ಜಿಲ್ಲಾ ಸುದ್ದಿ

ರು.30 ಲಕ್ಷದ ಮಾದಕ ವಸ್ತುಗಳ ವಶ

ಬೆಂಗಳೂರು: ನೈಜೀರಿಯಾದ ಪ್ರಜೆ ಸೇರಿ ನಾಲ್ವರನ್ನು ಬಂಧಿಸಿರುವ ಮೈಕೋ ಲೇಔಟ್ ಪೊಲೀಸರು ರು.30 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಟಿಸಿ ಪಾಳ್ಯದ ಮಾರಗೊಂಡನಹಳ್ಳಿ ನಿವಾಸಿ ಒಕೊಂಕೊ ಬಾಸಿಲ್ ದುಬಿಸಿ (28), ಕೇರಳ ಮೂಲದ ತಾವರೆಕೆರೆ ಬೃಂದಾವನ ನಗರ ನಿವಾಸಿ ವೈಶಾಕ್ (26), ಅಹಮ್ಮದ್ ಲುಹುಲ್ (24), ಬಿಟಿಎಂ 2ನೇ ಹಂತದ ಸಜೀರ್(22) ಬಂಧಿತರು. ಇವರಿಂದ ಒಂದೂವರೆ ಕೆಜಿ ಗಾಂಜಾ, 100 ಗ್ರಾಂ ಕೊಕೈನ್, 96 ಗ್ರಾಂ ಚರಸ್, 20 ಗ್ರಾಂ ಎಂಡಿಎಂಎ, 6 ಮೊಬೈಲ್ ಫೋನ್ ಹಾಗೂ 3 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದರು.

ಒಕೊಂಕೊ ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ. ಮಾದಕ ವ್ಯಸನಿಯಾಗಿದ್ದ ಆತ, ಒಂದು ವರ್ಷ ಮಾತ್ರ ವ್ಯಾಸಂಗ ಮಾಡಿ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗಿದ್ದ. ಮುಂಬೈನಲ್ಲಿರುವ ತನ್ನ ಪರಿಚಿತರ ಸಂಪರ್ಕದ ಮೂಲಕ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರುತ್ತಿದ್ದ. ಈತನಿಂದ ಮಾದಕವಸ್ತುಗಳ ಖರೀದಿಸುತ್ತಿದ್ದ ಕೇರಳ ಮೂಲದ ಬಂಧಿತರ ಮೂವರು ಕಾಲೇಜು ವಿದ್ಯಾರ್ಥಿಗಳು ನಗರ ಹಾಗೂ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT