ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಹೆರಿಗೆ ವಾರ್ಡ್ ನ ಚಿತ್ರ(ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಕೊನೆ ಕ್ಷಣ ಆಗಮಿಸಿದ್ದೇ ಕುತ್ತಾಯ್ತು

ಮೈಸೂರಿನ ಚೆಲುವಾಂಬ ಹಾಗೂ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಗರ್ಭಿಣಿಯರ ಸರಣಿ ಸಾವಿಗೆ, ಅವರು ಕೊನೆ ಗಳಿಗೆಯಲ್ಲಿ...

ಬೆಂಗಳೂರು: ಮೈಸೂರಿನ ಚೆಲುವಾಂಬ ಹಾಗೂ ಬೆಂಗಳೂರಿನ ವಾಣಿ ವಿಲಾಸ  ಆಸ್ಪತ್ರೆಯಲ್ಲಿ  ಇತ್ತೀಚೆಗೆ ಸಂಭವಿಸಿದ್ದ ಗರ್ಭಿಣಿಯರ ಸರಣಿ ಸಾವಿಗೆ, ಅವರು ಕೊನೆ     ಗಳಿಗೆಯಲ್ಲಿ ಆಸ್ಪತ್ರೆಗೆ ಬಂದದ್ದೇ ಕಾರಣ ಎಂದು  ತಿಳಿದುಬಂದಿದೆ.

ಸಾವಿಗೆ ಕಾರಣ ಹುಡುಕಲು ನೇಮಿಸಿದ್ದ ಉಭಯ ವಿಚಾರಣಾ ಸಮಿತಿಗಳು ಸರ್ಕಾರಕ್ಕೆ  ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಲಾಗಿದೆ. 2015ರ  ನವೆಂಬರ್ 7 ರಿಂದ 17ರೊಳಗೆ ಈ ಎರಡೂ ಆಸ್ಪತ್ರೆಗಳಲ್ಲಿ ಒಟ್ಟು 20 (ತಲಾ  10) ಗರ್ಭಿಣಿಯರು ಮೃತಪಟ್ಟಿದ್ದರು. ಈ ವಿಚಾರ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದರಿಂದ ಸಾವಿಗೆ ಸೂಕ್ತ ಕಾರಣ ಹುಡುಕಲು ಸರ್ಕಾರ ವಿಚಾರಣಾ ಸಮಿತಿಗಳನ್ನು ರಚಿಸಿತ್ತು. ಚೆಲುವಾಂಬ ಆಸ್ಪತ್ರೆಯಲ್ಲಿ,  ಡಾ. ಶ್ರೀನಿವಾಸಲು,ಡಾ.ರಾಮಲಿಂಗಪ್ಪ, ಡಾ. ವಸಂತ್‍ ಚೌಹಾಣ್ ಅವರನ್ನೊಳಗೊಂಡ ವಿಚಾರಣಾ ಸಮಿತಿ ಹಾಗೂ ವಾಣಿವಿಲಾಸ ಆಸ್ಪತ್ರೆಯಲ್ಲಿ ಡಾ.ಬಿ.ಜಿ. ಲೇಪಾಕ್ಷಿ, ಡಾ.ಸಫಿಯಾ ಶೈಖಾ, ಡಾ.ಜಿ.ಕೆ.ನಳಿನಿ ಅವರನ್ನೊಳಗೊಂಡ ವಿಚಾರಣಾ ಸಮಿತಿಗಳು ಸತತ ಎರಡು  ತಿಂಗಳ ಕಾಲ ಅಧ್ಯಯನ  ನಡೆಸಿ ಅಂತಿಮ ವರದಿ ಸಲ್ಲಿಸಿವೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೈದ್ಯಕೀಯ ಶಿಕ್ಷಣ ಸಚಿವ   ರಣಪ್ರಕಾಶ್ ಪಾಟೀಲ್, ಎರಡೂ ಸಮಿತಿಗಳು ಅಂತಿಮ ವರದಿ ಸಲ್ಲಿಸಿವೆ. ಗರ್ಭಿಣಿಯರ  ಸಾವಿಗೆ ವೆಂಟಿಲೇಟರ್, ಮಾನಿಟರಿಂಗ್ ಕೊರತೆ ಕಾರಣವಲ್ಲ. ಬದಲಾಗಿ ಈ ಎಲ್ಲ ಗರ್ಭಿಣಿಯರು ಪರಿಸ್ಥಿತಿ ಕೈಮೀರುವ ಹೊತ್ತಿನವರೆಗೂ ಆಸ್ಪತ್ರೆಗೆ ಬಾರದೆ  ಅಂತಿಮ ಕ್ಷಣದಲ್ಲಿ  ಬಂದದ್ದೇ ಕಾರಣವಾಗಿದೆ. ಕಾಕತಾಳೀವೆಂಬಂತೆ  ನ.8, 10, 11, 12, 14 ಮತ್ತು 16ನೇ ತಾರೀಖು ನಿರಂತರ ರಜಾ ದಿನಗಳು ಬಂದಿದ್ದವು. ಈ ವೇಳೆ ಆಸ್ಪತ್ರೆಗೆ ಹೆಚ್ಚು ಪ್ರಕರಣಗಳು  ದಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗಿತ್ತು ಎಂದರು. ಸದರಿ ಆಸ್ಪತ್ರೆಗಳಲ್ಲಿ ಐಸಿಯು ಘಟಕ ಉತ್ತಮವಾಗಿಲ್ಲದಿರುವುದು, ವೆಂಟಿಲೇಟರ್, ಮಾನಿಟರಿಂಗ್, ಗಾಳಿ ವಾಹಕ  ಪಂಪ್‍ಗಳು ಹಾಗೂ ಸಿಬ್ಬಂದಿ ಕೊರತೆಯೂ ಮತ್ತೊಂದು ಕಾರಣವಾಗಿವೆ.
ಈ ಕಾರಣಗಳನ್ನು ಆಧರಿಸಿ ಐಸಿಯು ಘಟಕದ ಉನ್ನತೀಕರಣ, ಮತ್ತಷ್ಟು ವೆಂಟಿಲೇಟರ್‍ಗಳ  ಲಭ್ಯತೆ ಒದಗಿಸಲು ಸರ್ಕಾರ ಗಮನ ಹರಿಸಲಿದೆ. ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ  ಇನ್ಫೋಸಿಸ್ ಸಹಭಾಗಿತ್ವದಲ್ಲಿ 6 ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ.  ಟ್ರಾಮಾ ಸೆಂಟರ್‍ಗೆ 38 ವೆಂಟಿಲೇಟರ್ ಒದಗಿಸುವುದು, ಶಸ್ತ್ರಚಿಕಿತ್ಸಾ ಕೊಠಡಿಗೆ ಮೂಲ  ಸೌಕರ್ಯ ಕಲ್ಪಿಸಲು ಸರ್ಕಾರ ಕ್ರಮ ವಹಿಸಲಿದೆ ಎಂದು ಸಚಿವರು ಭರವಸೆ ನೀಡಿದರು.

ಸಾವಿಗೆ ಕಾರಣಗಳಿವು

ವಾಣಿವಿಲಾಸ ಆಸ್ಪತ್ರೆ: ಮೃತ 10 ಗರ್ಭಿಣಿಯರಲ್ಲಿ 8 ಮಂದಿ ಹೆಚ್ಚು ಒತ್ತಡ, ಹೆಲ್ಪ್ ಸಿಂಡ್ರೋಮ್ ರೋಗ ಮತ್ತು ಅಧಿಕ ರಕ್ತಸ್ರಾವದಿಂದ ಸಾವಿಗೀಡಾಗಿದ್ದಾರೆ.ಇವರಿಗೆ ನೀಡಿದ್ದ ಬಯೋಟೋಸಿನ್ ಔಷಧಧಿಯೂ ಗುಣಮಟ್ಟ ಕಳೆದುಕೊಂಡಿದ್ದರಿಂದ ಪರಿಣಾಮಕಾರಿ ಚಿಕಿತ್ಸೆ ಸಿಕ್ಕಿಲ್ಲ.
ಚೆಲುವಾಂಬ ಆಸ್ಪತ್ರೆ: ಆಸ್ಪತ್ರೆಗೆ ದಾಖಲಾಗಿದ್ದ 12 ಗರ್ಭಿಣಿಯರ ಪೈಕಿ 10 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ ಐವರ ಸಾವಿಗೆ ಅ„ಕ ರಕ್ತಸ್ರಾವ, ಚಿಕಿತ್ಸೆಗೆ ದೇಹ ಸ್ಪಂದಿಸದಿರುವುದು ಕಾರಣವಾದರೆ, ಒಬ್ಬ ಗರ್ಭಿಣಿ ಬಿಳಿರಕ್ತ ಕಣಗಳ ಕೊರತೆಯಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಕೊಠಡಿಗಳ ಕೊರತೆ ಕೂಡ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT