(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬಿಬಿಎಂಪಿ ವಿಭಜನೆ ಅನಿವಾರ್ಯ: ಬಿ.ಎಸ್.ಪಾಟೀಲ್

ಬಿಬಿಎಂಪಿ ಪುನಾರಚನೆ ಪ್ರಸ್ತಾಪ ಮುಗಿದ ಅಧ್ಯಾಯವಲ್ಲ. ಅದು ಈಗಲೂ ಜೀವಂತ ಎಂದು ಬಿಬಿಎಂಪಿ ಪುನಾರಚನಾ ತಜ್ಞರ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಹೇಳಿದ್ದಾರೆ.ಬೆಂಗಳೂರು ನಗರಕ್ಕೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯನ್ನು ಪುನಾರಚನೆ ಮಾಡುವುದು ತೀರಾ ಅನಿವಾರ್ಯವಾಗಿದೆ...

ಬೆಂಗಳೂರು: ಬಿಬಿಎಂಪಿ ಪುನಾರಚನೆ ಪ್ರಸ್ತಾಪ ಮುಗಿದ ಅಧ್ಯಾಯವಲ್ಲ. ಅದು ಈಗಲೂ ಜೀವಂತ ಎಂದು ಬಿಬಿಎಂಪಿ ಪುನಾರಚನಾ ತಜ್ಞರ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಹೇಳಿದ್ದಾರೆ. ಬೆಂಗಳೂರು ನಗರಕ್ಕೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯನ್ನು ಪುನಾರಚನೆ ಮಾಡುವುದು ತೀರಾ ಅನಿವಾರ್ಯವಾಗಿದೆ.

ಈಗ ನಡೆದಿರುವ ಚುನಾವಣೆಗೂ, ವಿಭಜನೆಗೂ ಸಂಬಂಧವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಿಬಿಎಂಪಿ ಪುನಾರಚನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಬಿಎಂಪಿಗೆ ಚುನಾವಣೆ ನಡೆದಿರುವ ಮಾತ್ರಕ್ಕೆ ಬಿಬಿಎಂಪಿ ಪುನಾರಚನೆ ಪ್ರಸ್ತಾಪ ಮುಗಿದಿದೆ ಎಂದರ್ಥವಲ್ಲ. ಪುನಾರಚನೆ ಸಂಬಂಧ ನಮ್ಮ ಸಮಿತಿ ವರದಿ ಸಲ್ಲಿಸಿತ್ತು. ಅದನ್ನಾಧರಿಸಿ ಸರ್ಕಾರ ಸೂಕ್ತ ವಿಧೇಯಕವನ್ನೇ ರಚಿಸಿದೆ. ಅದೀಗ ರಾಷ್ಟ್ರಪತಿಯವರ ಅಂಕಿತದ ನಿರೀಕ್ಷೆಯಲ್ಲಿದೆ. ರಾಷ್ಟ್ರ-ಪತಿಗಳ ಅಂಕಿತ ಬೀಳುತ್ತಿದ್ದಂತೆ ಬಿಬಿಎಂಪಿ ಪುನಾರಚನೆ ಸಹಜವಾಗಿಯೇ ಅನುಷ್ಠಾ ನವಾಗುತ್ತದೆ. ಆದ್ದರಿಂದ ಪುನಾರಚ ನೆ ಇನ್ನೂ ಜೀವಂತ ಎಂದು ಬಿ.ಎಸ್.ಪಾಟೀಲ್ ಸ್ಪಷ್ಟಪಡಿಸಿದರು.

ವರದಿಯನ್ನು ಸರ್ಕಾರ ಹೇಗೆಲ್ಲಾ ಅನುಷ್ಠಾನಗೊಳಿಸಬೇಕು ಎಂದು ಸಲಹೆ ಪಡೆಯಲು ಸರ್ಕಾರ ಸಮಿತಿ ಅವಧಿಯನ್ನು ಮುಂದಿನ ಜನವರಿ ಅಂತ್ಯದವರೆಗೂ ವಿಸ್ತರಿಸಿದೆ. ಆದ್ದ ರಿಂದ ಪುನಾರಚನೆ ಮತ್ತು ನಗರದಲ್ಲಿ ಗುಣಮಟ್ಟದ ಸಂಬಂಧ ಸರ್ಕಾರ ನಮ್ಮ ಸಲಹೆ ಪಡೆಯುತ್ತಿದೆ. ಹೀಗಾಗಿ ಸಿಎಂ ಜತೆ ಚರ್ಚಿಸಲಾಯಿತು ಎಂದು ಸಮಿತಿ ಸದಸ್ಯರೂ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT