ರಾಮನಗರ: ಜಿಲ್ಲಾ ಮಟ್ಟದ ಚಿಣ್ಣಿಕೋಲು(ಗಿಲ್ಲಿದಾಂಡು) ಸ್ಪರ್ಧೆಯನ್ನು ಮಾಗಡಿ ಪಟ್ಟಣದ ತಿರುಮಲೆಯಲ್ಲಿರುವ ದೇವರ ದಾಸಿಮಯ್ಯ ಉದ್ಯಾನವನದಲ್ಲಿ ಮಾ.31ರಂದು ಆಯೋಜಿಸಲಾಗಿದೆ. ಪ್ರಥಮ ಬಹುಮಾನ ವಿಜೇತ ತಂಡಕ್ಕೆ ಟಗರು ಮತ್ತು ಟ್ರೋಫಿ ನೀಡಲಾಗುವುದು. ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ರು.4 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು.ತಂಡದಲ್ಲಿ ಆರು ಆಟಗಾರರನ್ನು ಸೀಮಿತಗೊಳಿಸಿದ್ದು, ನಾಕೌಟ್ ಮಾದರಿ ಪಂದ್ಯ ನಡೆಯಲಿದೆ. ಉಳಿದಂತೆ ಆಯೋಜಕರ ನಿಬಂಧನೆ ಹಾಗೂ ತೀರ್ಮಾನ ಅಂತಿಮ. ಆಸಕ್ತ ತಂಡಗಳು ಟಿ.ಎನ್.ಮಹೇಶ್, ಮೊ.9886748855, ಟಿ.ವಿ.ನಾಗರಾಜು, ಮೊ.9900328263 ಸಂಪರ್ಕಿಸಿ.