ಗೋವಿಂದ ಪಾನ್ಸರೆ 
ಜಿಲ್ಲಾ ಸುದ್ದಿ

ಪಾನ್ಸರೆ ಪ್ರಕರಣ ಮರೆತೇ ಬಿಟ್ಟಿದ್ದ ಮಹಾ ಪೊಲೀಸರು

ವಿಚಾರವಾದಿ ಗೋವಿಂದ ಪಾನ್ಸರೆ ಕೊಲೆ ಪ್ರಕರಣವನ್ನು ಮರೆತೇ ಬಿಟ್ಟಿದ್ದ ಮಹಾರಾಷ್ಟ್ರ ಪೊಲೀಸರು, ಡಾ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ...

ಮುಂಬೈ: ವಿಚಾರವಾದಿ ಗೋವಿಂದ ಪಾನ್ಸರೆ ಕೊಲೆ ಪ್ರಕರಣವನ್ನು ಮರೆತೇ ಬಿಟ್ಟಿದ್ದ ಮಹಾರಾಷ್ಟ್ರ ಪೊಲೀಸರು, ಡಾ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ತನಿಖೆಯ ಮುನ್ನಡೆಯಿಂದ ಎಚ್ಚೆತ್ತು ಆರೋ ಪಿಯನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಇಂಥ ಟೀಕೆ ವ್ಯಕ್ತವಾಗಿದ್ದು, ಕರ್ನಾಟಕ ಪೊಲೀಸರ ತನಿಖೆ ಮುನ್ನಡೆ ಬಳಿಕವಷ್ಟೆ ಮಹಾರಾಷ್ಟ್ರ ಪೊಲೀಸರು ಪಾನ್ಸರೆ ಕೊಲೆ ಆರೋಪಿ ಗಾಯಕವಾಡ ನನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಸನಾತನ ಸಂಸ್ಥೆ ವಿರುದ್ಧ ತನಿಖೆಯ ದಿಕ್ಕುತಪ್ಪಿಸಲು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ. ಸಿಪಿಐ ನಾಯಕ, ವಿಚಾರವಾದಿ ಗೋವಿಂದ್ ಪನ್ಸಾರೆ ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಕಳೆದ ವಾರ ಸನಾತನ ಸಂಸ್ಥೆ ಸದಸ್ಯ ಸಮೀರ್ ಗಾಯಕವಾಡ್‍ನನ್ನು ಬಂಧಿಸಿದ್ದಾರೆ. ಡಾ.ಕಲಬುರ್ಗಿ ಹತ್ಯೆ ಸಂಬಂಧ ಕರ್ನಾಟಕ ಪೊಲೀಸರು ಸನಾತನ ಸಂಸ್ಥೆಯ ಕೈವಾಡ ಶಂಕಿಸಿ ಕೊಲ್ಹಾಪುರ ಹಾಗೂ ಸಾಂಗ್ಲಿಯಲ್ಲಿ ತನಿಖೆ ಕೈಗೊಂಡಿದ್ದರು. ಈ ತನಿಖೆ ವೇಳೆ ದೊರೆತ ಮಹತ್ವದ ಸುಳಿವಿನ ಬಳಿಕವಷ್ಟೇ ಮಹಾ ಪೊಲೀಸರು ಪಾನ್ಸರೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ!

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ