ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಕೈಯಲ್ಲಿ ಲಾಟಿ ಹಿಡಿದು ತಲೆಗೆ ಪೊಲೀಸರ ಹೆಲ್ಮೆಟ್ ಹಾಕಿಕೊಂಡು ಪೊಲೀಸರ ಸೋಗಿನಲ್ಲಿ ಸಾರ್ವಜನಿಕರ ಬಳಿ `ಮಾಮೂಲಿ' ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸಪ್ಪನನ್ನು ಅಸಲಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ದಾಬಸ್‍ಪೇಟೆ ಮೂಲದ ಸುರೇಶ್(30) ಬಂಧಿತ. ಆರೋಪಿಯಿಂದ ಪೆÇಲೀಸ್ ಲಾಠಿ, ಹೆಲ್ಮೆಟ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ವೈಯಾಲಿಕಾವಲ್ ಪೊಲೀಸರು ಹೇಳಿದ್ದಾರೆ. ಆರೋಪಿ ಸುರೇಶ ಈ ಹಿಂದೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿ ದ್ದ. ಆದರೆ, ಅದರಿಂದ ಬರುವ ಸಂಬಳದಲ್ಲಿ ಐಷಾರಾಮಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದುಕೊಂಡ ಆರೋಪಿ ಪೊಲೀಸ್ ಸೋಗಿ ನಲ್ಲಿ ಜನರ ಸುಲಿಗೆಗೆ ಮುಂದಾಗಿದ್ದ. ಒಮ್ಮೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‍ನಲ್ಲಿ ಪೊಲೀಸ್ ಲಾಠಿ ಹಾಗೂ ಹೆಲ್ಮೆಟ್ ಕಳವು ಮಾಡಿ ತನ್ನ ಬೈಕ್‍ನ ಹಿಂದೆ ಹಾಗೂ ಮುಂದೆ `ಪೊಲೀಸ್' ಸ್ಟಿಕ್ಕರ್ ಅಂಟಿಸಿಕೊಂಡಿದ್ದ.
ಬೈಕ್ನಲ್ಲಿ ಪೊಲೀಸರು ಲಾಠಿ ಇಡುವ ಜಾಗದಲ್ಲೇ ಲಾಠಿ ಇಟ್ಟುಕೊಂಡು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು ಸೇರಿದಂತೆ ಹಲವರ ಬಳಿ ಮಾಮೂಲಿ ವಸೂಲಿ
ಮಾಡುತ್ತಿದ್ದಾಗ ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ.