ಬೆಂಗಳೂರು: ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬರ್ಮಾ ದೇಶದ ಪ್ರಜೆಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊತ್ತನೂರು ಸಮೀಪದ ಬೆಳ್ಳಳ್ಳಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ.
ಚಿಂದಿ ಆಯುತ್ತಿದ್ದ ಅಬ್ದುಲ್ ಖಾದರ್ (18) ಕೊಲೆಯಾದವ, ಆರೋಪಿಗಳಾದ ಅರುಣ್, ಜೈನಾಬ್, ರಿಜ್ವಾನ್ ತಲೆಮರೆಸಿಕೊಂಡಿದ್ದಾರೆ. ಖಾದರ್ ಮತ್ತು ಅರೋಪಿಗಳು ಕೆಲಸ ಅರಸಿ ಒಂದೂವರೆ ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು.
ಬೆಳ್ಳಳ್ಳಿಯಲ್ಲಿರುವ ಇಸೂಬ್ ಖಾನ್ ಎಂಬುವರ ಜಮೀನು ನೋಡಿಕೊಂಡು ಅಲ್ಲೇ ವಾಸವಾಗಿದ್ದರು. ಗುರುವಾರ ರಾತ್ರಿ 10 ಗಂಟೆಯಲ್ಲಿ ಅರುಣ್ ಮತ್ತು ಖಾದರ್ ನಡುವೆ ಹಣದ ವಿಷಯಕ್ಕೆ ಜಗಳ ಆರಂಭವಾಗಿದೆ. ಆಗ ಅರುಣ್ ಖಾದರ್ ಮೇಲೆ ಹಲ್ಲೆ ನಡೆಸಿದ್ದಾನೆ. ದೊಣ್ಣೆಯಿಂದ ಹೊಡೆದ್ದರಿಂದ ನಿತ್ರಾಣನಾಗಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಸಾವಿಗೀಡಾಗಿದ್ದಾರೆ. ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.