ರಾಘವೇಶ್ವರ ಸ್ವಾಮೀಜಿ 
ಜಿಲ್ಲಾ ಸುದ್ದಿ

ವರ್ಷವಾದ್ರೂ ಚಾರ್ಜ್‍ಶೀಟ್ ಇಲ್ಲ

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ದಾಖಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ...

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ದಾಖಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿ ಸಿಐಡಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮೊದಲನೇ ಪ್ರಕರಣದಲ್ಲಿ ಸ್ವಾಮೀಜಿ ಅವರು ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ಮೊದಲ ಬಾರಿಗೆ 2014ರ ಆ.28ರಂದು ದೂರು ದಾಖಲಾಗಿತ್ತು. ದೂರು ದಾಖಲಾಗಿ ಬರೋಬ್ಬರಿ ಒಂದು ವರ್ಷ ಕಳೆದರೂ ಸಿಐಡಿ ಪ್ರಕರಣದ ಕುರಿತು ವರದಿಯಾಗಲೀ ಅಥವಾ ಚಾರ್ಜ್‍ಶೀಟ್ ಆಗಲಿ ಇನ್ನು ದಾಖಲಾಗಿಲ್ಲ.

ಪ್ರಕರಣ ರದ್ದು ಪಡಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ದಾಖಲಿಸಿದ ವೇಳೆ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪೊ್ರ.ರವಿವರ್ಮ ಕುಮಾರ್ ಅವರು, `ಪ್ರಕರಣ ಕುರಿತಂತೆ ಸಿಐಡಿ ತನಿಖೆ ಸದ್ಯದಲ್ಲೇ ಮುಕ್ತಾಯವಾಗಲಿದೆ. ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಪ್ರಾಸಿಕ್ಯೂಶನ್ ವಾದಕ್ಕೆ ಪೂರಕವಾಗಿದೆ.

ಡಿಎನ್‍ಎ ಪರೀಕ್ಷೆ ವರದಿ ಕೂಡ ಪ್ರಾಸಿಕ್ಯೂಶನ್ ವಾದವನ್ನು ದೃಢಪಡಿಸುತ್ತಿರುವುದರಿಂದ ಈ ಅರ್ಜಿ ಪುರಸ್ಕರಿಸಬಾರದು' ಎಂದು ವಾದ ಮಂಡಿಸಿದ್ದರು. ನಿಧಾನವೇ ಪ್ರಧಾನ: ಇಷ್ಟೆಲ್ಲದರ ಮಧ್ಯೆ ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿರುವುದಾಗಿ ಅತ್ಯಾಚಾರ ಸಂತ್ರಸ್ಥೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಿದ್ದರು.

ಈ ಕುರಿತು ಆಯೋಗದ ಅಧ್ಯಕ್ಷೆಗೆ ಲಲಿತಾ ಕುಮಾರಮಂಗಳಂ ಬೆಂಗಳೂರಿಗೆ ಆಗಮಿಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಅಂದು ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಲಲಿತಾ ಅವರು ವಿಚಾರಿಸಿದಾಗ ಪ್ರಕರಣ ಕೊನೆಯ ಹಂತದಲ್ಲಿದ್ದು, ಒಂದು ವಾರದ ಒಳಗಾಗಿ ಚಾಜ್ರ್ ಶೀಟ್ ದಾಖಲಿಸುವುದಾಗಿ ಭರವಸೆ ನೀಡಿದ್ದರು.

ಆದರೆ, ತಿಂಗಳು ಕಳೆದರೂ ಸಿಐಡಿ ಮಾತ್ರ `ಚಾರ್ಜ್' ಆಗಲೇ ಇಲ್ಲ. ಸದ್ಯ ಸ್ವಾಮೀಜಿ ವಿರುದ್ಧ ಎರಡನೇ ಬಾರಿ ಅತ್ಯಾಚಾರ ಆರೋಪ ದಾಖಲಾಗಿದ್ದು, ಇದನ್ನು ಕೂಡ ಸಿಐಡಿಗೆ ಒಪ್ಪಿಸಲಾಗಿದೆ. ಮೊದಲ ಪ್ರಕರಣದಂತೆ ಈ ಪ್ರಕರಣ ತನಿಖೆ ಕೂಡ ವಿಳಂಬ ಮಾಡುವ ಮೂಲಕ ಸಿಐಡಿ ಅಧಿಕಾರಿಗಳು ಹಳ್ಳ ಹಿಡಿಸುತ್ತಾರಾ ಎಂಬ ಅನುಮಾನಗಳು ಕಾಡಲಾರಂಭಿಸಿವೆ.


ಬಂಧನದಿಂದ ನಿರಂತರ ಬಚಾವ್: ಪ್ರಕರಣಗಂಭೀರ ಸ್ವರೂಪದ್ದಾಗಿದ್ದರೂ ಅತ್ಯಾಚಾರ ಪ್ರಕರಣದಲ್ಲಿ ಸ್ವಾಮೀಜಿಗೆ ಕೆಲವರು ಸಹಕರಿಸಿದ್ದಾರೆಂದು ದೂರು ದಾಖಲಾದರೆ ಸರ್ಕಾರದ ಪರ ಎಸ್‍ಪಿಪಿ ನಿರೀಕ್ಷಣಾ ಜಾಮೀನು ನೀಡಬಹುದೆಂದು ಪೀಠದ ಮುಂದೆ ವಾದ ಮಂಡಿಸುತ್ತಾರೆ. ಅದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದೆಡೆ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವೀ ಆಗುತ್ತಾರೆ.

ಇದೆಲ್ಲವನ್ನು ಗಮನಿಸಿದರೆ `ಹೈ ಪ್ರೊಫೈಲ್' ಎಂಬ ಪಟ್ಟಿ ಹೊಂದಿದವರು ಮಾತ್ರ ಬಚಾವ್ ಆಗಲೂ ಸಾಧ್ಯ ಎಂಬ ಶಂಕೆ ಕಾಡುತ್ತದೆ. ಎರಡನೇ ಬಾರಿ ಅತ್ಯಾಚಾರ ಪ್ರಕರಣ ದಾಖಲಾದರೂ ಆರೋಪಿಯನ್ನು ಬಂಧಿಸಬೇಕಾದ ಕೈಗಳು ಯಾವುದೋ ಒತ್ತಡಕ್ಕೆ ಮಣಿದು ಕೈಕಟ್ಟಿ ಕುಳಿತಿವೆಯೇ ಎಂಬ ಅನುಮಾನ ವ್ಯಕ್ತವಾಗುತ್ತದೆ.

ಪ್ರಕರಣ ನಡೆದು ಬಂದ ಹಾದಿ

  • 2014ರ ಆ.28- ರಾಮಕಥಾ ಗಾಯಕಿಯನ್ನು ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆಂದು ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ಎಫ್ಐಆರ್
  • 2014ರ ಸೆ.8-ರಾಮಕಥಾ ಗಾಯಕಿ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಸ್ವಾಮೀಜಿ ಹೈಕೋರ್ಟ್‍ಗೆ ಮೊರೆ
  • 2014ರ ಅ.9-ಸ್ವಾಮೀಜಿ ದಾಖಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶಿಸಿದ ನ್ಯಾ.ಕೆ.ಎನ್ .ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ.
  • 2014ರ ಅ.18-ಸ್ವಾಮೀಜಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿಯಿಂದ ನೋಟಿಸ್.
  • 2014ರ ಅ.20-ವೈದ್ಯಕೀಯ ಪರೀಕ್ಷೆ ರದ್ದುಕೋರಿ ಸ್ವಾಮೀಜಿ ಮತ್ತೊಮ್ಮೆ ಹೈಕೋರ್ಟ್‍ಗೆ ಮೊರೆ.
  • 2014ರ ಡಿ.3-ವೈದ್ಯಕೀಯ ಪರೀಕ್ಷೆ ರದ್ದುಕೋರಿ ದಾಖಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾ.ವೇಣು ಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ.
  • 2014ರ ನ.6-ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸ್ವಾಮೀಜಿ ಮೇಲ್ಮನವಿ ದಾಖಲು. ಈ ಮಧ್ಯೆ ಮೇಲ್ಮನವಿ ವಿಚಾರಣೆಯಿಂದ ಹಿಂದೆ ಸರಿದ ಐವರು ನ್ಯಾಯಮೂರ್ತಿಗಳು.
  • ಅಂತಿಮವಾಗಿ ಸ್ವಾಮೀಜಿ ಅವರು ದಾಖಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆಗೆ ವಿಶೇಷ ವಿಭಾಗೀಯ ಪೀಠ ರಚಿಸಿದ ಮುಖ್ಯ ನ್ಯಾಯಮೂರ್ತಿ.
  • 2015ರ ಫೆ.9-ಸ್ವಾಮೀಜಿ ದಾಖಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ. ಈ ಅರ್ಜಿ ದುಬಾರಿ ದಂಡ ವಿಧಿಸಲು ಯೋಗ್ಯವಾದ ಅರ್ಜಿಯಾಗಿದ್ದಾದರೂ, ಸ್ವಾಮೀಜಿ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಪಾದನೆ ಮಾಡಿರದ ಕಾರಣ ದಂಡ ವಿಧಿಸುತ್ತಿಲ್ಲ. ಒಂದೊಮ್ಮೆ ದಂಡ ವಿಧಿಸಿದ್ದೇ ಆದಲ್ಲಿ ಅದು ಮಠದ ಖಾತೆಯಿಂದಲೇ ನೀಡಬೇಕಾಗುತ್ತದೆ. ಮಠಕ್ಕೆ ಸಾವಿರಾರು ಜನ ಭಕ್ತಾದಿಗಳು ದೇಣಿಗೆ ರೂಪದಲ್ಲಿ ನೀಡಿರುವ ಹಣವಾಗಿದ್ದು, ಆ ಹಣವನ್ನು ಧಾರ್ಮಿಕ ಚಟುವಟಿಕೆಗೆ ಬಳಸುತ್ತಿರುವ ಉದ್ದೇಶದಿಂದ ದಂಡ ವಿಧಿಸುತ್ತಿಲ್ಲ'ಎಂದು ನ್ಯಾ.ಎನ್.ಆನಂದ್ ಮತ್ತು ನ್ಯಾ. ಆನಂದ ಭೈರಾರೆಡ್ಡಿ ಅವರಿದ್ದ ವಿಶೇಷ ವಿಭಾಗೀಯ ಪೀಠ ಆದೇಶ.
  • 2015ರ ಆ.29- ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆಂದು ಮತ್ತೊಬ್ಬ ಮಹಿಳೆಯಿಂದ ದೂರು ದಾಖಲು.
  • 2015ರ ಸೆ.4-ನಿರೀಕ್ಷಣಾ ಜಾಮೀನು ಕೋರಿ ಅಧೀನ ನ್ಯಾಯಾಲಯಕ್ಕೆ ಮೊರೆ ಹೋದ ಸ್ವಾಮೀಜಿ. 30 ದಿನಗಳ ಕಾಲ ಷರತ್ತು ಬದ್ಧ ನಿರೀಕ್ಷಣ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ.
ಸಮಿತಿ ವ್ಯಾಪ್ತಿ ಏನು?
ಬೆಂಗಳೂರು:

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT