ಬೆಂಗಳೂರು ಗ್ರಾಮಾಂತರ

ಅಗ್ನಿ ಅವಘಡ: ಕರು ಸಾವು

ಚನ್ನಪಟ್ಟಣ: ಆಕಸ್ಮಿಕ ಅಗ್ನಿ ಅವಘಡದಲ್ಲಿ ಗುಡಿಸಲು ರಾಗಿಹುಲ್ಲಿನ ಮೆದೆ ಹಾಗೂ ನಾಟಿ ಹಸುವಿನ ಕರು ಸಾವಿಗೀಡಾಗಿರುವ ಘಟನೆ ತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೊಡ್ಡಮ್ಮ ಎಂಬುವರಿಗೆ ಸೇರಿದ ಗುಡಿಸಲಿಗೆ ತಗುಲಿದ ಬೆಂಕಿ ಪಕ್ಕದಲ್ಲೇ ಇದ್ದ ರಾಗಿ ಹುಲ್ಲಿನ ಮೆದೆ ಹಾಗೂ ಕರುವನ್ನು ಬಲಿ ತೆಗೆದುಕೊಂಡಿದ್ದು ಸುಮಾರು 1.50 ಲಕ್ಷ ರು. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಲಾಯಿತಾದರೂ ಅವರು ಬರುವ ವೇಳೆಗೆ ಗುಡಿಸಲು ಸಂಪೂರ್ಣ ಸುಟ್ಟು ಹೋಗಿತ್ತು. ಸ್ಥಳಕ್ಕೆ ತಹಸೀಲ್ದಾರ್ ಅರುಣಪ್ರಭಾ, ಅಕ್ಕೂರು ಠಾಣೆ ಪಿಎಸೈ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಳು ಸಾಗಾಟ: 4 ಲಾರಿ ವಶ
ಚನ್ನಪಟ್ಟಣ: ನಗರದ ಸಾತನೂರು ವೃತ್ತದ ಬಳಿ ಮಂಗಳವಾರ ಮುಂಜಾನೆ  ಪಿಎಸ್‌ಐ ಶರತ್‌ಕುಮಾರ್ ಮತ್ತು ಸಿಬ್ಬಂದಿ ದಾಳಿನಡೆಸಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ವಶಪಡಿಸಿ ಕೊಂಡಿದ್ದಾರೆ. ವಶಪಡಿಸಿ ಕೊಂಡ ಮರಳು ಲಾರಿಗಳನ್ನು ತಹಸೀಲ್ದಾರರ ವಶಕ್ಕೆ ಒಪ್ಪಿಸಿದ್ದು, ಲಾರಿಚಾಲಕರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ: 4 ಬಂಧನ
ಚನ್ನಪಟ್ಟಣ: ಜೂಜು ಅಡ್ಡೆಯ ಮೇಲೆ ದಾಳಿ ಮಾಡಿದ  ಪೂರ್ವಠಾಣೆ ಪೊಲೀಸರು ನಾಲ್ಕು ಮಂದಿ ಜೂಜು ಕೋರರನ್ನು ಬಂಧಿಸಿ ಪಣಕ್ಕಿಟ್ಟಿದ್ದ 1800 ರು. ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಲ್ಲಿನ ಬ್ಲಾಕ್‌ಬರ್ಡ್ ಹಿಂಭಾಗ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿ ಪಡೆದು ದಾಳಿನಡೆಸಿದ ಪೊಲೀಸರು ಜೂಜು ಕೋರರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಗಿ ಮೆದೆಗೆ  ಬೆಂಕಿ: ಅಪಾರ ನಷ್ಟ
ಚನ್ನಪಟ್ಟಣ: ರಾಗಿ ಮೆದೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ70 ಸಾವಿರ ರೂ. ಮೌಲ್ಯದ ರಾಗಿ ಹುಲ್ಲಿನ ಸಮೇತ ಭಸ್ಮವಾಗಿರುವ ಘಟನೆ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶಿವಣ್ಣ ಎಂಬುವರು ಒಕ್ಕಣೆ ಮಾಡಲೆಂದು ಹಾಕಿದ್ದ ರಾಗಿ ಮೆದೆಗೆ ಸೋಮವಾರ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಬೆಳಗಿನ ಜಾವ ಬಂದು ನೋಡುವ ವೇಳೆಗೆ ಮೆದೆ ಸಂಪೂರ್ಣ ಭಸ್ಮವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ