ಯಾಕೆ ಕಾಡುತಿದೆ ಸುಮ್ಮನೆ ನನ್ನನು ಕೃತಿ ಲೋಕಾರ್ಪಣೆ 
ಜಿಲ್ಲಾ ಸುದ್ದಿ

'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಕೃತಿ ಲೋಕಾರ್ಪಣೆ

ಅಂತರ್ಜಾಲ ಪತ್ರಿಕೆ ಅವಧಿಯ ಸಂಯೋಜಕಿ ಎನ್ ಸಂಧ್ಯಾರಾಣಿಯವರ ಚೊಚ್ಚಲ ಕೃತಿ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಲೋಕಾರ್ಪಣೆ ...

ಬೆಂಗಳೂರು: ಪ್ರತಿಯೊಂದು ಭಾಷೆಯ ನಿಜವಾದ ಸಾಮರ್ಥ್ಯವಿರುವುದು ಭಾಷಾಪಯೋಗಿ ಗುಣದಲ್ಲಿ ಎಂದು ಕೆವೈ ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಿನ್ನೆ (ಅಕ್ಟೋಬರ್ 18)ರಂದು ಅಂತರ್ಜಾಲ ಪತ್ರಿಕೆ ಅವಧಿಯ ಸಂಯೋಜಕಿ ಎನ್ ಸಂಧ್ಯಾರಾಣಿಯವರ ಚೊಚ್ಚಲ ಕೃತಿ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಈ ಕೃತಿ ಆಡದೇ ಇರುವ ಪಿಸುಮಾತು ಎಂದಿದ್ದಾರೆ.
ಹೃದಯಂಗಮವಾದ ಬರವಣಿಗೆ ಸಂಧ್ಯಾ ಅವರದ್ದು. ಇಡೀ ಕೃತಿಯಲ್ಲಿ ಮಾರ್ದವತೆ ಇದೆ, ಅದು ಓದುಗರನ್ನು ಕಾಡುತ್ತದೆ ಎಂದು ಚಂದ್ರಶೇಖರ್ ಆಲೂರ್ ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಸಂಧ್ಯಾ ಅವರ ಬರಹಗಳು ಕನ್ನಡದ ಬಾವುಲ್ ಎಂದು ಜಿಎನ್ ಮೋಹನ್ ಹೇಳಿದ್ದು, ಕೃತಿ ಪರಿಚಯ ಮಾಡಿದ ಕತೆಗಾರ್ತಿ ಜಯಶ್ರೀ ಕಾಸರವಳ್ಳಿ ಅವರು ಯಾಕೆ ಕಾಡುತಿದೆ ಸುಮ್ಮನೆ ನನ್ನನು ಕೃತಿ ಮಾನವೀಯ ಸಂಬಂಧಗಳನ್ನು ಹುಡುಕುತ್ತಿರುವ ಹೆಣ್ಣೊಬ್ಬಳ ಒಳದನಿ ಎಂದು ಹೇಳಿದ್ದಾರೆ.
ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ ನನ್ನೊಳಗಿನ ಮಾತುಗಳನ್ನು ಅಂಕಣದಲ್ಲಿ ದಾಖಲಿಸುತ್ತಾ ಹೋದೆ. ಓದುಗರ ಪ್ರೀತಿ, ಪ್ರೋತ್ಸಾಹ ನನ್ನನ್ನು ಮತ್ತಷ್ಟು ಬರೆಯುವಂತೆ ಮಾಡಿತು. ಅಂಕಣ ಬರೆಯುವ ಮೂಲಕ ನನ್ನ ದೃಷ್ಟಿಕೋನಗಳೂ ಬದಲಾಗುತ್ತಾ ಹೋದವು ಎಂದು ಲೇಖಕಿ ಸಂಧ್ಯಾರಾಣಿ ತಮ್ಮ ಕೃತಿ ರೂಪುಗೊಂಡ ಬಗೆಯನ್ನು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕೆವೈ ನಾರಾಯಣ ಸ್ವಾಮಿ, ಈಟಿವಿ ನ್ಯೂಸ್ ಕನ್ನಡದ ಪ್ರಧಾನ ಸಂಪಾದಕರಾದ ಜಿಎನ್  ಮೋಹನ್, ಚಂದ್ರಶೇಖರ ಆಲೂರು, ಜಯಶ್ರೀ ಕಾಸರವಳ್ಳಿ ಮತ್ತು ಪಲ್ಲವ ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಿದ್ದರು. ಯಾಕೆ ಕಾಡುತಿದೆ ಸುಮ್ಮನೆ ನನ್ನನು ಪುಸ್ತಕವನ್ನು ಪಲ್ಲನ ಪ್ರಕಾಶನ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video