ಜಿಲ್ಲಾ ಸುದ್ದಿ

ತಾಯಿಗೆ ಕಾಯಿಲೆ: ನೊಂದ ನಿರ್ದೇಶಕ ಆತ್ಮಹತ್ಯೆ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಕಷ್ಟ ನೋಡಲಾಗದೆ ನೊಂದ ಮಗ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಜಯ್ ನಗರ ಕೆಇಬಿ ಬಡಾವಣೆಯಲ್ಲಿ ನಡೆದಿದೆ.

ನಿರ್ದೇಶಕ, ಟಿವಿ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದ ಹೋಮಿಯೋಪಥಿ ವೈದ್ಯ ಉಮಾಶಂಕರ್ (61)ಆತ್ಮಹತ್ಯೆ ಮಾಡಿಕೊಂಡವರು. ಹೆತ್ತವಳ ಕೂಗು, ಸಿಬಿಐ ವಿಜಯ್ ಚಿತ್ರಗಳನ್ನು ನಿರ್ದೇಶಿರುವ ಉಮಾಶಂಕರ್ ಚಿತ್ರರಂಗದಿಂದ ದೂರ ಸರಿದಿದ್ದರು.

ಜ್ಯೋತಿಷ್ಯ ಹೇಳುವುದರ ಜತೆಗೆ ಹೋಮಿಯೋಪತಿ ವೈದ್ಯರಾಗಿ ಮನೆಯಲ್ಲೆ ಚಿಕಿತ್ಸೆ ನೀಡುತ್ತಿದ್ದರು. ಸುಮಾರು 80 ವರ್ಷದ ತಾಯಿ ಪಾಶ್ರ್ವವಾಯು ಪೀಡಿತರಾಗಿದ್ದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಬದುಕುಳಿಯುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ನೊಂದ ಉಮಾಶಂಕರ್ ಮಂಗಳವಾರ ನಸುಕಿನ 4.30ರ ಸುಮಾರು ನೇಣಿಗೆ ಶರಣಾಗಿದ್ದಾರೆ. ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೀಟಿ ವಂಚನೆ ಆರೋಪಿ ಬಂಧನ: ಚೀಟಿ ವ್ಯವಹಾರ ನಡೆಸಿ ಸಾರ್ವಜನಿಕರಿಂದ ಕೋಟ್ಯಂತರ ಸಂಗ್ರಹಿಸಿ ತಲೆಮರೆಸಿ- ಕೊಂಡಿದ್ದ ಆರೋಪಿ ಕುಮಾರ್ ಎಂಬಾತನನ್ನು ಜ್ಞಾನಭಾರತಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಲ್ಲತ್ತಹಳ್ಳಿ ಸಮೀಪದ ಐಟಿಐ ಲೇಔಟ್‍ನಲ್ಲಿ 70ಕ್ಕೂ ಹೆಚ್ಚು ಮಹಿಳೆಯರಿಂದ ಚೀಟಿ ವ್ಯವಹಾರದ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಹಣ ಸಂಗ್ರಹಿಸಿ ತಲೆಮರೆಸಿಕೊಂಡಿದ್ದ.

SCROLL FOR NEXT