ಬೆಂಗಳೂರು ಗ್ರಾಮಾಂತರ

ಮುತ್ಯಾಲಮ್ಮ ಪೂಜಾ ಮಹೋತ್ಸವ

ದೊಡ್ಡಬಳ್ಳಾಪುರ: ಇಲ್ಲಿನ ಕುಚ್ಚಪ್ಪನಪೇಟೆಯ ಶ್ರೀಮುತ್ಯಾಲಮ್ಮ ಸೇವಾ ಸಮಿತಿ ನೇತೃತ್ವದಲ್ಲಿ ಸಮಿತಿಯ 2ನೇ ವಾರ್ಷಿಕೋತ್ಸವ ಮತ್ತು ಮುತ್ಯಾಲಮ್ಮ ದೇವಿ ಪೂಜಾ ಮಹೋತ್ಸವ ಕಾರ್ಯಕ್ರಮ 5 ದಿನಗಳ ಕಾಲ ಸಂಭ್ರಮದಿಂದ ನಡೆಯಿತು.
ಬುಧವಾರ ಶ್ರೀಮಾತೆಯನ್ನು ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದು, ದಿನನಿತ್ಯ ಪೇಟೆಯ ವಿವಿಧ ಭಕ್ತಾದಿಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಭಾನುವಾರದವರೆಗೂ ಕಾರ್ಯಕ್ರಮಗಳು ಜರುಗಲಿದ್ದು, ಅನೇಕ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನೂ ಕೂಡ ಹಮ್ಮಿಕೊಳ್ಳಲಾಗಿದೆ.ಲಲಿತಾ ಸಹಸ್ರನಾಮ: ಉತ್ಸವದ ಅಂಗವಾಗಿ ಸುಮಂಗಲಿಯರಿಂದ ಲಲಿತಾ ಸಹಸ್ರನಾಮ ಪಾರಾಯಣ ಕಾರ್ಯಕ್ರಮ ಗುರುವಾರ ನಡೆಯಿತು. ಹತ್ತಾರು ಮಹಿಳೆಯರು ಲಲಿತಾ ಸಹಸ್ರನಾಮವನ್ನು ಶ್ರೀಮಾತೆಯ ಸಮ್ಮುಖದಲ್ಲಿ ಪಾರಾಯಣ ಮಾಡುವ ಮೂಲಕ ಗಮನ ಸೆಳೆದರು. ಅದೇ ರೀತಿ ಸಂಜೆ ದೊಡ್ಡಬಳ್ಳಾಪುರದ ನಾಟ್ಯದರ್ಪಣ ಕಲಾ ಸಂಘದ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುಟಾಣಿ ಮಕ್ಕಳು ಭರತನಾಟ್ಯ, ಜನಪದ ನೃತ್ಯಗಳ ಮೂಲಕ ಪ್ರತಿಭಾ ಅನಾವರಣ ಮಾಡಿದರು. ಖ್ಯಾತ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡುವ ಮೂಲಕ ನೆರೆದಿದ್ದ ಸಭಿಕರನ್ನು ರಂಜಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಮಾರ್ಗದರ್ಶಕರನ್ನು ಅಭಿನಂದಿಸಲಾಯಿತು.ಆರತಿ ಪೂಜೆ: ಶುಕ್ರವಾರ ಶ್ರೀಮುತ್ಯಾಲಮ್ಮ ದೇವಿ ಮತ್ತು ದೊಡ್ಡಬಳ್ಳಾಪುರ ನಗರದೇವತೆ ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಿಯವರಿಗೆ ಆರತಿ ಪೂಜೆ ನಡೆಯಿತು. ಪೇಟೆಯ ಮತ್ತು ಸುತ್ತಮುತ್ತಲ ಪೇಟೆಗಳ ಭಕ್ತಾದಿಗಳು, ವಿಶೇಷವಾಗಿ ಮಹಿಳೆಯರು, ಅಕ್ಕಿಯಾರತಿ, ತಂಬಿಟ್ಟಿನಾರತಿಗಳನ್ನು ತಂದು ಶ್ರೀಮಾತೆಯರಿಗೆ ಬೆಳಗಿ ಹರಕೆ ಸಲ್ಲಿಸಿದರು. ನೂರಾರು ಮಹಿಳೆಯರು ಆರತಿಗಳನ್ನು ಹೊತ್ತು ತಂದು ಅರ್ಪಿಸಿದರು.ಭಕ್ತಿನಮನ: ಖ್ಯಾತ ಗಾಯಕ, ಕರ್ನಾಟಕ ಸಂಸ್ತೃತಿ ಭೂಷಣ ಪುತ್ತೂರು ನರಸಿಂಹನಾಯಕ್ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್