ಬೆಂಕಿಗೆ ಆಹುತಿಯಾದ ಮನೆಯ ಒಳಭಾಗ 
ಜಿಲ್ಲಾ ಸುದ್ದಿ

ದುಷ್ಕರ್ಮಿಗಳಿಂದ ಮನೆಗೆ ಬೆಂಕಿ: ತಾಯಿ, ಮಗ ಸಜೀವ ದಹನ

ತಡರಾತ್ರಿ ಮನೆಮಂದಿ ಮಲಗಿದ್ದಾಗ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಪರಿಣಾಮ ತಾಯಿ ಮಗ ಸಜೀವ ದಹನವಾಗಿರುವ ಘಟನೆ...

ಮಾಗಡಿ(ರಾಮನಗರ): ತಡರಾತ್ರಿ ಮನೆಮಂದಿ ಮಲಗಿದ್ದಾಗ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಪರಿಣಾಮ ತಾಯಿ ಮಗ ಸಜೀವ ದಹನವಾಗಿರುವ ಘಟನೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ನಡೆದಿದೆ.

ಮಂಚನಬೆಲೆ ಗ್ರಾಮದ ವಾಸಿ ಭೋಜೇಗೌಡರ ಪತ್ನಿ ವಿಜಯಲಕ್ಷ್ಮಿ(45) ಮತ್ತು ಪುತ್ರ ಭರತ್(20) ಮೃತಪಟ್ಟ ದುರ್ದೈವಿಗಳು. ಇನ್ನು ಸುಟ್ಟ ಗಾಯಗಳಿಂದ ತೀವ್ರ ಅಸ್ವಸ್ಥಗೊಂಡಿರುವ ಭೋಜೇಗೌಡ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ರಾತ್ರಿ ವಿಜಯಲಕ್ಷ್ಮಿ ಮತ್ತು ಅವರ ಪುತ್ರ ಭರತ್ ಮನೆಯ ಹಾಲ್ ನಲ್ಲಿಯೇ ಮಲಗಿದ್ದರು. ದುಷ್ಕರ್ಮಿಗಳು ತಡರಾತ್ರಿ ಮನೆಯ ಎರಡು ಬಾಗಿಲುಗಳು ತೆರೆಯಲು ಸಾಧ್ಯವಾಗದಂತೆ ಹೊರಗಿನಿಂದ ಚಿಲಕಗಳನ್ನು ದಾರದಿಂದ ಬಿಗಿದ್ದಾರೆ. ಆನಂತರ ಕಿಟಿಕಿಯಿಂದ ಮನೆಯೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹಾಲ್ ನಲ್ಲಿ ದಿವಾನ್ ಮೇಲೆ ಮಲಗಿದ್ದ ಭರತ್ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ಹಾಲ್ ನಲ್ಲಿಯೇ ನೆಲದ ಮೇಲೆ ಮಲಗಿದ್ದ ವಿಜಯಲಕ್ಷ್ಮಿ ಹಾಗೂ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಬೋಜೇಗೌಡರು ಮಗನನ್ನು ರಕ್ಷಿಸಲು ಬಂದಿದ್ದು ಆದರೆ ಪ್ರಯೋಜನವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

Neet ಪ್ರಶ್ನೆ ಪತ್ರಿಕೆ ಸೋರಿಕೆ: ಅಂಧಭಕ್ತ.. ಈಡಿಯಟ್.. RSS, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ, ಸಂಸತ್ ನಲ್ಲಿ ಹೈಡ್ರಾಮಾ

'ಬಿಜೆಪಿಗರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ; KPSC ಅಧ್ಯಕ್ಷ ಯಡಿಯೂರಪ್ಪ ಸಂಬಂಧಿ; ಇದನ್ನು ಹೇಳಿದ್ದು ಯತ್ನಾಳ್'

ಪ್ರಿಯಾಂಕಾ ಗಾಂಧಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿ ಕಾಮಕೋಟಿಯನ್ನು 'ಗೋಮುತ್ರ ತಜ್ಞ' ಎಂದು ಟೀಕಿಸಿದ್ದು ಏಕೆ ಗೊತ್ತಾ?

ಮೃತಪಟ್ಟ 1 ವರ್ಷದ ಬಳಿಕ ಮಾಜಿ ಪ್ರಧಾನಿ ಸಿಂಗ್ ಗೆ ಕೋರ್ಟ್ ನಲ್ಲಿ ಬಿಗ್ ರಿಲೀಫ್; ಖುಲಾಸೆ!