ಭರಚುಕ್ಕಿ ಜಲಾಶಯ 
ಜಿಲ್ಲಾ ಸುದ್ದಿ

ಕಾಲು ಜಾರಿಬಿದ್ದು ಭರಚುಕ್ಕಿ ಜಲಪಾತದಲ್ಲಿ ಇನ್ ಫೋಸಿಸ್ ಟೆಕ್ಕಿ ಸಾವು

ವೀಕೆಂಡ್ ಮಸ್ತಿಗಾಗಿ ಸ್ನೇಹಿತರೊಂದಿಗೆ ತೆರಳಿದ ಟೆಕ್ಕಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಬಳಿಯಿರುವ ...

ಕೊಳ್ಳೇಗಾಲ: ವೀಕೆಂಡ್ ಮಸ್ತಿಗಾಗಿ ಸ್ನೇಹಿತರೊಂದಿಗೆ ತೆರಳಿದ ಟೆಕ್ಕಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಬಳಿಯಿರುವ ಶಿವನ ಸಮುದ್ರದ ಭರಚುಕ್ಕಿ ಜಲಪಾತದಲ್ಲಿ ನಡೆದಿದೆ. ನೇಹಾ  ಮೃತಪಟ್ಟ ಟೆಕ್ಕಿ.

ಜಾರ್ಖಂಡ್ ಮೂಲದ ಈಕೆ ಮೈಸೂರಿನ ಇನ್ಫೋಸಿಸ್‍ ನಲ್ಲಿ ತರಬೇತಿ ಪಡೆಯುತ್ತಿದ್ದಳು.  ವೀಕೆಂಡ್ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಭರಚುಕ್ಕಿಗೆ ತೆರಳಿದ್ದಳು ಎನ್ನಲಾಗಿದೆ.

ಭಾನುವಾರ ಸ್ನೇಹಿತರೊಂದಿಗೆ ಚಾಮರಾಜನಗರ ಕೊಳ್ಳೆಗಾಲ ಬಳಿ ಇರುವ ಶಿವನ ಸಮುದ್ರದ ಭರಚುಕ್ಕಿ ಜಲಪಾತಕ್ಕೆ ತೆರಳಿದ್ದರು. ಜಲಪಾತ ವೀಕ್ಷಿಸಿದ ಬಳಿಕ ಸಂಜೆ ನೀರಿನಲ್ಲಿ ಆಟವಾಡುತ್ತಿದ್ದಾಗ ಗವಿಗುಂಡಿ ಬಳಿ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಎಸ್‍ಐ ಮೋಹಿತ್ ಸಹದೇವ್ ಅವರು ತೆರಳಿದ್ದು ಶವದ ಹುಡುಕಾಟ ಮುಂದುವರೆದಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಮಲೇಷ್ಯಾ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಸ್ಟೈಲಿಶ್ ಕಪ್ಪು ಉಡುಪಿನಲ್ಲಿ ಮಿಂಚಿದ ಪಾರ್ವತಿ ತಿರುವೋತ್; ದಂಗಾದ ಅಭಿಮಾನಿಗಳು, Video!

ಬಿಜೆಪಿ ಜಿಲ್ಲಾಧ್ಯಕ್ಷರಿಂದ ನನ್ನ ಮೇಲೆ ಪದೇ ಪದೇ ಅತ್ಯಾಚಾರ: ಉತ್ತರ ಪ್ರದೇಶ ಪಕ್ಷದ ನಾಯಕಿಯ ಗಂಭೀರ ಆರೋಪ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ; ಎಲ್ಲಿದೆ ನ್ಯಾಯ? VHP

ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್