ಪಾಟಾ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ ಜಾನಪದ ಕಲಾವಿದರ ಮೋಹಕ ನೋಟ. 
ಜಿಲ್ಲಾ ಸುದ್ದಿ

ಇಂದಿನಿಂದ ಪಾಟಾ ಸಮ್ಮೇಳನ

ರಾಜ್ಯದ ವಿವಿಧ ಪ್ರಕಾರದ ಕಲೆ, ಸಂಸ್ಕೃತಿ, ಆಹಾರ ಪ್ರಕಾರಗಳನ್ನು ಜಗತ್ತಿಗೆ ಪರಿಚಯಿಸಲು ಹೊರಟಿರುವ `ಪೆಸಿಪಿsಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್-2015' (ಪಾಟಾ) ಅದ್ದೂರಿ ಸಮ್ಮೇಳನಕ್ಕೆ ಸಜ್ಜಾಗಿದೆ...

ಬೆಂಗಳೂರು: ರಾಜ್ಯದ ವಿವಿಧ ಪ್ರಕಾರದ ಕಲೆ, ಸಂಸ್ಕೃತಿ, ಆಹಾರ ಪ್ರಕಾರಗಳನ್ನು ಜಗತ್ತಿಗೆ ಪರಿಚಯಿಸಲು ಹೊರಟಿರುವ `ಪೆಸಿಪಿsಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್-2015' (ಪಾಟಾ) ಅದ್ದೂರಿ ಸಮ್ಮೇಳನಕ್ಕೆ ಸಜ್ಜಾಗಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ಸೆ.6ರಿಂದ 8ರವರೆಗೆ `ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಶುಕ್ರವಾರ ಸಮಾವೇಶದ ಸಿದಟಛಿತೆಗಳ ಪರಿಶೀಲನೆ ನಡೆಸಿದರು. ಸಮಾವೇಶದ ಮೂಲಕ ರಾಜ್ಯವು ವಿಶ್ವಕ್ಕೆ ತೆರೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚಿನ ವಿದೇಶಿ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ 1700ಕ್ಕೂ ಹೆಚ್ಚು ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದರು.

ಮೊದಲ ಹೂಡಿಕೆ ಪ್ರವಾಸೋದ್ಯಮ: ಈವರೆಗೆ 37 ಸಮ್ಮೇಳನಗಳು ನಡೆದಿದ್ದು, ಇದೇ ಮೊದಲ ಬಾರಿಗೆ ಇಲ್ಲಿ ಹೂಡಿಕೆ ಪ್ರವಾಸೋದ್ಯಮ (ಇನ್ವೆಸ್ಟ್‍ಮೆಂಟ್ ಟೂರಿಸಂ)ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ದೆಹಲಿ, ಹೈದರಾಬಾದ್ ನಂತರ ಬೆಂಗಳೂರಿನಲ್ಲಿ ಸಮ್ಮೇಳನ ಜರುಗುತ್ತಿದೆ. ಹಿಂದಿಗಿಂತಲೂ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಸಿಂಗಾಪುರ, ಕಾಂಬೋಡಿಯಾ ದೇಶಗಳು ಚಿಕ್ಕ ದೇಶಗಳಾಗಿದ್ದರೂ ಪ್ರವಾಸೋದ್ಯಮದಲ್ಲಿ ಮುಂದಿವೆ. ದೇಶದಲ್ಲಿ ಹಲವು ಕಾರಣಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತಿಲ್ಲ. ದೇಶದಲ್ಲಿ ಪ್ರವಾಸೋದ್ಯಮದ ಜಿಡಿಪಿ ಶೇ.6.3ರಷ್ಟಿದೆ. ರಾಜ್ಯದಲ್ಲಿ ಜೀವವೈವಿಧ್ಯತೆ, ಅಡ್ವೆಂಚರ್, ಐತಿಹಾಸಿಕ, ವನ್ಯಜೀವಿ ಸೇರಿದಂತೆ ಎಲ್ಲ ರೀತಿಯ ಪ್ರವಾಸಿ ತಾಣಗಳಿದ್ದು ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂದರು

ಸಮ್ಮೇಳನದಲ್ಲಿ ಜಾನಪದ ನೃತ್ಯರೂಪಕಗಳು ಸಮ್ಮೇಳನವು ಜಾತ್ರೆಯ ಮಾದರಿಯಲ್ಲಿ ಕಳೆಗಟ್ಟುತ್ತಿದೆ. ರಾಜ್ಯದಲ್ಲಿನ ಹಲವು ಜಾನಪದ ಕಲಾ ತಂಡಗಳು ಬೀಡುಬಿಟ್ಟಿದ್ದು, ಮೂರು ದಿನಗಳ ಕಾಲ ನೃತ್ಯಗಳು ವಿಜೃಂಭಿಸಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ 19 ಮಾದರಿಯ ಕಲಾ ಪ್ರದರ್ಶನಗಳನ್ನು ಪ್ರದರ್ಶಿಸಲಾಗುತ್ತಿದೆ. ರಾಜ್ಯದ 14 ಜಿಲ್ಲೆಯ 314 ಕಲಾವಿದರು ಭಾಗವಹಿಸುತ್ತಿದ್ದಾರೆ. ನಾದಸ್ವರ, ಕಂಸಾಳೆ, ಪಟ ಕುಣಿತ, ಪೂಜಾ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಜಗ್ಗಲಿಗೆ, ಯಕ್ಷಗಾನ, ಭರತನಾಟ್ಯ, ಕಹಳೆ, ಲಂಬಾಣಿ ನೃತ್ಯ ಸೇರಿದಂತೆ 19 ಮಾದರಿಯ ಜಾನಪದ ನೃತ್ಯಗಳು ವಿವಿಧ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT