ಜಿಲ್ಲಾ ಸುದ್ದಿ

10ನೇ ಮಹಾಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಭಕ್ತರಿಂದ ಪುಣ್ಯಸ್ನಾನ

Vishwanath S

ಟಿ.ನರಸೀಪುರ: ಮೈಸೂರಿನ ಟಿ. ನರಸೀಪುರದಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು, ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪುನೀತರಾದರು.

ಮೈಸೂರಿನ ಟಿ.ನರಸೀಪುರದಲ್ಲಿ ಮೂರು ವರ್ಷಕ್ಕೊಮ್ಮೆ ಮಹಾಕುಂಭಮೇಳವನ್ನು ನಡೆಸಲಾಗುತ್ತದೆ. ಇಂದು 10ನೇ ಮಹಾಕುಂಭಮೇಳ ನಡೆಯುತ್ತಿದ್ದು, ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿದರು.

10ನೇ ವರ್ಷದ ಮಹಾಕುಂಭಮೇಳ ಶನಿವಾರ ಟಿ. ನರಸೀಪುರದ ಶ್ರೀ ಅಗಸ್ತೇಶ್ವರಸ್ವಾಮಿ ದೇವಾಲಯದಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ಸೋಮನಾಥ ಸ್ವಾಮೀಜಿ ಸಮ್ಮುಖದಲ್ಲಿ ವಿವಿಧ ಪೂಜಾ ಕೈಂಕರ್ಯದೊಂದಿಗೆ ಶನಿವಾರ ಆರಂಭಗೊಂಡಿದೆ.

ಫೆಬ್ರವರಿ 21ರ ಸಂಜೆ 7-30 ಗಂಟೆಗೆ ಕುಂಭಮೇಳದಲ್ಲಿ ಗಂಗಾಪೂಜೆಯೊಂದಿಗೆ ದೀಪಾರತಿ.

ಫೆಬ್ರವರಿ 20, 21 ಹಾಗೂ 22 ರಂದು ಪ್ರತಿದಿನ ಬೆಳಿಗ್ಗೆ ಸಂಕಲ್ಪ, ಹೋಮ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ.

ಫೆಬ್ರವರಿ 22 ರಂದು ಬೆಳಿಗ್ಗೆ ಚಂಡಿ ಹೋಮ, ಪೂರ್ಣಾಹುತಿ, ಕುಂಭೋದ್ವಾಸನ ಹಾಗೂ ಏಳು ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿಸಂಗಮದಲ್ಲಿ ಸಂಯೋಜಿಸುವುದು, ಪುಣ್ಯಸ್ನಾನ ಹಾಗೂ ಧರ್ಮಸಭೆ.

SCROLL FOR NEXT