ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ 
ಜಿಲ್ಲಾ ಸುದ್ದಿ

ಸೋನಿಯಾ, ರಾಹುಲ್ ಗೆ ಜಾಮೀನು ಸಿಗಲೆಂದು ತಿರುಪತಿ ತಿಮ್ಮಪ್ಪನಿಗೆ ಬೆರಳು ಹರಕೆ!

ತಮ್ಮ ನೆಚ್ಚಿನ ಸಿನಿಮಾ ನಟರ, ರಾಜಕಾರಣಿಗಳ ಒಳಿತಿಗಾಗಿ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ.ಆದರೆ ಈ ಅಭಿಮಾನ ಕೆಲವೊಮ್ಮೆ...

ಬೆಂಗಳೂರು: ತಮ್ಮ ನೆಚ್ಚಿನ ಸಿನಿಮಾ ನಟರ, ರಾಜಕಾರಣಿಗಳ ಒಳಿತಿಗಾಗಿ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ ಈ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಹೋಗುವುದುಂಟು. ಇಲ್ಲಿ ಆಗಿದ್ದು ಅದುವೇ.

ತಿರುಪತಿ ತಿಮ್ಮಪ್ಪನಿಗೆ ನಿತ್ಯ ಲಕ್ಷಾಂತರ, ಕೋಟ್ಯಾಂತರ ಹಣ, ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಹರಕೆಯಾಗಿ ಹರಿದು ಬರುತ್ತದೆ. ಆದರೆ ಇಲ್ಲಿ ಹರಕೆಯಾಗಿ ಹುಂಡಿಗೆ ಬಿದ್ದದ್ದು ಕೈಯ ಕಿಂಕಿಣಿ ಬೆರಳು.

ನ್ಯಾಷನಲ್ ಹೆರಾಲ್ಡ್  ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾಮೀನು ಸಿಗಲೆಂದು ಬೆಂಗಳೂರಿನ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಎಂಬುವವರು ಡಿಸೆಂಬರ್ 25ರಂದು ತಿರುಪತಿ ತಿಮ್ಮಪ್ಪನಿಗೆ ಎಡಗೈಯ ಕಿರು ಬೆರಳನ್ನು ಕತ್ತರಿಸಿ ಹುಂಡಿಗೆ ಹಾಕಿದ್ದಾರೆ.

ಅಂದಹಾಗೆ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ನಿಂದ ಜಾಮೀನು ಕೂಡ ಮಂಜೂರಾಗಿದೆ. ಸುರೇಶ್ ಅವರ ಹರಕೆ ಫಲಿಸಿತೋ ಏನೋ. ಅಂತೂ ತಮ್ಮ ಪಕ್ಷದ ಅಧ್ಯಕ್ಷೆಗೆ ಜಾಮೀನು ಸಿಕ್ಕಿದ ತೃಪ್ತಿ ಸುರೇಶ್  ಅವರದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್