(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಕಲಬುರ್ಗಿ ಇಲ್ಲದೆ ಶೂನ್ಯಭಾವ

ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಸಾಹಿತ್ಯ ಹಾಗೂ ಸಂಶೋಧನಾ ವಲಯದಲ್ಲಿ ಶೂನ್ಯವನ್ನುಂಟು ಮಾಡಿದೆ ಎಂದು ಸಾಹಿತಿ ಹಂಪಾ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು...

ಬೆಂಗಳೂರು: ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಸಾಹಿತ್ಯ ಹಾಗೂ ಸಂಶೋಧನಾ ವಲಯದಲ್ಲಿ ಶೂನ್ಯವನ್ನುಂಟು ಮಾಡಿದೆ ಎಂದು ಸಾಹಿತಿ ಹಂಪಾ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.

ಬುಧವಾರ ನಗರದ ಸೆನೆಟ್ ಹಾಲ್‍ನಲ್ಲಿ ಸಾಹಿತ್ಯ ಅಕಾಡೆಮಿ ಆ/aಜಿಸಿದ್ದ ಕಲಬುರ್ಗಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಬುರ್ಗಿ ಅವರು ಬದುಕಿದ್ದಾಗ ಕನ್ನಡ ಸಂಸ್ಕೃತಿಯ ಬಗ್ಗೆ ಹಲವು ಚರ್ಚೆ ಹುಟ್ಟು ಹಾಕಿದ್ದರು. ಅವರು ಹತ್ಯೆ ನಂತರವೂ ಹಲವಾರು ವಿಚಾರಗಳ ಕುರಿತು ಸಮಾಜ ಚರ್ಚಿಸುವಂತೆ ಮಾಡಿದ್ದಾರೆ. ತಮ್ಮ ಸಂಶೋಧನೆಗಳಲ್ಲಿ ಕನ್ನಡದ ಪ್ರಧಾನ ಸಂಸ್ಕೃತಿಗೆ ಪರ್ಯಾಯವಾದ ಕನ್ನಡ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಿದ್ದರು. ಈ ಮೂಲಕ ಕನ್ನಡ ಸಂಸ್ಕೃತಿಗೆ ವಿಭಿನ್ನ ಆಯಾಮ ನೀಡಿದ್ದರು. ಉತ್ತರ ಕರ್ನಾಟಕದ ಭಾಗದಲ್ಲಿ ಹಲವು ಸಂಶೋಧಕ, ಸಾಹಿತಿ, ವಿದ್ವಾಂಸರನ್ನು ಹುಟ್ಟು ಹಾಕಿದ ಅವರನ್ನು ಅಭಿನವ ಶಾಸ್ತ್ರ ಪಿತಾಮಹ ಎಂದು ಕರೆದರೆ ತಪ್ಪಿಲ್ಲ ಎಂದರು.

ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ವಿಮರ್ಶಕಿ ಎಂ.ಎಸ್.ಆಶಾದೇವಿ ಹಾಗೂ ಎಸ್. ಆರ್.ವಿಜಯ ಶಂಕರ್ ಅವರು ಕಲಬುರ್ಗಿ ಯರವರ ವಿಚಾರಧಾರೆಗಳ ಕುರಿತು ಹಾಗೂ ಅವರು ವಚನಗಳ ಕುರಿತು ಮಂಡಿಸಿದ್ದ ಸಂಶೋಧನೆಗಳ ಬಗ್ಗೆ ಮಾತನಾಡಿದರು.

ಹಂಪನಾ ಹೇಳಿಕೆಗೆ ಚಂಪಾ ಕಿಡಿ

ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಬೇಕಾಬಿಟ್ಟಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಯೇ ಉದಾಹರಣೆ
ಎಂದು ಹೇಳಿರುವ ವಿಚಾರವಾದಿ ಪ್ರೊ.ಹಂಪ ನಾಗರಾಜಯ್ಯ ಅವರ ಹೇಳಿಕೆಗೆ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ತೀವ್ರವಾಗಿ ಕಿಡಿಕಾರಿದ್ದಾರೆ. ಮಾತ್ರವಲ್ಲ ಮತ್ತೊಮ್ಮೆ ಈ ರೀತಿ ಮಾತನಾಡುವ ಮುನ್ನ ಸ್ವಲ್ಪ ಆಲೋಚಿಸಬೇಕಿದೆ ಎಂದು ಎಚ್ಚರಿಸಿದ್ದಾರೆ.

ಪ್ರೊ.ಎಂ.ಎಂ.ಕಲಬುರ್ಗಿ ಅವರ ಹಂತಕರನ್ನು ಬಂಧಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಬುಧವಾರ ಪುರಭವನದ ಮುಂದೆ ಏರ್ಪಡಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ `ಕನ್ನಡಪ್ರಭ'ದಲ್ಲಿ ಹಂಪನಾ ಅವರ ಹೇಳಿಕೆ ಓದಿದೆ. ಅವರ ಹೇಳಿಕೆ ನೋಡಿ ಬಹಳ ಬೇಸರವಾಯಿತು. ಬೇರೇ ಯಾರಾದರೂ ಅಥವಾ ಸಂಘ ಪರಿವಾರದ ಸದಸ್ಯರು ಇಂತಹ ಹೇಳಿಕೆ ನೀಡಿದ್ದಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ, ಚಿಂತಕ, ವಿಚಾರವಾದಿ, ಸಾಹಿತಿಯೂ ಆಗಿರುವ ಹಿರಿಯರು ಹಂಪನಾ ಅವರು ಈ ರೀತಿ ಹೇಳಿಕೆ ನೀಡಿರುವುದು ಸಮಂಜಸ ಎನಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT