ಡಾ.ಎಂ.ಎಂ. ಕಲಬುರ್ಗಿ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಡಾ. ಕಲಬುರ್ಗಿ ಹತ್ಯೆ ಸಂಶೋಧನೆಗೇ ಗುಂಡಿಟ್ಟಂತೆ

ಯಾವುದೇ ಧರ್ಮದಲ್ಲಿ ಕಳ್ಳತನ, ಕೊಲೆ ಮಾಡು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ, ಕೆಲವೊಂದು ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರನ್ನು...

ಬೆಂಗಳೂರು: ಯಾವುದೇ ಧರ್ಮದಲ್ಲಿ ಕಳ್ಳತನ, ಕೊಲೆ ಮಾಡು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ, ಕೆಲವೊಂದು ಕೋಮುವಾದಿ ಶಕ್ತಿಗಳು ಕಲಬುರ್ಗಿ ಅವರನ್ನು ಕೊಲೆಗೈದಿರುವುದು ಸಂಶೋಧನೆಗೇ ಗುಂಡಿಟ್ಟಂತೆ ಎಂದು ನಾಡೋಜ ಡಾ.ಕಮಲಾ ಹಂಪನಾ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬನ್ ಪಾರ್ಕ್‍ನ ಎನ್‍ಜಿಒ ಭವನದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಡಾ.ಎಂ.ಎಂ. ಕಲಬುರ್ಗಿ ಅವರ ಹತ್ಯೆ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಅಭಿಪ್ರಾಯಗಳು ಬೇರೆ ಬೇರೆಯಾಗಿರುತ್ತವೆ. ಸಂಶೋಧಕರು ಯಾವ ದೃಷ್ಟಿಯಿಂದ ವಿಷಯವನ್ನು ನೋಡಿರುತ್ತಾರೆ ಎಂಬುದನ್ನು ತಿಳಿದು ಸತ್ಯವನ್ನು ಅರ್ಥೈಸಿಕೊಳ್ಳಬೇಕು. ಅರ್ಥವಾಗುವ ಮುನ್ನ ಯಾವುದೇ ನಿರ್ಧಾರಕ್ಕೆ ಬರಬಾರದು ಎಂದರು.

ಸಂಶೋಧನೆಗೆ ಕೊನೆ ಇಲ್ಲ: ವೈದಿಕ ಧರ್ಮವೇ ಅಲ್ಲ, ವೀರಶೈವ ಲಿಂಗಾಯತ ಬೇರೆ, ವೀರಶೈವ ಅತ್ಯಂತ ಪ್ರಾಚೀನ ಧರ್ಮ ಎಂದು ಹೇಳಿದ್ದ ಕಲಬುರ್ಗಿ ಅವರು ಅದಕ್ಕೆ
ಪುರಾವೆಗಳನ್ನು ಒದಗಿಸಿದ್ದು. ಇಂಥಾ ಸಂಶೋಧನೆಗಳನ್ನು ಸ್ವಾಗತಿಸುವ ಮನಃಸ್ಥಿತಿ ಬೆಳೆಯಬೇಕಷ್ಟೆ. 4ನೇ ಶತಮಾನದಲ್ಲಿಯೇ ಸಾಕ್ರಟೀಸ್ ತತ್ವಗಳನ್ನು ಒಪ್ಪಿಕೊಳ್ಳದ ಕ್ರೂರ ಮನಸ್ಸುಗಳು ಅವರನ್ನು ವಿಷವಿಕ್ಕಿ ಕೊಂದಿದ್ದನ್ನು ಸ್ಮರಿಸಿದ ಅವರು, ಸಂಶೋಧನೆ ಮತ್ತು ಸಂಶೋಧಕರ ಅಭಿಪ್ರಾಯಗಳಿಗೆ ಕೊನೆ ಇಲ್ಲ ಎಂದರು. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕಲಬುಗಿ ಅವರ ಹತ್ಯೆ ಬಹಳ ಸೂಕ್ಷ್ಮ ವಿಷಯವಾಗಿದ್ದು, ಬುದ್ದಿಜೀವಿಗಳಿಗೆ ಇದು ಕರೆಗಂಟೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಒಟ್ಟಾಗಿ ದನಿ ಎತ್ತಬೇಕು, ಇಲ್ಲವಾದಲ್ಲಿ ಇಂತಹ ಅಮಾನವೀಯ ಕೃತ್ಯವನ್ನು ನಾವು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಹೇಳಿದರು. ಈಸಂದರ್ಭದಲ್ಲಿ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT