ಜಿಲ್ಲಾ ಸುದ್ದಿ

ಸೂಲಿಬೆಲೆ ಅಂಕಣಕ್ಕೆ ಖಂಡನೆ

Manjula VN

ಬೆಂಗಳೂರು: ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಯೇಸು ಕ್ರಿಸ್ತನ ಬಗ್ಗೆ ಆಧಾರ ರಹಿತವಾಗಿ ದಿನ ಪತ್ರಿಕೆಯೊಂದರ ಅಂಕಣದಲ್ಲಿ ಬರೆಯುವ ಮೂಲಕ ಅಸಹಿಷ್ಣುತೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ತೀವ್ರವಾಗಿ ಖಂಡಿಸಿದೆ.

ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೌನ್ಸಿಲ್‍ನ ರಾಜ್ಯಧ್ಯಕ್ಷ ಸಿ.ರಾಮು ಮಾತನಾಡಿ, ಚಕ್ರವರ್ತಿ ಸೂಲಿಬೆಲೆಯವರು ಅಂಕಣದಲ್ಲಿ `ಯೇಸು ಕ್ರಿಸ್ತ ತಮ್ಮ 14ನೇ ವಯಸ್ಸಿನಲ್ಲಿ ಭಾರತಕ್ಕೆ ಬಂದು ಬುದ್ದನ ಅನುಯಾಯಿಗಳಿಂದ ಆಧ್ಯಾತ್ಮಿಕ ಭೋದನೆ ಕಲಿತಿದ್ದಾರೆ ಎಂದು ಕಲ್ಪಿತವಾಗಿ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಕಣದಲ್ಲಿ ಕ್ರಿಸ್ತನ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಅಂಕಣದಲ್ಲಿ ಬರೆದಿರುವ ಈ ಹೇಳಿಕೆ ಪುರಾವೆ ರಹಿತ ಮತ್ತು ಅಧ್ಯಯನ ರಹಿತವಾಗಿ ಕೂಡಿದೆ ಅಲ್ಲದೆ ಕ್ರಿಸ್ತನ ಬಗ್ಗೆ ಅವರಿಗೆ ಸರಿಯಾಗಿ ಗೊತ್ತಿಲ್ಲದೆ ಬರೆಯಲಾಗಿದೆ. ಇದರಿಂದ ಕ್ರೈಸ್ತ ಧರ್ಮಕ್ಕೆ ಅಪಮಾನ ಮಾಡಿದಂತಾಗಿದೆ. ಹಾಗೆಯೇ ಇದು ಧಾರ್ಮಿಕ ನಿಂದನೆ ಹಾಗೂ ಅಸಹಿಷ್ಣುತೆಯ ಪ್ರತೀಕವಾಗಿದೆ ಎಂದು ಪ್ರಾತಿಪಾದಿಸಿದರು. ದಲಿತ ಕ್ರಿಶ್ಚಿಯನ್ ಒಕ್ಕೂದ ಸಂಚಾಲಕ ಡಾ.ಮನೋಹರ್ ಚಂದ್ರ ಪ್ರಕಾಶ್ ಮಾತನಾಡಿದರು.

SCROLL FOR NEXT