣ ಮಾಡಲು ಮೊದಲು ಮುದ್ರಣ ಸಂಸ್ಥೆಯನ್ನು ಆರಂಬಿsಸಿದ ಕೀರ್ತಿ ನಿರುಪಮಾ ಅವರಿಗೆ ಸಲ್ಲುತ್ತದೆ. ಸಪ್ತ ಭಾಷೆಗಳಲ್ಲಿ ಪರಿಣಿತಿ ಹೊಂದಿರುವ ಅವರು ಬೇರೆ ಭಾಷೆಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತೆಲುಗು ಕನ್ನಡದ ಬಾಂಧವ್ಯ ಬೆಸೆಯುವಲ್ಲಿ ನಿರುಪಮಾ ಅವರ ಪಾತ್ರ ಅಪಾರ ಎಂದರು.

ನಿರುಪಮಾ ಅವರದು ಮೂಲತಃ ಸಂಶೋಧನಾಶೀಲ ಪ್ರವೃತ್ತಿ. ಇತಿಹಾಸ ಪುರಾಣ ಮಹಾಕಾವ್ಯಗಳ ಅಧ್ಯಯನದತ್ತ ಹೆಚ್ಚಿನ ಆಸಕ್ತಿ ವಹಿಸಿ, ಸಂಶೋಧನಾತ್ಮಕ ಕೃತಿಗಳನ್ನು ರಚಿಸಿ ಐತಿಹಾಸಿಕ ಚರಿತ್ರೆ, ಬರೆದಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ನಿರುಪಮಾ ಅವರಿಗೆ ಸೇರಬೇಕು. ನಿರಂತರವಾ ದ ಸಾಹಿತ್ಯದ ತುಡಿತ ಹೊಂದಿದ್ದ ಅವರು ಸಾಹಿತ್ಯ ಉಳಿಸಿ ಬೆಳೆಸುವ ಸೃಜನಾಶೀಲ ವ್ಯಕ್ತಿಯಾಗಿದ್ದರು. ಅವರ ಸಾಹಿತ್ಯದ ಮಿಡಿತ ನಿಂತ ನೀರಾಗಿರಲಿಲ್ಲ. ಹಲವಾರು ಹೊಸ ಪ್ರತಿಭೆಗಳಿಗೆ ಮಾರ್ಗ ದರ್ಶಕಿಯಾಗಿದ್ದ ಅವರು ಕನ್ನಡ ಸಾಹಿತ್ಯಲೋಕ
ದ ಲೇಖಕಿಯರಿಗೆ ಸ್ಪೂರ್ತಿಯಾಗಿ ದ್ದಾರೆ. ಆದರೆ ಇಂತಹ ಅದ್ಭುತ ಸಾಹಿತಿಗೆ ಜ್ಞಾನಪೀಠ ಪ್ರಶಸ್ತಿ ಬಾರದೇ ಇರುವುದು ದುಃಖವಾಗಿದೆ ಎಂದರು.

ಭಾಷೆಗಳ ಕರಗತ ಮಾಡಿಕೊಳ್ಳುವ ಆಂತರಿಕಶಕ್ತಿ ಅವರಲ್ಲಿತ್ತು. ಅಪಾರವಾದ ಸಾಂಸ್ಕೃತಿಕ ಸೇವೆಯನ್ನು ಮಾಡಿದ ಅವರ ದೃಷ್ಟಿಕೋನ ವ್ಯಾಪಕವಾದದ್ದು, ಕಲ್ಪನೆಯ ಮನೋಭಾವನೆ ವೈಶಿಷ್ಟತೆ ಅದ್ಭುತ. ಅವರ ಸಾಹಿತ್ಯಕ್ಕೆ ಅಪಾರ ಓದುಗರಿದ್ದಾರೆ. ಸಾಹಿತ್ಯ ಪ್ರಚಾರಕ್ಕಾಗಿ ಅವರು ಕರ್ನಾಟಕ ಹರಿದಾಸ ಸಾಹಿತ್ಯ ಪರಿಷತ್ತನ್ನು ಕಟ್ಟಿದ್ದರು. ಇದರಿಂದ ಅವರಲ್ಲಿ ಸಂಘಟನಾತ್ಮಕ ಶಕ್ತಿಯೂ ಇತ್ತು ಎಂದು ತಿಳಿಯುತ್ತದೆ. ಹೊಸ ಲೇಖಕಿಯರಿಗೆ ಅವರ ಕೃತಿಗಳು ಬೆಳಕು ಕಾಣುವುದಕ್ಕೆ ದಾರಿ ಮಾಡಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತ್ಯ ಚಟುವಟಿಕೆ ಮಜಲುಗಳನ್ನು ಪರಿಚಯ ಮಾಡಿದ ಕೀರ್ತಿ ನಿರುಪಮಾ ಅವರಿಗೆ ಸಲ್ಲಬೇಕು ಎಂದು ಬಿಎಂಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಪಿ.ವಿ.ನಾರಾಯಣ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಿರ್ಣಯಕ್ಕೆ ಒಪ್ಪಬೇಕು, ವರಿಷ್ಠರು ಹೇಳಿದಾಗ ದೆಹಲಿಗೆ ಹೋಗುವೆ: ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ; ಡಿಕೆಶಿ ಆಪ್ತರ ನಡೆಗೆ CM ತೀವ್ರ ಅಸಮಾಧಾನ

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

'ಸಿಎಂ ಕುರ್ಚಿ' ಕದನದ ನಡುವೆ ವರದಿಗಾರರ ಪ್ರಶ್ನೆಗೆ ಕೆರಳಿದ ಡಿಕೆಶಿ! ಹೇಳಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ: ನಾಯಕ ಯಾರು? ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್! ನಾಳೆ ನಿರ್ಧಾರ

"ನಾವೂ ಕಲಿಯಬೇಕು": ಮಾಮ್ದಾನಿ-ಟ್ರಂಪ್ ಭೇಟಿಯ ಬಗ್ಗೆ ತರೂರ್ ಪೋಸ್ಟ್; ನೀವು ಹೇಳಿದ್ದು ಸರಿ ಆದರೆ ರಾಹುಲ್ ಗೆ ಇದೆಲ್ಲಾ ಅರ್ಥ ಆಗತ್ತಾ?: BJP

SCROLL FOR NEXT