ಮಂಡ್ಯ ಶಾಸಕ ಅಂಬರೀಶ್ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಮಂಡ್ಯ ಶಾಸಕ ಅಂಬರೀಶ್ ನಾಪತ್ತೆಯಾಗಿದ್ದಾರೆ, ಹುಡುಕಿಕೊಡಿ: ದೂರು ದಾಖಲು

ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ನಾಪತ್ತೆಯಾಗಿದ್ದಾರೆ..ದಯಮಾಡಿ ಹುಡುಕಿಕೊಡಿ ಎಂದು ಹೇಳಿ ದೂರು ದಾಖಲಿಸಲಾಗಿದೆ.

ಮಂಡ್ಯ: ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ನಾಪತ್ತೆಯಾಗಿದ್ದಾರೆ..ದಯಮಾಡಿ ಹುಡುಕಿಕೊಡಿ ಎಂದು ಹೇಳಿ ದೂರು ದಾಖಲಿಸಲಾಗಿದೆ.

ಮಂಡ್ಯ ಎಸ್ ಪಿ ಕಚೇರಿಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮಂಡ್ಯ ಬಿಜೆಪಿ ಮುಖಂಡ ಸಿದ್ದರಾಜು ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮತ ಹಾಕಿ ಶಾಸಕರನ್ನಾಗಿಸಿದ  ಜನರನ್ನು ಅಂಬರೀಶ್‌ ಮರೆತಿದ್ದಾರೆ. ಜನರ ಕಷ್ಟ ಸುಖ ಆಲಿಸದೆ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕ್ಷೇತ್ರಕ್ಕೆ ಕರೆದುಕೊಂಡು ಬರುವಂತೆ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ  ಅವರಿಗೆ ನೀಡಲಾಗಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.

ಇತ್ತೀಚೆಗಷ್ಟೇ ರಾಜ್ಯ ಸಂಪುಟ ಪುನಾರಚನೆ ವೇಳೆ ತಮ್ಮನ್ನು ಸಂಪುಟದಿಂದ ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಅಸಾಮಾಧಾನಗೊಂಡಿದ್ದ ಮಂಡ್ಯ ಶಾಸಕ ಹಾಗೂ ಮಾಜಿ ಸಚಿವ  ಅಂಬರೀಶ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಳಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಳಿಂದಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಇಂದು ಗೋವಾದಲ್ಲಿ  ನಡೆದ ನಟಿ ರಾಧಿಕಾ ಪಂಡಿತ್ ಹಾಗೂ ನಟ ಯಶ್ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಅಂಬರೀಶ್ ಅವರು ಪಾಲ್ಗೊಂಡಿದ್ದು, ಇದರ ಬೆನ್ನಲ್ಲೇ ಅವರು ನಾಪತ್ತೆಯಾಗಿದ್ದಾರೆ ಎಂದು ಮಂಡ್ಯದಲ್ಲಿ ದೂರು ದಾಖಲು ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪರಿಹಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ': ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ

ಜಾತಿ ರಹಿತ ಸಮಾಜ ನಿರ್ಮಾಣವೇ ಸಂವಿಧಾನದ ಆಶಯ: ಸಿಎಂ ಸಿದ್ದರಾಮಯ್ಯ

ಸಂಚಾರ ದಂಡ ರಿಯಾಯಿತಿಯಿಂದ ಬರೋಬ್ಬರಿ 106 ಕೋಟಿ ಸಂಗ್ರಹ: 37.86 ಲಕ್ಷ ಪ್ರಕರಣ ಇತ್ಯರ್ಥ

AI ವೀಡಿಯೊ ಮೂಲಕ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ತೇಜೋವಧೆ: Congress, ಐಟಿ ಸೆಲ್ ವಿರುದ್ಧ ಎಫ್ಐಆರ್

ಯಾರೂ ಭಾರತ-ಪಾಕ್ ಪಂದ್ಯ ನೋಡಬೇಡಿ, TV ಆಫ್ ಮಾಡಿ: ಪಹಲ್ಗಾಮ್ ಬಲಿಪಶು ಶುಭಂ ದ್ವಿವೇದಿ ಪತ್ನಿ ಕರೆ

SCROLL FOR NEXT