ಜಿಲ್ಲಾ ಸುದ್ದಿ

ಬಸವಣ್ಣರಿಗೊಂದು ನ್ಯಾಯ, ಕೆಂಪೇಗೌಡರಿಗೊಂದು ನ್ಯಾಯ: ನಂಜಾವ ಧೂತ ಸ್ವಾಮೀಜಿ

ಬೆಂಗಳೂರು: `ಗದಗದಲ್ಲಿ ಬಸವಣ್ಣನವರ ಬೃಹತ್ ಪ್ರತಿಮೆ ಸ್ಥಾಪಿಸಲಾಗಿದೆ. ಅದರಂತೆ, ರಾಜಧಾನಿಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕು. ಅವರ ಕುರಿತು ವಸ್ತು ಸಂಗ್ರಹಾಲಯ ಮಾಡಬೇಕು,' ಎಂದು ಗುರುಗುಂಡೇಶ್ವರ ಮಹಾಸಂಸ್ಥಾನದ ನಂಜಾವ ಧೂತ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯ ಒಕ್ಕಲಿಗರ ಒಕ್ಕೂಟ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ `ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ನೂತನ ಮೇಯರ್ ಹಾಗೂ ಉಪಮೇಯರ್‍ಗೆ ಸನ್ಮಾನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಐಕ್ಯ ಸ್ಥಳ ಪತ್ತೆಯಾಗಿದೆ. ಕಳೆದ ಎರಡು ತಿಂಗಳಿನಿಂದಲೂ ಸುದ್ದಿಯಲ್ಲಿರುವ ಐಕ್ಯ ಸ್ಥಳದ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಸವಣ್ಣರಿಗೊಂ ದು ನ್ಯಾಯ, ಕೆಂಪೇಗೌಡರಿಗೊಂದು ನ್ಯಾಯವೇ. ಕೂಡಲೇ ಅವರ ಜನ್ಮ ಸ್ಥಳ ಪತ್ತೆ ಮಾಡಿ ಅಲ್ಲಿ ವಸ್ತು ಸಂಗ್ರಹಾಲಯ ಮಾಡಬೇಕು. ಗುಜರಾತ್‍ನಲ್ಲಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆ ರೂಪಿಸುತ್ತಿರುವಂತೆ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕು ಎಂದರು.

ಇದೇ ವೇಳೆ 10ನೇ ತರಗತಿ, ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಮನೀಶ್, ಪುನೀತ್‍ಗೌಡ, ಪಿ.ಸೋನಿಕಾ, ಶ್ರೇಯಾ ಶ್ರೀನಿವಾಸ್, ಬಿ.ಆರ್.ಕಾವ್ಯ, ನಿಹಾರಿಕಾ, ಬಿ.ಜೆ.ಹರ್ಷ, ಎಂ.ಸಿ.ತೇಜಸ್ವಿನಿ, ಹರ್ಷಿತಾ, ವಂದನಾ, ಸುಖೇಶ್ ಎಂಬ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಡಿಕೆ-ಶಿ ಡಿಸಿಎಂ ಆಗಲಿ ಸಚಿವ ಸಂಪುಟ ವಿಸ್ತರಣೆ ಮಾಡುವುದಾದಲ್ಲಿ ಇನ್ನೂ ಮೂರ್ನಾಲ್ಕು ಮಂದಿ ಒಕ್ಕಲಿಗ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿದರೆ ಡಿ.ಕೆ.ಶಿವಕುಮಾರ್ ಅವರನ್ನೂ ಉಪ ಮುಖ್ಯಮಂತ್ರಿ ಮಾಡಬೇಕು. ಸಚಿವ ಅಂಬರೀಶ್ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಅವರನ್ನು ಪರೋಕ್ಷವಾಗಿ ನಿಂದಿಸಲಾಗುತ್ತದೆ. ಅವರನ್ನೇ ಏಕೆ ಗುರಿಯಾಗಿಟ್ಟುಕೊಂಡು ನಿಂದಿಸುತ್ತೀರಿ. ಬೇರೆ ಸಚಿವರಲ್ಲಿ ತಪ್ಪು ಕಾಣುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.

SCROLL FOR NEXT