ಕನಕಪುರ: ಕನಕಪುರ ತಾಲೂಕಿನ ಹೊಸಕೋಟೆ ಸಮೀಪದ ಇರುಳಿಗರ ಕಾಲೊನಿಯಲ್ಲಿ ಕುಡಿತದ ಮತ್ತಿನಲ್ಲಿದ್ದ ದಂಪತಿಗಳಿಬ್ಬರೂ ಕಿತ್ತಾಡಿ ಹೆಂಡತಿಯ ಹತ್ಯೆ ನಡೆದಿರುವ ಘಟನೆ ನಡೆದಿದೆ. ಬಸಮ್ಮ(38) ಮೃತರು.
ಈಕೆಯ ಗಂಡ ಬೋರ(48) ದೊಣ್ಣೆಯಿಂದ ಹೊಡೆದು ಹತ್ಯೆಮಾಡಿದ್ದಾನೆ. ಪ್ರತಿನಿತ್ಯ ದಂಪತಿಗಳಿಬ್ಬರೂ ಜೊತೆಯಲ್ಲಿಯೇ ಕುಡಿಯುವ ಅಭ್ಯಾಸವಿದ್ದು, ಕುಡಿಯಲು ಮದ್ಯ ಸಾಕಾಗುತ್ತಿಲ್ಲ ಎಂಬ ವಿಚಾರಕ್ಕೆ ಜಗಳ ಆರಂಭವಾಗಿ ಅದು ತಾರಕಕ್ಕೇರಿ ಮನೆಯ ಪಕ್ಕದಲ್ಲಿನ ಗಿಡಕ್ಕೆ ಒರಗಿಸಿದ್ದ ದೊಣ್ಣೆ ತೆಗೆದುಕೊಂಡು ಬಡಿದು ಹತ್ಯೆ ಮಾಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪಿಎಸ್ಐ ಮಹದೇವ ಸ್ವಾಮಿ ತನಿಖೆ ನಡೆಸಿದ್ದಾರೆ.