ಬೆಂಗಳೂರು ಗ್ರಾಮಾಂತರ

ಆರು ಫಿಲ್ಟರ್ ಮರಳು ತಯಾರಿಕ ಘಟಕ ನಾಶ

ಚನ್ನಪಟ್ಟಣ:  ತಾಲೂಕಿನ ಗೀಜಗದಾಸನ ದೊಡ್ಡಿ ಗ್ರಾಮದಲ್ಲಿ ಅಕ್ರಮವಾಗಿ ಫಿಲ್ಟರ್ ಮರಳು ತಯಾರಿಸುತ್ತಿದ್ದ  ಘಟಕಗಳ ಮೇಲೆ ದಾಳಿ ನಡೆಸಿದ
ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ 6 ಫಿಲ್ಟರ್ ಮರಳು  ತಯಾರಿಕ ಘಟಕಗಳನ್ನು ನಾಶಪಡಿಸಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತಹಸೀಲ್ದಾರ್ ಅರುಣಪ್ರಭ, ಮರಳು ಫಿಲ್ಟರ್ ಮಾಡುತ್ತಿದ್ದ ಕೇಂದ್ರಗಳನ್ನು ನಾಶಪಡಿಸಿದರಲ್ಲದೆ. ಮರಳು ಫಿಲ್ಟರ್ ಕಾರ್ಯದಲ್ಲಿ ನಿರತವಾಗಿದ್ದ ಒಂದು ಟ್ರ್ಯಾಕ್ಟರ್ ಮತ್ತು ಎರಡು ಬೈಕ್ಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಚಾಲಕ ಸಾವು
ದೇವನಹಳ್ಳಿ; ದೇವನಹಳ್ಳಿ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರೊಂದು ಭಾನುವಾರ ಸಂಜೆ ಬಚ್ಚಹಳ್ಳಿ ಗೇಟ್ ಪ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಚಾಲಕ ಸಾವನ್ನಪ್ಪಿದ್ದಾನೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಇಲ್ಲಿನ ಸಂಚಾರಿ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಸಾವಿಗೀಡಾದ ಕಾರಿನ ಚಾಲಕ ವಿದ್ಯಾರಣ್ಯಪುರದ  ಅರ್ಜುನ್ (27)  ಪೆನೋಸಾನಿಕ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದನು ಎನ್ನಲಾಗಿದ್ದು, ಮತ್ತೋರ್ವ ನಾಗರಬಾವಿಯ ಉಮೇಶ್  ತೀವ್ರಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಸಂಚಾರಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ರಾಜೇಶ್ ಭೇಟಿ ನೀಡಿ ಅತಿಯಾದ ವೇಗ ಮತ್ತು ಅಜಾಗರುಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ಆಶ್ರಯ ಸಮಿತಿಗೆ ನೂತನ ಸದಸ್ಯರ ನೇಮಕ
ಕನಕಪುರ: ಪಟ್ಟಣದ ಆಶ್ರಯ ಸಮಿತಿಗೆ ನೂತನ ಸದಸ್ಯರಾಗಿ ಪದ್ಮಮ್ಮ ಗುರುಶಾಂತಶೆಟ್ಟಿ, ಅಯೂಬ್ಖಾನ್, ಸುಧಾಕರ್ ಹಾಗೂ ವಿಜಯಕುಮಾರ್ ಅವರನ್ನು ನೇಮಕ ಮಾಡಿ ವಸತಿ ಇಲಾಖೆಯ ಅಧೀನ ಕಾರ್ಯದರ್ಶಿ ಶಂಕರಪ್ಪ ಆದೇಶ ಹೊರಡಿಸಿದ್ದಾರೆ. ವಿಪ ಮಾಜಿ ಸದಸ್ಯ ಎಸ್.ರವಿ, ಪುರಸಭಾಧ್ಯಕ್ಷ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಕೆ.ಎನ್. ದಿಲೀಪ್, ಪಟ್ಟಣ ಪ್ರಾಧಿಕಾರದ ಅಧ್ಯಕ್ಷ ವಿಜಯದೇವ್, ವಿ. ಶ್ರೀನಿವಾಸ್ ಅಭಿನಂದಿಸಿದ್ದಾರೆ.
ವಿಶೇಷ ಪೂಜಾ ಕಾರ್ಯಕ್ರಮ
ಕನಕಪುರದ: ಪೇಟೆಬೀದಿಯಲ್ಲಿನ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಆಶಾಢ ಏಕಾದಶಿ, ದ್ವಾದಶಿ ಪ್ರಯುಕ್ತ ವಿಶೇಷ ಪೂಜಾಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜು.8, 9 ರಂದು ಶ್ರೀ ಪಾಂಡುರಂಗ ರುಕ್ಮಿಣಿ, ಶ್ರೀ ವರದರಾಜಸ್ವಾಮಿಗೆ ಅಭಿಷೇಕ, ಪುರಂದರ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!