ಬಾಗಲಕೋಟೆ

ನುಡಿ ಬೆಡಗು ಪುಸ್ತಕ ಲೋಕಾರ್ಪಣೆ

ಹುನಗುಂದ: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುವುದು ಅಭಿನಂದನೀಯ ಎಂದು ಕೆಪಿಸಿಸಿ ಸದಸ್ಯ ವಿಜಯಾನಂದ ಕಾಶಪ್ಪನವರ ಹೇಳಿದರು.
ಗುರುವಾರ ಸಾಹಿತ್ಯ ಸಮಾವೇಶದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿನ ನೌಕರರ ಭವನದಲ್ಲಿ ನಡೆದ ಎಸ್ಕೆ ಕೊನೆಸಾಗರ ಅವರ ನುಡಿ ಬೆಡಗು ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಯುವ ಛಾಯಾಗ್ರಾಹಕ ಕಾರ್ತಿಕ ಹೊಸಮನಿ ಸೆರೆ ಹಿಡಿದ ನಾಟಕ ಫೋಟೊ ಹಾಗೂ ತಿರುಪತಿ ಚಲವಾದಿ ಅವರ ವ್ಯಂಗ್ಯ ಚಿತ್ರಗಳ ಪ್ರದರ್ಶನ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಇಳಕಲ್ಲಿನ ಸಮಾಜಿಕ ಕಾರ್ಯಕರ್ತ ನಾಗರಾಜ ಹೊಂಗಲ್, ಹುನಗುಂದ ತಾಲೂಕಿನ ಸಾಹಿತಿಗಳು, ಕಲಾವಿದರು ತಮ್ಮ ಅನನ್ಯ ಕೊಡುಗೆಯಿಂದ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕವಿಗೋಷ್ಠಿ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮಂತಿಕೆ ಪಡೆದಿದೆ. ಅದರಲ್ಲಿ ಹುನಗುಂದ ತಾಲೂಕಿನ ಕೊಡುಗೆ ಸ್ಮರಣಾರ್ಹ. ಇದೊಂದು ಸಾಹಿತ್ಯದ ಟಂಕ ಶಾಲೆ. ಈ ನೆಲದ ಪುಣ್ಯ ಜಿಲ್ಲೆಯ ಅನೇಕರಿಗೆ ತಟ್ಟಿದೆ ಎಂದರು.
ಹಿರಿಯ ಸಾಹಿತಿ ಅಬ್ಬಾಸ ಮೇಲಿನಮನಿ ಮಾತನಾಡಿ, ಕವಿಗಳು ಭ್ರಮೆಯಿಂದ ಹೊರಬಂದು ವಾಸ್ತವಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸಬೇಕೆಂದರು.
ಲಲಿತಾ ಹೊಸಪ್ಯಾಟಿ, ಸಂಗಮೇಶ ಕೋಟಿ, ಸಿದ್ದಲಿಂಗಪ್ಪ ಬೀಳಗಿ, ಮುರ್ತುಜಾಬೇಗಂ ಕೊಡಗಲಿ, ಇಂದುಮತಿ ಪುರಾಣಿಕ, ದಾನೇಶ್ವರಿ ಸಾರಂಗಮಠ, ಬಸವರಾಜ ಗವಿಮಠ ಕವಿತೆ ವಾಚಿಸಿದರು.
ತಾಲೂಕು ಪ್ರಗತಿಪರ ಚಿಂತಕರ ವೇದಿಕೆಯ ಅಧ್ಯಕ್ಷ ಮಹೇಶ ತಿಪ್ಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ, ತಾಲೂಕು ಪ್ರಗತಿಪರ ಚಿಂತಕರ ವೇದಿಕೆಯ ಗೌರವ ಕಾರ್ಯದರ್ಶಿ ಎಸ್.ಜಿ. ಪರೂತಿ, ಜಿ.ಬಿ. ಕಂಬಾಳಿಮಠ, ಚಂದ್ರು ಸರೋದೆ, ಗಣೇಶ ರಾಯಭಾಗಿ ಇದ್ದರು.
ಛಾಯಾಗ್ರಾಹಕ ಕಾರ್ತಿಕ ಹೊಸಮನಿ ಅವರ ಸೆರೆ ಹಿಡಿದ ನಾಟಕ ಫೋಟೊಗಳನ್ನು ಹಾಗೂ ತಿರುಪತಿ ಚಲವಾದಿ ಅವರು ರಚಿಸಿದ ವ್ಯಂಗ್ಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್