ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಡಾ.ಎಂ.ವೀರಪ್ಪ ಮೊಯ್ಲಿ, ಡಾ.ದೇ.ಜವರೇಗೌಡ, ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತುಕತೆ. 
ಜಿಲ್ಲಾ ಸುದ್ದಿ

ಮಠಗಳು ಜಾತ್ಯತೀತವಾಗಿ ಕೆಲಸ ಮಾಡಲಿ

`ಸಮಾಜದಲ್ಲಿ ಎಲ್ಲಿಯವರೆಗೆ ಮಠಗಳಿರುತ್ತವೋ ಅಲ್ಲಿಯವರೆಗೂ ಜಾತಿಗಳಿರುತ್ತವೆ. ಮಠಗಳು ಜಾತ್ಯತೀತವಾಗಿ ಕೆಲಸ ಮಾಡಬೇಕು. ಮಠಗಳು ಅಸ್ಪೃಶ್ಯರನ್ನೂ ತನ್ನವರನ್ನಾಗಿ ಉದಾರತೆಯಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು ಹಿರಿಯ ಸಾಹಿತಿ ಹಾಗೂ ವಿಶ್ರಾಂತ...

ಬೆಂಗಳೂರು: `ಸಮಾಜದಲ್ಲಿ ಎಲ್ಲಿಯವರೆಗೆ ಮಠಗಳಿರುತ್ತವೋ ಅಲ್ಲಿಯವರೆಗೂ ಜಾತಿಗಳಿರುತ್ತವೆ. ಮಠಗಳು ಜಾತ್ಯತೀತವಾಗಿ ಕೆಲಸ ಮಾಡಬೇಕು. ಮಠಗಳು ಅಸ್ಪೃಶ್ಯರನ್ನೂ ತನ್ನವರನ್ನಾಗಿ ಉದಾರತೆಯಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಡಾ.ದೇ. ಜವರೇಗೌಡ ಹೇಳಿದರು.

ಬೆಂಗಳೂರು ನಾರ್ತ್ ಎಜುಕೇಷನ್ ಸೊಸೈಟಿ ಹಾಗೂ ಡೆವಲಪ್ ಮೆಂಟ್ ಫೋರಂ ಶನಿವಾರ ಆಯೋಜಿಸಿದ್ದ ಡಾ.ಎಂ.ವೀರಪ್ಪ ಮೊಯ್ಲಿಯವರ ದ್ರೌಪದಿ ಸಿರಿಮುಡಿ ಪರಿಕ್ರಮಣ-ನೆಲೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಾಹಿತಿಗಳು ಸಮಾಜದ ಅಂಧತ್ವ ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ದ್ರೌಪದಿ ಸಿರಿಮುಡಿ ಪರಿಕ್ರಮಣ ಲೇಖಕನ ಆಧುನಿಕ ಸಂವೇದನೆ ಮಿಡಿಯುವ ಕೃತಿ ಎಂದರು.

ಇದು ಮಹಾಭಾರತದಿಂದ ಪ್ರತ್ಯೇಕವಾಗಿ ಉಳಿದಿದೆ. ಜಗತ್ತಿನಲ್ಲಿ ವಿವಿಧ ಮಹಾಕಾವ್ಯಗಳು ರಚನೆಯಾದಂತೆ ತಟಸ್ಥಗೊಂಡವು. ಆದರೆ, ರಾಮಾಯಣ-ಮಹಾಭಾರತ ಕಾವ್ಯಗಳು ಇಂದಿಗೂ ಬೆಳೆಯುತ್ತಿವೆ. ಸ್ತ್ರೀಕೇಂದ್ರಿತವಾದ ಕಾವ್ಯಗಳು ಅಪರೂಪ. ಸಮಾಜ ಉದ್ಧಾರವಾಗಬೇಕಾದರೆ ಸ್ತ್ರೀ ಶಕ್ತಿ ಅಗತ್ಯವೆಂದು ಪರಿಗಣಿಸಿ ಇದನ್ನು ಬರೆದಿರುವುದು ಶ್ಲಾಘನೀಯ ಎಂದ ಅವರು, ಮೊಯ್ಲಿ ಯಕ್ಷಗಾನ ಹಿನ್ನೆಲೆಯಿಂದ ಬೆಳೆದು ಬಂದವರು. ಯಕ್ಷಗಾನ ಕ್ಷೇತ್ರದಲ್ಲಿ ಬಳಸುವ ಭಾಷೆ ಗಂಡು ಭಾಷೆ. ಆದರೆ, ಕೃತಿಯಲ್ಲಿ ಅವರ ಭಾಷೆ ಸರಳವಾಗಿದ್ದು, ಇದು ಕನ್ನಡ ಸಾಹಿತ್ಯಕ್ಕೆ ಹೊಸದೊಂದು ಕೊಡುಗೆಯಾಗಿದೆ ಎಂದರು.

ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಾವು ಲೇಖಕರು ಅಧಿಕಾರದಲ್ಲಿ ಇರುವವರೆಗೂ ಅಂತರ ಕಾಯ್ದುಕೊಂಡಿದ್ದವೆ. ಆ ಲೆಕ್ಕಾಚಾರದಲ್ಲಿ ಶಕ್ತಿಶಾಲಿ ಲೇಖಕರನ್ನು ಅಲಕ್ಷ್ಯ ಮಾಡುತ್ತಿರುವುದು ದುರಂತ. ವಿಭಿನ್ನ ಧಾರೆಯಿಂದ ಬರುವ ಕಸುಬು ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತದೆ. ಈ ನಿಟ್ಟಿನಲ್ಲಿ ಲೇಖಕರ ಸಾಹಿತ್ಯವನ್ನು ವಿಭಿನ್ನವಾಗಿ ಕಾಣಬಹುದು ಎಂದರು.

ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಂವಾದದಲ್ಲಿ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲೇ-ಪುರಂ ಜಿ.ವೆಂಕಟೇಶ್ ಮಾತನಾಡಿ, 21ನೇ ಶತಮಾನದಲ್ಲಿ ಮಹಿಳಾ ಸಬಲೀಕರಣವಾಗಬೇಕು. ಮಹಿಳೆ, ಮಾನಿನಿ, ಹೆಂಗಸು...ಹೀಗೆ ಅನೇಕ ರೀತಿ ಕರೆದರೂ ಅಮ್ಮ, ಮಾತೃ ಎಂಬ ಪದ ಇವೆಲ್ಲಕ್ಕಿಂತ ದೊಡ್ಡದು ಎಂದು ಹೇಳಿದರು.

ಸಾಹಿತ್ಯ ಸಹಕಾರಿ: ಡಾ.ಎಂ.ವೀರಪ್ಪ ಮೊಯ್ಲಿ ತಮ್ಮ ಕೃತಿ ಬಗ್ಗೆ ಮಾತನಾಡಿ, ಯುವ ಜನಾಂಗದಲ್ಲಿ ಹೊಸ ಆಲೋಚನೆ ಮೂಡಬೇಕು. ಅವರಿಗೆ ಒಂದು ರೀತಿಯ ಪುಷ್ಠಿ ನೀಡಬೇಕೆಂದು ಈ ದ್ರೌಪದಿ ಸಿರಿಮುಡಿ ಪರಿಕ್ರಮಣ ರಚಿಸಿದೆ. ರಾಜಕೀಯದಲ್ಲಿ, ಸರ್ಕಾರಿ ಕೆಲಸದ-ಲ್ಲಿದ್ದಾಗ ಕೆಲವೊಂದನ್ನು ಮನಸ್ಸಿದ್ದರೂ ಮಾಡಲಾಗದ ಮನಸ್ಥಿತಿ ಇರುತ್ತದೆ. ಅಧಿಕಾರದಲ್ಲಿದ್ದಾಗ ಅಂದುಕೊಂಡದ್ದನ್ನು ಸಾಧಿಸಲಾಗುವುದಿಲ್ಲ. ಹಾಗೇನಾದರೂ ಮಾಡಿದರೆ ಅದು ಕ್ರಾಂತಿಕಾರಿಯಾಗಿ ಬಿಂಬಿತವಾಗುತ್ತದೆ. ಈ ವೇಳೆ ಮನದ ಇಂಗಿತವನ್ನು ಹೊರಗೆಡವಲು ಸಾಹಿತ್ಯ ಸಹಕಾರಿ ಎಂದು ತಿಳಿಸಿದರು.

ದ್ರೌಪದಿ ಸಿರಿಮುಡಿ ಪರಿಕ್ರಮಣ ಕೃತಿ ಬಗ್ಗೆ ನಡೆದ ಗೋಷ್ಠಿಯಲ್ಲಿ ಮಾತನಾಡಿದ ವಿಮರ್ಶಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಭಾಷೆ, ಶೈಲಿ ಕುರಿತ ಆಲೋಚನೆಗಳಿಗೆ ಈ ಕಾವ್ಯ ಮಹತ್ವ ಪಡೆದಿದೆ. ಆಧುನಿಕತೆಯ ಕಿಟಕಿಯಿಂದ ಪ್ರಾಚೀನತೆಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಹಿರಿಯ ಸಾಹಿತಿ ಡಾ.ಎ.ವಿ.ನಾವಡ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕಾರಣಿ ಎಂಬ ಪೂರ್ವಗ್ರಹ ಇಟ್ಟುಕೊಂಡೇ ಮೊಯ್ಲಿ ಅವರನ್ನು ನಮ್ಮ ಹಿರಿಯ ಸಾಹಿತಿಗಳು ಕಂಡರು. ಈ ರೀತಿಯ ಭೇದದಿಂದ ಭೈರಪ್ಪನವರೂ ಹೊರತಾಗಿಲ್ಲ ಎಂದರು. ಗೋಷ್ಠಿಯಲ್ಲಿ ಡಾ.ಗಣನಾಥ ಶೆಟ್ಟಿ ಯೆಕ್ಕಾರು, ಡಾ.ಎಚ್.ಎಲ್.ಪುಷ್ಪ, ಡಾ.ಬಿ.ಆರ್.ಸತ್ಯನಾರಾಯಣ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, 1500 ವರ್ಷಗಳ ಪರಂಪರೆಯ ದಿಕ್ಕಿನಲ್ಲಿ ದ್ರೌಪದಿಯನ್ನು ಪುನಃ ಕೇಂದ್ರೀಕೃತವಾಗಿ ನಿಲ್ಲಿಸಿರುವ ಪ್ರಯತ್ನ ಶ್ಲಾಘನೀಯ ಎಂದರು.

ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಾ ಶೇಖರ್ ಮಾತನಾಡಿ, ಮನುಷ್ಯನ ವ್ಯಕ್ತಿತ್ವವನ್ನು ಹೇಗೆ ಮನಸ್ಸು ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ರಾಮಾಯಣ-ಮಹಾಭಾರತ ಕಾವ್ಯಗಳು ನಿದರ್ಶನವಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಎನ್‍ಇಎಸ್ ಸಂಸ್ಥೆ ಕಾರ್ಯದರ್ಶಿ ಪ್ರೊ.ಕೆ.ಈ.ರಾಧಾಕೃಷ್ಣ, ಡೆವಲಪ್‍ಮೆಂಟ್ ಫೋರಂ ಅಧ್ಯಕ್ಷ ಡಾ.ಸಿ.ಜಯಣ್ಣ,
ಸಂಸ್ಥೆಯ ಆಡಳಿತ ನಿರ್ವಹಣಾಧಿಕಾರಿ ಪ್ರೊ. ಕೃಷ್ಣಮೂರ್ತಿ ಇದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT