ಜಿಲ್ಲಾ ಸುದ್ದಿ

ಮೇಯರ್ ಮತ್ತು ತಂಡಕ್ಕೆ ಬಿಬಿಎಂಪಿಯಿಂದ 6 ಹೊಸ ಕಾರು ಖರೀದಿ

Lingaraj Badiger

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತನ್ನ ನೂತನ ಮೇಯರ್ ಮಂಜುನಾಥ್ ರೆಡ್ಡಿ ಹಾಗೂ ಅವರ ತಂಡಕ್ಕೆ ಆರು ಹೊಸ ಮಾರುತಿ ಸಿಯಾಝ್ ಕಾರುಗಳನ್ನು ಖರೀದಿಸಿದೆ. ಈ ಪೈಕಿ ಎರಡು ಕಾರುಗಳು ಈಗಾಗಲೇ ಬಂದಿದ್ದು, ಇನ್ನೂ ನಾಲ್ಕು ಕಾರುಗಳು ಸದ್ಯದದಲ್ಲೇ ಬರಲಿವೆ.

'ಆರು ಮಾರುತಿ ಸಿಯಾಝ್ ಕಾರುಗಳನ್ನು ಪಾಲಿಕೆ ಬುಕ್ ಮಾಡಿದೆ. ಸರ್ಕಾರ ಅನುಮತಿ ನೀಡಿರುವ ಮೊತ್ತದಲ್ಲೇ ಅತಿ ಕಡಿಮೆ ಮೊತ್ತದ ಕಾರು ಇದಾಗಿದ್ದು, ಲೋವರ್ ಎಂಡ್ ಮಾಡೆಲ್ ಕಾರಿಗೆ ಸುಮಾರು 7 ಲಕ್ಷ ರುಪಾಯಿ ಆಗುತ್ತದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆ ತೆರಿಗೆ ಮತ್ತು ವಿಮೆ ಸೇರಿ ಒಟ್ಟಾರೆ ಈ ಕಾರಿನ ಬೆಲೆ 9 ಲಕ್ಷ ರುಪಾಯಿ.

ಗುತ್ತಿಗೆದಾರರ ಬಿಲ್ ಪಾವತಿ ಮಾಡಲು ಹಣದ ಕೊರತೆ ಇದೆ ಎನ್ನುವ ಪಾಲಿಕೆ ಅಧಿಕಾರಿಗಳು, ವಾಹನಗಳ ಕೊರತೆ ಇದೆ ಎಂಬ ನೆಪ ಹೇಳಿ ಹೊಸ ಕಾರು ಖರೀದಿ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಬಿಬಿಎಂಪಿ ಮೂಲಗಳ ಪ್ರಕಾರ, ಆಡಳಿತ ಅಧಿಕಾರಿ ಇದ್ದಾಗ ವಾಹನಗಳ ಕೊರೆತೆಯ ಅನುಭವ ಆಗಿದೆ. ಕಳೆದ ನಾಲ್ಕೈದು ತಿಂಗಳಿಂದ ಐಎಎಸ್, ಐಎಫ್‌ಎಸ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಮಾಜಿ ಮೇಯರ್ ಮತ್ತು ನಾಯಕರ ಕಾರುಗಳನ್ನು ಬಳಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಹೊಸ ಕಾರುಗಳನ್ನು ಖರೀದಿಸಿರಲಿಲ್ಲ. ಇದ್ದ ಕಾರುಗಳನ್ನು ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ಹೀಗಾಗಿ ವಾಹನಗಳ ಕೊರತೆ ಇದೆ ಎಂದಿದ್ದಾರೆ.

SCROLL FOR NEXT