ಬೆಂಗಳೂರು: ನ್ಯಾಯಸಮ್ಮತ ರೀತಿಯಲ್ಲಿ ವಕೀಲ ವೃತ್ತಿ ಮಾಡಲು ವಕೀಲ ವೃತ್ತಿಗೆ ದೊಡ್ಡ ಮಟ್ಟದ ಸರ್ಜರಿ ಅಗತ್ಯವಿದೆ ಎಂದು ಸುಪ್ರೀಂ ಕೋಟ್ರ್ ನ ನಿವೃತ್ತ ಮುಖ್ಯ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ನಗರದ ಜನದನಿ ಬಳಗ ಸಾಹಿತ್ಯ ಪರಿಷತ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯ ಕ್ರಮದಲ್ಲಿ ಬೋನ್ಸಾಯ್ ಶ್ರೀನಿವಾಸ್ ಅವರು ಬರೆದಿರುವ `ಅಪಾತ್ರರಿಗೆ ಮಾಡಿದ ದಾನ' (ಆತ್ಮಕಥನಕ) ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ವಕೀಲರು ಇಂದು ಕಕ್ಷಿದಾರರಿಂದ ಸಣ್ಣಪುಟ್ಟ ಪ್ರಕರಣಗಳಿಗೂ ಸಾಕಷ್ಟು ಹಣ ತಿನ್ನುತ್ತಿದ್ದಾರೆ. ವರ್ಷಗಟ್ಟಲೆ ಕೇಸು ನಡೆಸುತ್ತಾ ಅವರನ್ನು ಅಲೆಸುತ್ತಿದ್ದಾರೆ, ಅದು ನಿಲ್ಲಬೇಕು. ಇಲ್ಲವಾದಲ್ಲಿ ಕಕ್ಷಿದಾರರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದರು.
ಸಮಾಜದ ಹಿತದೃಷ್ಟಿಯಿಂದ ಬೋನ್ಸಾಯï ಶ್ರೀನಿ ವಾಸರು ಮಗುವಿಗಿಂತ ಹೆಚ್ಚಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬೋನ್ಸಾಯ್ ಸಸಿ ಬೆಳೆಸಿ ಲಾಲ್ಬಾಗ್‍ಗೆ ನೀಡಿದರು. ಆದರೆ ಅ„ಕಾರಿಗಳು ಅದನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರು ಬರೆದಿರುವ `ಅಪಾತ್ರರಿಗೆ ಮಾಡಿದ ದಾನ' ಕೃತಿಯು ಆತ್ಮಕಥೆಯಲ್ಲ, ಸಮಾಜಕ್ಕೆ ಕೈಗ ನ್ನಡಿ ಎಂದು ಶ್ಲಾಘಿಸಿದರು